Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹಕ್ಕುಗಳ ಅಭಿಯಾನದ ಹೊರತಾಗಿಯೂ ಮಹಿಳೆಯರ...

ಹಕ್ಕುಗಳ ಅಭಿಯಾನದ ಹೊರತಾಗಿಯೂ ಮಹಿಳೆಯರ ವಿರುದ್ಧದ ಪಕ್ಷಪಾತ ಕಡಿಮೆಯಾಗಿಲ್ಲ: ವಿಶ್ವಸಂಸ್ಥೆ ವರದಿ

12 Jun 2023 9:45 PM IST
share
ಹಕ್ಕುಗಳ ಅಭಿಯಾನದ ಹೊರತಾಗಿಯೂ ಮಹಿಳೆಯರ ವಿರುದ್ಧದ ಪಕ್ಷಪಾತ ಕಡಿಮೆಯಾಗಿಲ್ಲ: ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ: ‘ಮೀ ಟೂ’ನಂತಹ ಹಕ್ಕುಗಳ ಅಭಿಯಾನದ ಹೊರತಾಗಿಯೂ ಕಳೆದ ದಶಕದಲ್ಲಿ ಮಹಿಳೆಯರ ವಿರುದ್ಧದ ಪಕ್ಷಪಾತವು ಕಡಿಮೆಯಾಗಿಲ್ಲ. ಸಮಾಜದಲ್ಲಿ ಈಗಲೂ ಪೂರ್ವಾಗ್ರಹಗಳು ಆಳವಾಗಿ ಹುದುಗಿವೆ ಎಂದು  ವಿಶ್ವಸಂಸ್ಥೆ ಸೋಮವಾರ  ವರದಿ ಮಾಡಿದೆ.

ಪುರುಷ ಮತ್ತು ಮಹಿಳೆಯಿಬ್ಬರಲ್ಲೂ ‘ತಾರತಮ್ಯದ ಲಿಂಗ ಸಾಮಾಜಿಕ ರೂಢಿಗಳು ವಿಶ್ವದಾದ್ಯಂತ ಪ್ರಚಲಿತದಲ್ಲಿವೆ. ಸುಮಾರು 90%ದಷ್ಟು ಜನರು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್ಡಿಪಿ) ವಿಶ್ಲೇಷಿಸಿರುವ 7 ತಾರತಮ್ಯಗಳಲ್ಲಿ ಕನಿಷ್ಟ ಒಂದು ಪಕ್ಷಪಾತವನ್ನು ಹೊಂದಿದ್ದಾರೆ’. ಈ ಪೂರ್ವಾಗ್ರಹಗಳು ಪುರುಷರು ಮತ್ತು ಮಹಿಳೆಯರಲ್ಲಿ ವ್ಯಾಪಕವಾಗಿ ಹರಡಿದ್ದು ಪಕ್ಷಪಾತಗಳು ಆಳವಾಗಿ ಹುದುಗಿರುವುದನ್ನು ಮತ್ತು ಮಹಿಳೆಯರು ಹಾಗೂ ಪುರುಷರನ್ನು  ಒಂದೇ ಮಟ್ಟದಲ್ಲಿ ಪ್ರಭಾವಿಸುವುದನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಏಜೆನ್ಸಿಯು ತನ್ನ ಲಿಂಗ ಸಾಮಾಜಿಕ ನಿಯಮಗಳ ಸೂಚ್ಯಂಕ (ಜಿಎಸ್ಎನ್ಐ)ವನ್ನು ನವೀಕರಿಸಿದೆ. ಜಾಗತಿಕ ಸಮೀಕ್ಷೆಯನ್ನು ಬಳಸಿಕೊಂಡು, ರಾಜಕೀಯ, ಆರ್ಥಿಕ, ಶಿಕ್ಷಣ ಮತ್ತು ಸಾಮಾಜಿಕ ಸಮಗ್ರತೆಯ ಮಾಪನಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವದಾದ್ಯಂತ ಮೌಲ್ಯಗಳು ಮತ್ತು ನಂಬಿಕೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅಧ್ಯಯನ ಮಾಡುವ ಅಂತರಾಷ್ಟ್ರೀಯ ಯೋಜನೆ ಇದಾಗಿದೆ.

‘ಮೀ ಟೂ’ನಂತಹ ಮಹಿಳೆಯರ ಹಕ್ಕುಗಳಿಗಾಗಿ ಪ್ರಬಲ ಜಾಗತಿಕ ಮತ್ತು ಸ್ಥಳೀಯ ಅಭಿಯಾನಗಳ ಹೊರತಾಗಿಯೂ ಒಂದು ದಶಕದಲ್ಲಿ ಮಹಿಳೆಯರ ವಿರುದ್ಧದ ಪಕ್ಷಪಾತಗಳಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲದಿರುವುದು ಸೂಚ್ಯಂಕದಲ್ಲಿ ಸ್ಪಷ್ಟವಾಗಿದೆ ಎಂದು ವರದಿ ಹೇಳಿದೆ.

ಉದಾಹರಣೆಗೆ ಜಾಗತಿಕ ಜನಸಂಖ್ಯೆಯ 69%ದಷ್ಟು ಜನರು ಮಹಿಳೆಯರಿಗಿಂತ ಪುರುಷರು ಉತ್ತಮ ರಾಜಕೀಯ ಮುಖಂಡರಾಗುತ್ತಾರೆ ಎಂದು ಈಗಲೂ ನಂಬುತ್ತಾರೆ ಮತ್ತು ಕೇವಲ 27%ದಷ್ಟು ಜನ ಮಾತ್ರ ಪುರುಷರಂತೆ ಮಹಿಳೆಯರೂ ಸಮಾನ ಹಕ್ಕುಗಳನ್ನು ಹೊಂದಿರುವುದು  ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ ಎಂದು ನಂಬುತ್ತಾರೆ. ಪುರುಷರಿಗೆ ಉದ್ಯೋಗಕ್ಕೆ ಹೆಚ್ಚಿನ ಹಕ್ಕು ಇದೆ ಎಂದು 46%ದಷ್ಟು ಜನ ನಂಬುತ್ತಾರೆ, ಪುರುಷರು ಉತ್ತಮ ಉದ್ಯಮಿಗಳಾಗುತ್ತಾರೆ ಎಂದು 43%ದಷ್ಟು ಜನತೆ ಅಭಿಪ್ರಾಯಪಡುತ್ತಾರೆ. ಪುರುಷನು ತನ್ನ ಹೆಂಡತಿಯನ್ನು ಹೊಡೆಯುವುದು ಸಮರ್ಥನೀಯ ಎಂದು 25%ದಷ್ಟು ಜನತೆ ನಂಬಿದ್ದರೆ, ಉನ್ನತ ಶಿಕ್ಷಣ ಪುರುಷರಿಗೆ ಮುಖ್ಯ ಎಂದು 28%ದಷ್ಟು ಜನತೆ ನಂಬಿದ್ದಾರೆ.

ಪೂರ್ವಾಗ್ರಹಗಳು ಮಹಿಳೆಯರಿಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡಿದೆ. ಪಕ್ಷಪಾತದ ಲಿಂಗ ಸಾಮಾಜಿಕ ರೂಢಿಗಳನ್ನು ನಿಭಾಯಿಸದೆ ನಾವು ಲಿಂಗ ಸಮಾನತೆ ಅಥವಾ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದಿಲ್ಲ ಎಂದು ವರದಿ ಹೇಳಿದೆ.

ಮಾನವ ಅಭಿವೃದ್ಧಿಯ ಮಾಪನಗಳು ಕುಸಿಯುತ್ತಿವೆ ಎಂದೂ ವಿಶ್ವಸಂಸ್ಥೆ ವರದಿ ಮಾಡಿದೆ. ಮಹಿಳೆಯರ ಹಕ್ಕುಗಳನ್ನು ದುರ್ಬಲಗೊಳಿಸುವ ಸಾಮಾಜಿಕ ನಿಯಮಗಳು ಸಮಾಜಕ್ಕೆ ಹೆಚ್ಚು ವ್ಯಾಪಕ ಹಾನಿಕಾರಕವಾಗಿದ್ದು ಮಾನವ ಅಭಿವೃದ್ಧಿಯ ವಿಸ್ತರಣೆಯನ್ನು ಕುಂಠಿತಗೊಳಿಸುತ್ತದೆ. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಖಾತರಿಪಡಿಸುವುದರಿಂದ ಪ್ರತಿಯೊಬ್ಬರಿಗೂ ಪ್ರಯೋಜನವಿದೆ ಎಂದು ಯುಎನ್ಡಿಪಿಯ ಮಾನವ ಅಭಿವೃದ್ಧಿ ವರದಿ ಕಚೇರಿಯ ನಿರ್ದೇಶಕ ಪೆಡ್ರೋ ಕಾನ್ಸಿಯಕೊ ಹೇಳಿದ್ದಾರೆ.

share
Next Story
X