ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯಲ್ಲಿ 14,624 ಅಭ್ಯರ್ಥಿಗಳು ತೇರ್ಗಡೆ

ಹೊಸದಿಲ್ಲಿ: 2023ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯಲ್ಲಿ 14,600ಕ್ಕೂ ಅಧಿಕ ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಫಲಿತಾಂಶವನ್ನು ಕೇಂದ್ರ ಲೋಕ ಸೇವಾ ಆಯೋಗ (UPSC)ವು ಸೋಮವಾರ ಪ್ರಕಟಿಸಿದೆ.
ಭಾರತೀಯ ಆಡಳಿತಾತ್ಮಕ ಸೇವೆ (IAS), ಭಾರತೀಯ ವಿದೇಶ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS)ಗಳಿಗಾಗಿ ಅಧಿಕಾರಿಗಳನ್ನು ಆರಿಸಲು ಪ್ರತಿ ವರ್ಷ ನಾಗರಿಕ ಸೇವೆಗಳ ಪರೀಕ್ಷೆಯನ್ನು ಪ್ರಾಥಮಿಕ, ಪ್ರಧಾನ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ.
2023ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಯನ್ನು ಮೇ 28ರಂದು ನಡೆಸಲಾಗಿತ್ತು.
ತೇರ್ಗಡೆಗೊಂಡಿರುವ ಅಭ್ಯರ್ಥಿಗಳ ಸೀರಿಯಲ್ ಸಂಖ್ಯೆಗಳು, ರೋಲ್ ನಂಬರ್ಗಳು ಮತ್ತು ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಯುಪಿಎಸ್ಸಿ ವೆಬ್ಸೈಟ್ನಲ್ಲಿ ಹಾಕಲಾಗಿದೆ. ಅದರ ಪ್ರಕಾರ, 14,624 ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
Next Story





