ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ತೇಜಶ್ರೀ ನಿಧನ

ಮಂಗಳೂರು: ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ತೇಜಶ್ರೀ (32) ಅನಾರೋಗ್ಯಕ್ಕೀಡಾಗಿ ಸೋಮವಾರ ನಿಧನರಾಗಿದ್ದಾರೆ.
ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮಾದರಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕೊನೆಯ ಮಗು ಸುಜ್ಞಾಸ್ ಹೃದಯ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಆಕೆ ಮಾದರಿ ಮೇಲ್ವಿಚಾರಕಿಯಾಗಿ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ತೇಜಶ್ರೀಯವರಂತಹ ಸಮಾಜ ಸೇವಕಿ, ಸ್ವಚ್ಛತಾ ಸೇನಾನಿಯ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಕುಟಂಬಕ್ಕೆ ಸರಕಾರದ ನೆರವಿನ ಅಗತ್ಯವಿದೆ ಎಂದು ದ.ಕ ಜಿಲ್ಲಾ ನರೇಗಾ ಯೋಜನೆಯ ಮಾಜಿ ಒಂಬುಡ್ಸಮನ್ ಶೀನ ಶೆಟ್ಟಿ ತಿಳಿಸಿದ್ದಾರೆ.
Next Story