25 ತಿಂಗಳಲ್ಲೇ ಕನಿಷ್ಠ ಮಟ್ಟ: ಶೇ.4.25ಕ್ಕೆ ಕುಸಿದ ಚಿಲ್ಲರೆ ಹಣದುಬ್ಬರ

ಹೊಸದಿಲ್ಲಿ: ಪ್ರಮುಖವಾಗಿ ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಇಳಿಕೆಯಿಂದಾಗಿ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು 25 ತಿಂಗಳ ಕನಿಷ್ಠ ಮಟ್ಟವಾದ ಶೇ.4.25ಕ್ಕೆ ಕುಸಿದಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ಆಧಾರಿತ ಚಿಲ್ಲರೆ ಹಣದುಬ್ಬರವು ಸತತ ನಾಲ್ಕನೇ ತಿಂಗಳಿಗೆ ಆರ್ಬಿಐನ ಶೇ.6ರ ಗರಿಷ್ಠ ಮಿತಿಯೊಳಗಿದೆ.
2021 ಎಪ್ರಿಲ್ನಲ್ಲಿ ಶೇ.4.23ರಷ್ಟಿದ್ದ,ಚಿಲ್ಲರೆ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇ.4.25ರಷ್ಟಿದೆ. ಇದು ಏಪ್ರಿಲ್ 2021ರ ಬಳಿಕ ಕನಿಷ್ಠ ಮಟ್ಟವಾಗಿದೆ.
ಸರಕಾರವು ಚಿಲ್ಲರೆ ಹಣದುಬ್ಬರವು ಶೇ.2ರಿಂದ ಶೇ.6ರ ನಡುವೆ ಇರುವಂತೆ ನೋಡಿಕೊಳ್ಳುವ ಹೊಣೆಯನ್ನು ಆರ್ಬಿಐಗೆ ವಹಿಸಿದೆ.
Next Story





