ತಾಮ್ರದ ತಂತಿ ಪಟ್ಟಿ ಕಳವು ಪ್ರಕರಣ: ಓರ್ವನ ಬಂಧನ

ಮಂಗಳೂರು, ಜೂ.13: ನಗರದ ಫ್ಲ್ಯಾಟ್ ಒಂದರಿಂದ ತಾಮ್ರದ ತಂತಿ ಪಟ್ಟಿ ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಅಳಿಕೆಯ ಜಯಂತ್ ವರ್ಷ ಎಂಬಾತನನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಾಮ್ರದ ತಂತಿ ಪಟ್ಟಿ ಕಳವು ಆರೋಪದಲ್ಲಿ ಪೊಲೀಸರು ಜಯಂತ್‌ನನ್ನು ಸೋಮವಾರ ಬೆಳಗ್ಗೆ 8 ಗಂಟೆಗೆ ಪಂಪುವೆಲ್ ಬಳಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story





