ಗಾಂಜಾ ಪ್ರಕರಣ: 4 ಮಂದಿ ಸೆರೆ

ಸುರತ್ಕಲ್, ಜೂ.12: ಇಲ್ಲಿನ ಮುಕ್ಕ ಡಿಕ್ಸಿ ವೇಬ್ರಿಡ್ಜ್ ಬಳಿ ಸಿಗರೇಟಿನಲ್ಲಿ ಗಾಂಜಾ ಸೇರಿಸಿ ಸೇದುತ್ತಿದ್ದ 4 ಮಂದಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಾಟಿಪಳ್ಳ ನಿವಾಸಿ ಪ್ರೀತಮ್(31), ಮಧ್ಯ ದೇವಸ್ಥಾನದ ಬಳಿಯ ನಿವಾಸಿ ಸುಕುಮಾರ, ಕಾಟಿಪಳ್ಳ ಪ್ರಗತಿ ನಗರ ನಿವಾಸಿ ನಿತ್ಯಾನಂದ (30), ಸುರತ್ಕಲ್ ತಡಂಬೈಲು ನಿವಾಸಿ ಜೀವನ್ (28) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರು ಮುಕ್ಕ ಡಿಕ್ಸಿ ವೇಬ್ರಿಡ್ಜ್ ಬಳಿ ಎರಡು ದ್ವೀಚಕ್ರ ವಾಹನದಲ್ಲಿ 4 ಜನರು ಕುಳಿತುಕೊಂಡು ಸಿಗರೇಟ್ ಸೇದುತ್ತಿದ್ದರು. ರೌಂಡ್ಸ್‌ನಲ್ಲಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರದೀಪ್ ಟಿ.ಆರ್ ಅವರು ಅನುಮಾಗೊಂಡು ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಇದರಿಂದ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಗಾಂಜಾ ಸೇದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಮಂದಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂದಿದ್ದಾರೆ.





