ಎಟಿಪಿ ರ‍್ಯಾಂಕಿಂಗ್ : ಫ್ರೆಂಚ್ ಓಪನ್ ಟ್ರೋಫಿ ಗೆಲುವಿನೊಂದಿಗೆ ನಂ.1ಸ್ಥಾನ ಕ್ಕೆ ಜೊಕೊವಿಕ್ ವಾಪಸ್

ಪ್ಯಾರಿಸ್,: ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿ ದಾಖಲೆಯ 23ನೇ ಗ್ರಾನ್‌ಸ್ಲಾಮ್ ಟ್ರೋಫಿ ಎತ್ತಿ ಹಿಡಿದ ನೊವಾಕ್ ಜೊಕೊವಿಕ್ ಸೋಮವಾರ ಬಿಡುಗಡೆಯಾದ ಎಟಿಪಿ ರ‍್ಯಾಂಕಿಂಗ್ ನಲ್ಲಿ ಮತ್ತೊಮ್ಮೆ ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ. ಟೆನಿಸ್ ರ‍್ಯಾಂಕಿಂಗ್ ನಲ್ಲಿ ಈಗಾಗಲೇ ಹೆಚ್ಚು ವಾರಗಳನ್ನು ಕಳೆದಿರುವ ಜೊಕೊವಿಕ್ ಈ ವರ್ಷದ ಎರಡನೇ ಪ್ರಮುಖ ಟೂರ್ನಮೆಂಟ್ ಫ್ರೆಂಚ್ ಓಪನ್ ಆರಂಭವಾಗುವ ಹೊತ್ತಿಗೆ 3ನೇ ರ್ಯಾಂಕಿನಲ್ಲಿದ್ದರು. ಒಂದು ವರ್ಷದ ಹಿಂದೆ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ್ದ ಜೊಕೊವಿಕ್ ಇದೀಗ ಮೂರನೇ ಬಾರಿ ಪ್ಯಾರಿಸ್‌ನಲ್ಲಿ ಚಾಂಪಿಯನ್ ಟ್ರೋಫಿ ಜಯಿಸಿ ನಂ.1 ಸ್ಥಾನಕ್ಕೆ ಏರಿದ್ದಾರೆ.
ಸೆಮಿ ಫೈನಲ್‌ನಲ್ಲಿ ಅಲ್ಕರಾಝ್‌ರನ್ನು ಸೋಲಿಸಿದ್ದ ಜೊಕೊವಿಕ್ ರವಿವಾರ ನಡೆದ ಫೈನಲ್‌ನಲ್ಲಿ ಕಾಸ್ಪರ್ ರೂಡ್‌ಗೆ ಸೋಲುಣಿಸಿದ್ದರು.
Next Story





