Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಉತ್ತರಕಾಶಿ: ಪಸ್ಮಂದಾ ಮುಸ್ಲಿಮರಿಗೆ...

ಉತ್ತರಕಾಶಿ: ಪಸ್ಮಂದಾ ಮುಸ್ಲಿಮರಿಗೆ ಬಿಜೆಪಿಯಿಂದ ಮೋಸ !

ಅಜಾಝ್ ಅಶ್ರಫ್ - mid-day.comಅಜಾಝ್ ಅಶ್ರಫ್ - mid-day.com13 Jun 2023 4:18 PM IST
share
ಉತ್ತರಕಾಶಿ: ಪಸ್ಮಂದಾ ಮುಸ್ಲಿಮರಿಗೆ ಬಿಜೆಪಿಯಿಂದ ಮೋಸ !

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಪುರೋಲಾ ಎಂಬ ಪಟ್ಟಣದಲ್ಲಿ ನಡೆಯುತ್ತಿರುವ ಜನಾಂಗೀಯ ದಾಳಿಗಳು, ಪಸ್ಮಂದಾ ಮುಸ್ಲಿಮರನ್ನು (ಹಿಂದುಳಿದ ಜಾತಿಗಳು) ತಮ್ಮಡೆಗೆ ಸೆಳೆಯುವ ಅಥವಾ ಓಲೈಸುವ ಬಿಜೆಪಿಯ ಕಾರ್ಯಸೂಚಿಯು ಕೇವಲ ತಂತ್ರಗಾರಿಕೆ ಮಾತ್ರ ಎನ್ನುವುದನ್ನು ಸೂಚಿಸಿವೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಆಂತರಿಕ ಶತ್ರುಗಳು ಎಂದು ಆರೆಸ್ಸೆಸ್ ನ ಗೋಲ್ವಾಲ್ಕರ್‌ ಸಿದ್ದಾಂತಕ್ಕೆ ಹಾಗೂ ಹಿಂದುತ್ವವಾದಿ ಬ್ರಿಗೇಡ್‌ಗಳ ನಂಬಿಕೆಗೆ 'ಪಸ್ಮಂದಾ ಮುಸ್ಲಿಮರು' ಕೂಡಾ ಹೊರತಲ್ಲ ಎನ್ನುವುದನ್ನು ಪುರೋಲಾದಲ್ಲಿ ನಡೆಯುತ್ತಿರುವ ಘಟನೆಗಳು ಸಾಬೀತುಪಡಿಸಿವೆ.

ಮೇ 26 ರಂದು ಉಬೈದ್ ಖಾನ್ ಮತ್ತು ರಾಜಿಂದರ್ ಸೈನಿ ಎಂಬವರನ್ನು ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ದಿನದಿಂದ ಪುರೋಲಾ ಪಟ್ಟಣದಲ್ಲಿ ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ಪ್ರಕರಣವನ್ನು 'ಲವ್‌ ಜಿಹಾದ್‌' ಎಂದು ಬಿಂಬಿಸಲಾಗಿದ್ದು, ಹಿಂದುತ್ವವಾದಿ ಗುಂಪುಗಳು ಇದನ್ನು ಬಳಸಿ ಮುಸ್ಲಿಮರ ವಿರುದ್ಧ ಜನಾಂಗೀಯ ದಾಳಿ ನಡೆಸಲು ಆರಂಭಿಸಿದ್ದಾರೆ. 

ಮೇ 27 ರಂದು, ಹಿಂದುತ್ವ ಬ್ರಿಗೇಡ್‌ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸಣ್ಣಪುಟ್ಟ ಮುಸ್ಲಿಂ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ. ಹಿಂದುತ್ವವಾದಿ ಗುಂಪುಗಳ ಅಟ್ಟಹಾಸದಿಂದ ಆತಂಕಕ್ಕೊಳಗಾಗಿರುವ ಹಲವಾರು ಮುಸ್ಲಿಮರು ಪಟ್ಟಣವನ್ನು ತೊರೆದು ವಲಸೆ ಹೋಗಿದ್ದರೆ, ಉಳಿದವರು ಭಯದಲ್ಲಿ ಅಡಗಿಕೊಂಡಿದ್ದಾರೆ.

ಮೇ 29 ರಂದು ನಡೆದ ಇನ್ನೊಂದು ರ್ಯಾಲಿಯಲ್ಲಿ ಹಿಂದುತ್ವವಾದಿ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳನ್ನು ಗುರಯಾಗಿಸಿ ಬ್ಯಾನರ್‌ ಫ್ಲೆಕ್ಸ್‌ಗಳನ್ನು ಹರಿದು, ಪುರೋಲಾವನ್ನು ಲವ್‌ ಜಿಹಾದ್‌ ಮುಕ್ತ ಮಾಡುತ್ತೇವೆ ಎಂದು ಘೊಷಣೆ ಕೂಗುತ್ತಾ ಸಾಗಿದ್ದಾರೆ. 

ನಾಝಿಗಳು ಯಹೂದಿಯರ ಮನೆ, ಅಂಗಡಿಗಳನ್ನು ಗುರುತು ಮಾಡಿದಂತೆ ಹಿಂದುತ್ವವಾದಿಗಳು ಮುಸ್ಲಿಮ್‌ ವರ್ತಕರ ಅಂಗಡಿಗಳ ಮುಂದೆ ಕಪ್ಪು ಬಣ್ಣದಲ್ಲಿ X ಗುರುತು ಹಾಕಿದ್ದು, ಜೂನ್‌ 15 ರೊಳಗೆ ಖಾಲಿ ಮಾಡಿ ಹೋಗದಿದ್ದರೆ, ಕಾಲವೇ ಉತ್ತರಿಸಲಿದೆ ಎಂದು ಬೆದರಿಕೆ ಹಾಕಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅಲ್ಲದೆ, ಮುಸ್ಲಿಮರಿಗೆ ಬಾಡಿಗೆ ಕೊಟ್ಟಿರುವ ಹಿಂದೂ ಮಾಲಕರಲ್ಲಿ ಅಂಗಡಿ ಖಾಲಿ ಮಾಡಿಸುವಂತೆ ಹಿಂದುತ್ವವಾದಿ ನಾಯಕರು ಬಲವಂತಪಡಿಸಿದ್ದು, ಅದಕ್ಕೆ ಹಲವರು ಒಪ್ಪಿಗೆಯನ್ನೂ ನೀಡಿದ್ದಾರೆ.

ಪುರೋಲಾದಲ್ಲಿರುವ ಮುಸ್ಲಿಮರನ್ನು ಅವರು ನೆಲೆಸಿರುವ ವರ್ಷಗಳ ಆಧಾರದ ಮೇಲೆ ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲ ವರ್ಗವು ಮೂರು ತಲೆಮಾರುಗಳಿಂದ ಇದೇ ಪಟ್ಟಣದಲ್ಲಿ ವಾಸಿಸುತ್ತಿರುವ ಕುಟುಂಬಗಳು.  ಎರಡನೆಯ ವರ್ಗದವರು, ಐದರಿಂದ 15 ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿರುವವರು. ಮೂರನೇ ವರ್ಗ ವಲಸೆ ಕಾರ್ಮಿಕರು. ಬೆನ್ನು ಮುರಿದು ದುಡಿಯುವಂತಹ ಕೆಲಸಗಳಿಗಾಗಿ ಮೂರನೆಯ ವರ್ಗದ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತ ಹಿಂದೂಗಳಿಗೆ ಬೇಕಿರುವುದರಿಂದ ಅವರನ್ನು ಹೊರಹಾಕುವ ಬೆದರಿಕೆಯನ್ನು ಹಿಂದುತ್ವವಾದಿಗಳು ಹಾಕಿಲ್ಲ. 

ವಿಪರ್ಯಾಸ ಎಂದರೆ, ಪುರೋಲಾದಲ್ಲಿರುವವರೆಲ್ಲರೂ ಪಸ್ಮಂದಾ ಮುಸ್ಲಿಮರು ಎಂದು ಸ್ಥಳೀಯರು ಹೇಳುತ್ತಾರೆ. ಆರೋಪಿಯಾಗಿರುವ ಉಬೈದ್‌ ಖಾನ್‌ (ಆತನ ಉಪನಾಮ ಮೇಲ್ಜಾತಿ ಪಠಾಣ ಮುಸಲ್ಮಾನರಂತೆ ಕಂಡರೂ) ಕೂಡಾ ಪಸ್ಮಂದಾ ವರ್ಗದವನೆಂದು ಸ್ಥಳೀಯರು ಹೇಳುತ್ತಾರೆ. 

ಇನ್ನೂ ವಿಪರ್ಯಾಸವೆಂದರೆ, ಅವರಲ್ಲಿ ಬಹುತೇಕ ಮುಸ್ಲಿಮರು ಇಲ್ಲಿ ಬಿಜೆಪಿಯನ್ನು ಬಹುಕಾಲದಿಂದ ಬೆಂಬಲಿಸುತ್ತಾ ಬಂದವರು. ಹಿಂದುತ್ವವಾದಿಗಳು ಅವರನ್ನು ರಕ್ಷಿಸಬಹುದೆಂದು ಅವರು ಭಾವಿಸಿದ್ದರು. ಉತ್ತರಕಾಶಿ ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಾಹಿದ್‌ ಮಲಿಕ್‌ ಕೂಡಾ ಅಂತಹ ಮುಸಲ್ಮಾನರಲ್ಲೊಬ್ಬರು. ಆದರೆ, ಈಗ ಹಿಂದುತ್ವವಾದಿಗಳು ಮುಸ್ಲಿಮರ ವಿರುದ್ಧ ನಡೆಸುತ್ತಿರುವ ದೌರ್ಜನ್ಯವನ್ನು ಕಂಡು ಚಿಂತಿತರಾಗಿರುವ ಮಲಿಕ್‌, ಇನ್ನು ಪುರೋಲಾ ಪಟ್ಟಣಕ್ಕೆ ಮರಳದಿರಲು ನಿರ್ಧರಿಸಿದ್ದಾರೆ. ಪುರೋಲಾ ಮಂಡಲದ ಬಿಜೆಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಮ್‌ ಅಹ್ಮದ್‌ ಬಳಿಯೂ ಅಂಗಡಿ ಖಾಲಿ ಮಾಡುವಂತೆ ಹಿಂದುತ್ವವಾದಿಗಳು ಬೆದರಿಸಿರುವುದರಿಂದ ಅವರು ಡೆಹ್ರಾಡೂನ್‌ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ಅದಾಗ್ಯೂ, ತಮ್ಮದೇ ಪಕ್ಷದ ಕಾರ್ಯಕರ್ತರು, ಮುಖಂಡರು ಅಭದ್ರತೆಯಲ್ಲಿದ್ದರೂ ಬಿಜೆಪಿ ಉನ್ನತ ನಾಯಕರು ಇವರನ್ನು ಇದುವರೆಗೆ ಸಂಪರ್ಕಿಸಿಲ್ಲ. ಪುರೋಲಾ ಪಟ್ಟಣ ಬಿಟ್ಟು ತೆರಳಿರುವವರು ಮರಳುವುದಾದರೆ ಅವರಿಗೆ ಅಗತ್ಯ ಭದ್ರತೆ ನೀಡುವ ಬಗ್ಗೆಯೂ ಇವರು ಭರವಸೆಯನ್ನು ನೀಡಿಲ್ಲ. ಪುರೋಲಾದಲ್ಲಿ ಆಸ್ತಿ ಹೊಂದಿರದ ಮುಸ್ಲಿಮರು ತಮ್ಮ ಸಮುದಾಯ ಬಾಹುಳ್ಯವಿರುವ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರಾದರೂ ಕೋಮುಗಲಭೆಯ ಸಂದರ್ಭಗಳಲ್ಲಿ ಅದು ಪ್ರಯೋಜನಕ್ಕೆ ಬರುವುದಿಲ್ಲ ಎನ್ನುವುದು ಅವರ ಆತಂಕ ನೋಡಿದಾಗ ಅರ್ಥವಾಗುತ್ತದೆ. ಅಲ್ಲದೆ, ಅವರಿಗೆ ಈಗಾಗಲೇ ಬಿಜೆಪಿ ತಮಗೆ ಮೋಸ ಮಾಡಿದೆ ಎಂಬ ಬಲವಾದ ಭಾವನೆ ಬೇರೂರಿದೆ. 

ತಮ್ಮ ಸಮುದಾಯದವನೊಬ್ಬನ ಕ್ರಿಮಿನಲ್‌ ಕೃತ್ಯಕ್ಕೆ ಇಡೀ ಸಮುದಾಯವೇ ಹಿಂದುತ್ವವಾದಿಗಳ ದಾಳಿಗೆ ಗುರಿಯಾಗುತ್ತಿದೆ. ತಮ್ಮ ಪಾಸ್ಮಂಡ ಗುರುತು ಹಾಗೂ ಬಿಜೆಪಿಯೆಡೆಗೆ ಇರುವ ನಿಷ್ಠೆಯೂ ಇದರಿಂದ ತಮಗೆ ರಕ್ಷಣೆ ನೀಡುತ್ತಿಲ್ಲ ಎನ್ನುವುದು ಅವರ ಅಶಂಕೆಗೆ ಕಾರಣವಾಗಿದೆ. ಪಸ್ಮಾಂಡಗಳನ್ನು ಒಳಗೊಳ್ಳುವ ಬಿಜೆಪಿಯ ಕಾರ್ಯತಂತ್ರಗಳೆಲ್ಲವೂ ನಯವಾದ ಮಾತುಗಳ, ಮೋಡಿ ರಾಜಕಾರಣ ಮಾತ್ರವಾಗಿತ್ತು, ಹೊರತು ಇನ್ನೇನು ಅಲ್ಲ.

share
ಅಜಾಝ್ ಅಶ್ರಫ್ - mid-day.com
ಅಜಾಝ್ ಅಶ್ರಫ್ - mid-day.com
Next Story
X