ದ.ಕ.: ಅಬ್ಬರ ಕಳೆದುಕೊಂಡ ಮುಂಗಾರು ಮಳೆ

ಮಂಗಳೂರು, ಜೂ.13: ನಗರ ಸೇರಿದಂತೆ ದ.ಕ.ಜಿಲ್ಲಾದ್ಯಂತ ಮಂಗಳವಾರ ಮುಂಗಾರು ಮಳೆ ಅಬ್ಬರ ಕಳಕೊಂಡಿವೆ. ದಿನವಿಡೀ ಹಗಲು ಬಿಸಿಲು ಮತ್ತು ಸೆಖೆಯ ವಾತಾವರಣವಿತ್ತು.
ಆದರೆ ಬಿಪೊರ್‌ಜೊಯ್ ಚಂಡಮಾರುತದ ಪರಿಣಾಮದಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ತೀವ್ರತೆ ತಗ್ಗಿಸಲು ತೀರದಲ್ಲಿ ಭಾರೀ ಗಾತ್ರದ ಕಲ್ಲುಗಳನ್ನು ಹಾಕುವ ಕೆಲಸ ಮುಂದುವರಿಸಲಾಗಿದೆ.
ರವಿವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಳ್ಳಾಲಕ್ಕೆ ಭೇಟಿ ನೀಡಿ ಕಡಲ್ಕೊರೆತ ತಡೆ ಸಂಬಂಧಿಸಿ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಕಡಲ ತಟಕ್ಕೆ ಕಲ್ಲುಗಳನ್ನು ಹಾಕಲಾಗುತ್ತಿದೆ. ಆದರೂ ಸ್ಥಳೀಯರ ಆತಂಕ ದೂರವಾಗಿಲ್ಲ.
ಜೂ.15ರವರೆಗೆ ಸಮುದ್ರ ಅಲೆಗಳು ತೀರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ತೀರ ಪ್ರದೇಶದ ಜನರು ಮತ್ತು ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.
Next Story