ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಮಂಗಳೂರು: ಅಲ್ಪಸಂಖ್ಯಾತರ ಕಾನೂನು ಪದವೀಧರರಿಂದ 2023-24ನೇ ಸಾಲಿಗೆ ನಾಲ್ಕು ವರ್ಷದ ಅವಧಿಗೆ ಕಾನೂನು ತರಬೇತಿ ಭತ್ತೆ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಬಾರ್ ಕೌನ್ಸಿಲ್‌ನಲ್ಲಿ ನೊಂದಾಯಿತರಾದ ಕಾನೂನು ಪದವೀಧರರಾಗಿದ್ದು, ಸರಕಾರಿ ವಕೀಲರು ಅಥವಾ 20 ವರ್ಷಗಳ ಕಾಲ ಕಡಿಮೆಯಿಲ್ಲದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಕುಟುಂಬದ ವಾರ್ಷಿಕ ಆದಾಯವು 3.50 ಲಕ್ಷ ರೂ. ಮೀರಿರಬಾರದು. 30 ವರ್ಷದೊಳಗಿನ ವಯೋಮಿತಿಯ ಕಾನೂನು ಪದವಿಯನ್ನು ಪೂರ್ಣಗೊಳಿಸಿ 3 ವರ್ಷ ಮೀರಿರಬಾರದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ಪಾಂಡೇಶ್ವರದ ಓಲ್ಡ್‌ಕೆಂಟ್ ರಸ್ತೆಯ, ಮೌಲಾನಾ ಆಝಾದ್ ಭವನದ 2ನೇ ಮಹಡಿಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಕಚೇರಿಯಿಂದ ಪಡೆದು ದಾಖಲೆ ಪತ್ರದ ಜೊತೆಗೆ ಜೂನ್ 30 ರೊಳಗೆ ಸಲ್ಲಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿ ಕಾರಿಯ ಪ್ರಕಟನೆ ತಿಳಿಸಿದೆ.
Next Story