ಸಿರಿಯಾದಲ್ಲಿ ಹೆಲಿಕಾಪ್ಟರ್ ಪತನ: ಅಮೆರಿಕದ 22 ಯೋಧರಿಗೆ ಗಾಯ

ದಮಾಸ್ಕಸ್: ಸಿರಿಯಾದಲ್ಲಿ ಸೋಮವಾರ ತಡರಾತ್ರಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್ನಲ್ಲಿದ್ದ ಅಮೆರಿಕದ 22 ಯೋಧರು ಗಾಯಗೊಂಡಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಈಶಾನ್ಯ ಸಿರಿಯಾದಲ್ಲಿ ಈ ದುರ್ಘಟನೆ ನಡೆದಿದ್ದು ಗಂಭೀರ ಗಾಯಗೊಂಡಿರುವ 10 ಯೋಧರನ್ನು ಉನ್ನತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಲಿಕಾಪ್ಟರ್ನ ಮೇಲೆ ದಾಳಿ ನಡೆದಿಲ್ಲ. ದುರಂತದ ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.
ಮಾರ್ಚ್ನಲ್ಲಿ ಸಿರಿಯಾದಲ್ಲಿ ಅಮೆರಿಕ ಯೋಧರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಇರಾನ್ ಬೆಂಬಲಿತ ಸಶಸ್ತ್ರ ಪಡೆ ನಡೆಸಿದ್ದ ದಾಳಿಯಲ್ಲಿ 23 ಯೋಧರು ತೀವ್ರ ಗಾಯಗೊಂಡಿದ್ದರು.
Next Story