ಜೂನಿಯರ್ ಏಶ್ಯಕಪ್ ಚಾಂಪಿಯನ್ನರಿಗೆ ಬೆಂಗಳೂರಿನಲ್ಲಿ ಸಂಭ್ರಮದ ಸ್ವಾಗತ...

ಬೆಂಗಳೂರು: ಜಪಾನ್‌ನಲ್ಲಿ ಇತ್ತೀಚೆಗೆ ನಡೆದ ಮಹಿಳೆಯರ ಹಾಕಿ ಜೂನಿಯರ್ ಏಶ್ಯಕಪ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಮೊದಲ ಬಾರಿ ಚಾಂಪಿಯನ್ ಆಗಿರುವ ಭಾರತದ ಕಿರಿಯ ಆಟಗಾರ್ತಿಯರು ಮಂಗಳವಾರ ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ನಂತರ ಸಾಯ್ ಕೇಂದ್ರದಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಮೆರವಣಿಗೆಯಲ್ಲಿ ಆಟಗಾರ್ತಿಯರೇ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ಸಾಯ್ ಕೇಂದ್ರದ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ರವಿವಾರ ಜಪಾನ್‌ನಲ್ಲಿ ನಡೆದಿದ್ದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ್ದ ಭಾರತ 4 ಬಾರಿಯ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 2-1 ಅಂತರದಿಂದ ಮಣಿಸಿ ಚೊಚ್ಚಲ ಮಹಿಳೆಯರ ಜೂನಿಯರ್ ಹಾಕಿ ಏಶ್ಯಕಪ್‌ನ್ನು ಮುಡಿಗೇರಿಸಿಕೊಂಡಿತ್ತು.
Next Story





