ಎಎಫ್‌ಐ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಗುರ್ಬಚನ್ ಸಿಂಗ್ ರಾಂಧವಾ ರಾಜೀನಾಮೆ

ಹೊಸದಿಲ್ಲಿ: ಎರಡು ಬಾರಿಯ ಒಲಿಂಪಿಯನ್ ಹಾಗೂ 1962ರ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಆಟಗಾರ ಗುರ್ಬಚನ್ ಸಿಂಗ್ ರಾಂಧವಾ ಅವರು ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ(ಎಎಫ್‌ಐ)ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
18 ವರ್ಷಗಳ ಸೇವೆಗಳ ನಂತರ ಭಾರತದ ಅತ್ಲೆಟಿಕ್ಸ್ ಫೆಡರೇಶನ್‌ನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ. ವಯಸ್ಸಿನ ಕಾರಣಕ್ಕೆ ಶೇ.100ರಷ್ಟು ಕೆಲಸ ಮಾಡಲು ಕಷ್ಟವಾಗುತ್ತಿದೆ. ಭಾರತೀಯ ಅತ್ಲೆಟಿಕ್ಸ್ ತನ್ನ ವಿಕಸನದ ಅತ್ಯಂತ ರೋಚಕ ಹಂತದಲ್ಲಿರುವ ಸಮಯದಲ್ಲಿ ಕಿರಿಯರಿಗೆ ಅಧಿಕಾರವನ್ನು ಹಸ್ತಾಂತರಿಸಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ ಎಂದು ರಾಂಧವಾ ಹೇಳಿದರು.
Next Story





