ರಾಯಚೂರು: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲೇ ಮೃತ್ಯು

ರಾಯಚೂರು, ಜೂ.14: ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ಬುಧವಾರ ವರದಿಯಾಗಿದೆ.
ಮೃತರನ್ನು ಛತ್ತೀಸ್ಗಢ ಮೂಲದವರಾದ ವಿಷ್ಣು (26), ಶಿವರಾಮ್(28), ಬಲರಾಮ್(30) ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ಬೋರ್‌ವೆಲ್ ಕೊರೆದು ಕಾಲುದಾರಿಯಲ್ಲಿಯೇ ರಾತ್ರಿ ಮೂವರು ಮಲಗಿದ್ದರೆನ್ನಲಾಗಿದ್ದು, ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ, ಮೂವರು ಮೇಲೂ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರ: ರಸ್ತೆ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತ್ಯು
Next Story





