Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ಸರ್ಕಾರದ ವಿರುದ್ಧ ಟ್ವಿಟರ್ ಮಾಜಿ...

ಮೋದಿ ಸರ್ಕಾರದ ವಿರುದ್ಧ ಟ್ವಿಟರ್ ಮಾಜಿ ಸಿಇಒ ಮಾಡಿದ ಆರೋಪಕ್ಕೆ ಪುಷ್ಠಿ ನೀಡುವ ದಾಖಲೆ ಹಂಚಿದ ಸಾಕೇತ್ ಗೋಖಲೆ

14 Jun 2023 1:30 PM IST
share
ಮೋದಿ ಸರ್ಕಾರದ ವಿರುದ್ಧ ಟ್ವಿಟರ್ ಮಾಜಿ ಸಿಇಒ ಮಾಡಿದ ಆರೋಪಕ್ಕೆ ಪುಷ್ಠಿ ನೀಡುವ ದಾಖಲೆ ಹಂಚಿದ ಸಾಕೇತ್ ಗೋಖಲೆ

ಹೊಸದಿಲ್ಲಿ: ಭಾರತದಲ್ಲಿ ಟ್ವಿಟರ್‌ ಕಚೇರಿಯನ್ನು ಸ್ಥಗಿತಗೊಳಿಸುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಎಂಬ ಟ್ವಿಟರ್‌ ಮಾಜಿ ಸಿಇಒ ಜಾಕ್‌ ಡೋರ್ಸೆ ಅವರ ಆರೋಪಗಳ ಕುರಿತಂತೆ ಟಿಎಂಸಿ ನಾಯಕ, ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ, ಸರಣಿ ಟ್ವೀಟ್‌ ಮಾಡಿದ್ದು, ಟ್ವಿಟರ್‌ ಬಳಿ ಕೇಂದ್ರ ಸರ್ಕಾರ ಹಲವು ಖಾತೆಗಳ ಮಾಹಿತಿಯನ್ನು ಕೇಳಿತ್ತು ಎಂಬುವುದನ್ನು ಸೂಚಿಸುವ ದಾಖಲೆಯನ್ನು ಹಂಚಿಕೊಂಡಿದ್ದಾರೆ. 

ಜಾಕ್‌ ಡೋರ್ಸೆ ಅವರ ಬೇಹುಗಾರಿಕೆ ಹಾಗೂ ಸೆನ್ಸಾರ್‌ಶಿಪ್‌ ಆರೋಪಗಳನ್ನು ಮೋದಿ ಸರ್ಕಾರವು ಸುಳ್ಳು ಎಂದು ಹೇಳಿ ನಿರಾಕರಿಸಿದೆ, ಆದರೆ, ಟ್ವಿಟರ್‌ ನ ಪಾರದರ್ಶಕತೆ ವರದಿಗಳ ಡೇಟಾವನ್ನು ಆಧರಿಸಿದ ಸತ್ಯ ಇಲ್ಲಿದೆ ಎಂದು ಗೋಖಲೆ ಸರಣಿ ಟ್ವೀಟ್‌ ಮಾಡಿದ್ದಾರೆ.
 
ಸಿಎಎ ವಿರೋಧಿ ಪ್ರತಿಭಟನೆ, ರೈತರ ಪ್ರತಿಭಟನೆ ಹಾಗೂ ಕೋವಿಡ್‌ ಸಂದರ್ಭದಲ್ಲಿ ಸಾವಿರಾರು ಟ್ವಿಟರ್‌ ಬಳಕೆದಾರರ ಮಾಹಿತಿಯನ್ನು ಮೋದಿ ಸರ್ಕಾರವು ಟ್ವಿಟರ್‌ ಬಳಿ ಕೇಳಿತ್ತು ಎಂದು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಕೇತ್‌ ಗೋಖಲೆ ಟ್ವೀಟ್‌ ಮಾಡಿದ್ದಾರೆ. 

2020-2021 ರ (ಸಿಎಎ-ರೈತರ ಪ್ರತಿಭಟನೆ ಉತ್ತುಂಗದಲ್ಲಿದ್ದ) ಅವಧಿಯಲ್ಲಿ ಭಾರತ ಸರ್ಕಾರವು ಜಾಗತಿಕವಾಗಿ ಅತಿ ಹೆಚ್ಚು ಮಾಹಿತಿಗಳನ್ನು ಕೇಳಿದ ಸರ್ಕಾರವಾಗಿದೆ. ಈ ಅವಧಿಯಲ್ಲಿ ಜಾಗತಿಕವಾಗಿ ಸಲ್ಲಿಸಿದ ವಿನಂತಿಗಳಲ್ಲಿ 25% ವಿನಂತಿಗಳನ್ನು ಭಾರತ ಸರ್ಕಾರವೇ ಸಲ್ಲಿಸಿದೆ ಎಂದು ಸಾಕೇತ್‌ ಗೋಖಲೆ ಹೇಳಿದ್ದಾರೆ.

2019 ರ ಜನವರಿ ಮತ್ತು ಡಿಸೆಂಬರ್‌ ನಡುವಿನ ಅವಧಿಯಲ್ಲಿ 1,057 ಖಾತೆದಾರರ ಮಾಹಿತಿ ಹಾಗೂ ವಿವರಗಳನ್ನು ಭಾರತ ಸರ್ಕಾರ ಕೇಳಿದ್ದು, 2020 ರ ಜನವರಿ ಹಾಗೂ ಡಿಸೆಂಬರ್‌ ಅವಧಿಯಲ್ಲಿ ಮೋದಿ ಸರ್ಕಾರವು 5,830 ಟ್ವಿಟರ್‌ ಬಳಕೆದಾರರ ಮಾಹಿತಿ ಹಾಗೂ ವಿವರಗಳನ್ನು ನೀಡುವಂತೆ ಟ್ವಿಟರ್‌ ಸಂಸ್ಥೆಯನ್ನು ಒತ್ತಾಯಿಸಿದೆ ಎಂದು ದತ್ತಾಂಶಗಳೊಡನೆ ಸಾಕೇತ್‌ ಗೋಖಲೆ ಹೇಳಿದ್ದಾರೆ. 

2021 (ಕೋವಿಡ್) ಕಾಲದಲ್ಲಿ ಬಳಕೆದಾರರ ವಿವರಗಳಿಗಾಗಿ ಸಲ್ಲಿಕೆಯಾದ ಒಟ್ಟು ಜಾಗತಿಕ ವಿನಂತಿಗಳಲ್ಲಿ 19% ವಿನಂತಿಗಳನ್ನು ಭಾರತ ಸರ್ಕಾರವೇ ಮಾಡಿದೆ. ಇದೇ ಅವಧಿಯಲ್ಲಿ ಯುನೈಟೆಡ್‌ ಕಿಂಗ್‌ಡಂ 4% ವಿನಂತಿಗಳನ್ನು ಮಾಡಿದ್ದರೆ, ಜರ್ಮನಿ 6%, ಬ್ರೆಝಿಲ್ 2% ವಿನಂತಿಗಳನ್ನಷ್ಟೇ ಮಾಡಿತ್ತು. ಪಾಕಿಸ್ತಾನ ಕೇವಲ 1% ಕಡಿಮೆ ವಿನಂತಿ ಮಾಡಿದೆ ಎಂದು ಸಾಕೇತ್‌ ಗೋಖಲೆ ಟ್ವಿಟರ್‌ ನೀಡಿರುವ ವರದಿಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಇನ್ನು, ಟ್ವಿಟರ್‌ ಖಾತೆಯನ್ನು ಅಮಾನತು ಮಾಡುವುದು ಮತ್ತು ವಿಷಯಗಳನ್ನು ಡಿಲಿಟ್‌ ಮಾಡುವಂತೆಯೂ ಭಾರತ ಸರ್ಕಾರ ನೀಡಿದ ಆದೇಶಗಳ ಮಾಹಿತಿಯನ್ನು ಟ್ವಿಟರ್‌ ನೀಡಿದೆ. ಅದರಲ್ಲಿ ಕೋರ್ಟ್‌ ನಿರ್ದೇಶನದ ಪ್ರಕಾರ ಸರ್ಕಾರ ನೀಡಿದ ಆದೇಶಗಳು ಹಾಗೂ ಲೀಗಲ್‌ ನೋಟಿಸ್‌ ಇಲ್ಲದೆ ಪೊಲೀಸ್‌ ಹಾಗೂ ಸರ್ಕಾರಿ ಏಜನ್ಸಿಗಳು ನೀಡಿದ ಆದೇಶಗಳು ಎಂದು ಎರಡು ವಿಭಾಗ ಮಾಡಬಹುದು. 2020 ರಲ್ಲಿ, ವಿಷಯವನ್ನು ತೆಗೆದುಹಾಕುವಿಕೆ ಹಾಗೂ ಖಾತೆಗಳ ಅಮಾನತು ಸೇರಿದಂತೆ 9,724 ಆದೇಶಗಳನ್ನು ಮೋದಿ ಸರ್ಕಾರ ನೀಡಿದೆ. ಅದರಲ್ಲಿ ಕೇವಲ 19 ಮಾತ್ರ ಕೋರ್ಟ್‌ ನಿರ್ದೇಶನದಂತೆ ಆದೇಶಿಸಲಾಗಿದೆ. ಉಳಿದ ಎಲ್ಲವನ್ನೂ ಮೋದಿ ಸರ್ಕಾರವೇ ಆದೇಶಿಸಿದೆ. 2021 ರಲ್ಲಿ 8,863 ಆದೇಶಗಳನ್ನು ಮೋದಿ ಸರ್ಕಾರ ನೀಡಿದರೆ, ಅದರಲ್ಲಿ ಕೇವಲ 32 ಮಾತ್ರ ಕೋರ್ಟ್‌ ಆದೇಶಗಳಾಗಿತ್ತು ಎಂದು ಗೋಖಲೆ ಟ್ವೀಟ್‌ ನಲ್ಲಿ ಹೇಳಿದ್ದಾರೆ. 

ಭಾರತ ಸರ್ಕಾರವು 12,916 ಟ್ವಿಟರ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಲು 3,992 ಆದೇಶಗಳನ್ನು ನೀಡಿದ್ದು, ಇದು ಜಾಗತಿಕವಾಗಿ 8% ಆಗಿದೆ. ಅದೇ ವೇಳೆ UK ಕೇವಲ 16 ಆದೇಶ ನೀಡಿದ್ದರೆ, ಅಮೇರಿಕ 32 ಆದೇಶಗಳನ್ನು, ಇಸ್ರೇಲ್‌ 7 ಆದೇಶಗಳನ್ನು ಮಾತ್ರ ನೀಡಿದೆ. ಇವೆಲ್ಲವೂ ಜಾಗತಿಕ ಆದೇಶಗಳ 1% ವೂ ಇಲ್ಲ. ನೆರೆಯ ಪಾಕಿಸ್ತಾನ 489 ಆದೇಶಗಳನ್ನು ನೀಡಿದ್ದು, ಜಾಗತಿಕವಾಗಿ 1% ಆದೇಶಗಳನ್ನು ನೀಡಿದೆ. ಬಾಂಗ್ಲಾದೇಶ ಟ್ವಿಟರ್‌ ಖಾತೆ ಅಮಾನತು ಹಾಗೂ ವಿಷಯ ತೆಗೆದುಹಾಕುವಿಕೆ ಕುರಿತಂತೆ ಯಾವುದೇ ಆದೇಶವನ್ನೂ ನೀಡಿಲ್ಲ. ಅದೇ ವೇಳೆ, ಭಾರತ ಸರ್ಕಾರವು 12,919 ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಆದೇಶಿಸಿದೆ ಎಂದು ಸಾಕೇತ್‌ ಗೋಖಲೆ ತಿಳಿಸಿದ್ದಾರೆ. 
 
ಈ ಡೇಟಾಗಳ ಪ್ರಕಾರ ಸಿಎಎ ವಿರೋಧಿ ಹಾಗೂ ರೈತರ ಆಂದೋಲನದ ಸಂದರ್ಭದಲ್ಲಿ ಮೋದಿ ಸರ್ಕಾರವು ಟ್ವಿಟರ್‌ ಖಾತೆದಾರರ ಮಾಹಿತಿ ನೀಡುವಂತೆ ಹಾಗೂ ಖಾತೆಗಳ ನಿಷೇಧಕ್ಕೆ ಒತ್ತಡ ಹೇರಿದೆ ಎನ್ನುವುದು ಖಚಿತವಾಗಿದೆ. ಕೋಮುವಾದಿ ಧ್ವೇಷ ಹರಡುವಿಕೆ, ಮಹಿಳಾ ಖಾತೆದಾರರ ಮೇಲೆ ಸೈಬರ್‌ ನಿಂದನೆ ದಾಳಿ, ಬಿಜೆಪಿ ಐಟಿ ಸೆಲ್ ಗಳು ಮುಕ್ತವಾಗಿ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲೇ ಮೋದಿ ಸರ್ಕಾರವು ಇಷ್ಟೆಲ್ಲಾ ಆದೇಶಗಳನ್ನು ನೀಡಿದೆ. ಬಿಜೆಪಿ ನಾಯಕರ ಟ್ವೀಟ್‌ಗಳನ್ನು 'ತಿರುಚಿದ ಸುದ್ದಿ' ಎಂದು ಸ್ವತಃ ಟ್ವಿಟರ್‌ ಫ್ಲ್ಯಾಗ್‌ ಮಾಡಿದ್ದರೂ ಸಹ ಅವುಗಳನ್ನು ತೆಗೆದುಹಾಕಿರಲಿಲ್ಲ. ಮೋದಿ ಸರಕಾರ ಟೀಕೆಗಳನ್ನು ಹತ್ತಿಕ್ಕುತ್ತದೆ ಎಂಬುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಈ ಅಧಿಕೃತ ಡೇಟಾವನ್ನು ನಿರಾಕರಿಸುವ ಮತ್ತು ಆರೋಪಗಳನ್ನು "ಸುಳ್ಳು" ಮತ್ತು "ವಿದೇಶಿ ಪಿತೂರಿ" ಎಂದು ಹೇಳುವ ಧೈರ್ಯವನ್ನು ಮೋದಿ ಸರ್ಕಾರ ಹೊಂದಿದೆಯೇ? ಸಚಿವ ರಾಜೀವ್ ಅವರೇ ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಏಕೆಂದರೆ ಈಗ ನೀವು ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಸಾಕೇತ್‌ ಗೋಖಲೆ ಟ್ವೀಟ್‌ ನಲ್ಲಿ ಪ್ರಶ್ನಿಸಿದ್ದಾರೆ.

Nailing the lies of Modi Govt on Twitter ex-CEO Jack Dorsey's allegations of censorship & spying:

Modi Govt has denied allegations of indulging in spying & pressure on Twitter & called them "lies".

But here's the truth based on data from Twitter's Transparency Reports.

— Saket Gokhale (@SaketGokhale) June 14, 2023

In the recorded period of the peak of the Anti-CAA & Farmers Protest:

India submitted MAXIMUM GOVT REQUESTS FOR ACCOUNT INFORMATION GLOBALLY during this period

Indian Govt account requests for this period represent 25% OF GLOBAL VOLUME & 15% of ALL GLOBAL ACCOUNTS

(2/13) pic.twitter.com/oyhmEMxvKA

— Saket Gokhale (@SaketGokhale) June 14, 2023

Now in 2021 (COVID period)

Indian Govt requests for user details comprised 19% of TOTAL GLOBAL REQUESTS.

Let's compare this with % of global requests from other countries:

UK was 4%

Germany was 6%

Brazil was 2%

AND WAIT...

PAKISTAN WAS LESS THAN 1%

(4/13) pic.twitter.com/d6RtOD5OV4

— Saket Gokhale (@SaketGokhale) June 14, 2023
share
Next Story
X