Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಿಳೆಯೊಬ್ಬರಿಗೆ ಆಹಾರ ನೀಡಲು ಮೂರು...

ಮಹಿಳೆಯೊಬ್ಬರಿಗೆ ಆಹಾರ ನೀಡಲು ಮೂರು ಕಿ.ಮೀ ನಡೆದ ಸ್ವಿಗ್ಗಿ ಡೆಲಿವರಿ ಬಾಯ್: ಈ ಕತೆ ವೈರಲ್ ಆಗಿದ್ದೇಕೆ ಗೊತ್ತೆ?

14 Jun 2023 6:16 PM IST
share
ಮಹಿಳೆಯೊಬ್ಬರಿಗೆ ಆಹಾರ ನೀಡಲು ಮೂರು ಕಿ.ಮೀ ನಡೆದ ಸ್ವಿಗ್ಗಿ ಡೆಲಿವರಿ ಬಾಯ್: ಈ ಕತೆ ವೈರಲ್ ಆಗಿದ್ದೇಕೆ ಗೊತ್ತೆ?

ಹೊಸ ದಿಲ್ಲಿ: ಆಹಾರ ಪೂರೈಕೆ ಸಿಬ್ಬಂದಿಗಳೊಂದಿಗೆ ಹಲವಾರು ಗ್ರಾಹಕರು ಅನುಚಿತವಾಗಿ ವರ್ತಿಸಿರುವ ಘಟನೆಗಳು ಈ ಹಿಂದೆ ವರದಿಯಾಗಿವೆ, ವರದಿಯಾಗುತ್ತಲೇ ಇವೆ. ಆದರೆ, ಇಲ್ಲೊಂದು ಹೃದಯಸ್ಪರ್ಶಿ ಘಟನೆಯಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನ ಪ್ರಯಾಸಕಾರಿ ಬದುಕಿನ ಕತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವೈರಲ್ ಕತೆಯ ಕೇಂದ್ರ ವ್ಯಕ್ತಿ 30 ವರ್ಷದ ಸಾಹಿಲ್ ಸಿಂಗ್.

ತಂತ್ರಜ್ಞಾನ ಕಂಪನಿಯಾದ FLASHನಲ್ಲಿ ಮಾರುಕಟ್ಟೆ ಅಧಿಕಾರಿಯಾದ ಪ್ರಿಯಾಂಶಿ ಚಾಂದೆಲ್ ಇತ್ತೀಚೆಗೆ ಆಹಾರ ಸರಬರಾಜಿಗಾಗಿ ಸ್ವಿಗ್ಗಿ ಕಂಪನಿಗೆ ಆರ್ಡರ್ ನೀಡಿದ್ದರು. ಆ ಆರ್ಡರ್ ಅನ್ನು ತಲುಪಿಸಲು ಸಾಹಿಲ್ ಸಿಂಗ್ ಬರೋಬ್ಬರಿ ಮೂರು ಕಿಮೀ ದೂರ ನಡೆದು ಅವರ ನಿವಾಸದ ಬಳಿ ತಲುಪಿದ್ದ. ಹೀಗೆ ತಲುಪಿದ್ದ ಸಾಹಿಲ್ ಸಿಂಗ್ ಏದುಸಿರು ಬಿಡುತ್ತಾ, ಬೆವರು ನೀರು ಸುರಿಸುತ್ತಾ ಆಕೆಯ ಫ್ಲ್ಯಾಟ್ ಹೊರಗಿದ್ದ ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳುತ್ತಿದ್ದರು.

ಮನೆಯ ಬಾಗಿಲು ತೆರೆದು ಆತನಿಂದ ಆಹಾರ ಪೊಟ್ಟಣ ಸ್ವೀಕರಿಸಿರುವ ಪ್ರಿಯಾಂಶಿ ಚಾಂದೆಲ್, ಆತನಿಗೆ ಕೊಂಚ ನೀರು ಹಾಗೂ ರೂ. 500 ಭಕ್ಷೀಸು ನೀಡಿದ್ದಾರೆ. ಈ ಹಂತದಲ್ಲೇ ಸಾಹಿಲ್ ಸಿಂಗ್‌ರ ಪ್ರಯಾಸಕರ ಬದುಕಿನ ಅನಾವರಣಗೊಂಡಿರುವುದು. ಆಗ ಪ್ರಿಯಾಂಶಿ ಚಾಂದೆಲ್‌ರನ್ನು ಅವರನ್ನು ಉದ್ದೇಶಿಸಿ ಮಾತನಾಡಿರುವ ಆತ, "ಮೇಡಂ, ನನ್ನ ಬಳಿ ಪ್ರಯಾಣ ಮಾಡಲು ಯಾವುದೇ ಸ್ಕೂಟರ್ ಅಥವಾ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಮೂರು ಕಿಮೀ ನಡೆದುಕೊಂಡು ಬಂದೇ ನಿಮ್ಮ ಆರ್ಡರ್ ತಲುಪಿಸುತ್ತಿದ್ದೇನೆ.

ನಾನು ಸಂಪೂರ್ಣವಾಗಿ ಹಣವಿಲ್ಲದ ಸ್ಥಿತಿ ತಲುಪಿದ್ದು, ಇದ್ದ ಸ್ವಲ್ಪ ಹಣವನ್ನು ನನ್ನ ರೂಂಮೇಟ್‌ ತೆಗೆದುಕೊಂಡಿದ್ದಾರೆ. ಇದರಿಂದ ನನ್ನ ಯುಲು ಸ್ಕೂಟರ್ ಅನ್ನು ರೀಚಾರ್ಜ್ ಮಾಡಿಸಲು ಸಾಧ್ಯವಾಗಿಲ್ಲ ಅದು ರೂ. 235 ಸಾಲದಲ್ಲಿದೆ. ನಾನು ನನ್ನ ಮಾಲೀಕನಿಗೆ ಪಾವತಿಸಲು ನನ್ನ ಬಳಿ ಏನೂ ಉಳಿದಿಲ್ಲ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ನಿಮಗನ್ನಿಸುತ್ತಿರಬಹುದು. ಆದರೆ, ನಾನು ಇಸಿಇ ಪದವೀಧರನಾಗಿದ್ದು, ನಾನು ಕೋವಿಡ್ ಸಂದರ್ಭದಲ್ಲಿ ಜಮ್ಮುವಿನ ನನ್ನ ನಿವಾಸಕ್ಕೆ ಮರಳುವ ಮುನ್ನ ನಿಂಜಾಕಾರ್ಟ್ ಹಾಗೂ ಬೈಜು ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಈ ಡೆಲಿವರಿಯಿಂದಲೂ ನಾನು ಪಡೆಯುವುದು ರೂ. 20-25 ಮಾತ್ರ. ಹನ್ನೆರಡು ಗಂಟೆಯ ಒಳಗೆ ನಾನು ಮತ್ತೊಂದು ಡೆಲಿವರಿ ಮಾಡದಿದ್ದರೆ ಅವರು ನನ್ನನ್ನು ಡೆಲಿವರಿಗೆ ದೂರ ಕಳಿಸುತ್ತಾರೆ. ಆದರೆ, ನನ್ನ ಬಳಿ ಯಾವುದೇ ಬೈಕ್ ಇಲ್ಲ. ನಾನು ಕಳೆದ ಒಂದು ವಾರದಿಂದ ಸರಿಯಾಗಿ ಏನೂ ತಿಂದಿಲ್ಲ. ಕೇವಲ ನೀರು ಹಾಗೂ ಟೀ ಕುಡಿದು ದಿನ ದೂಡುತ್ತಿದ್ದೇನೆ.‌ ಹೀಗಾಗಿ ನೀವು ನನಗೆ ರೂ. 25,000 ಸಂಬಳದ ಉದ್ಯೋಗ ದೊರಕಿಸಿಕೊಡಲು ಸಾಧ್ಯವೆ? ನನಗೀಗ 30 ವರ್ಷ ವಯಸ್ಸಾಗಿದ್ದು, ವಯಸ್ಸಾಗಿರುವ ನನ್ನ ಪೋಷಕರ ಬಳಿ ಪದೇ ಪದೇ ಹಣ ಕೇಳಲು ಸಾಧ್ಯವಿಲ್ಲ" ಎಂದು ಮನವಿ ಮಾಡಿಕೊಂಡಿದ್ದಾನೆ.

ಕೂಡಲೇ ಆತನ ಭಾವಚಿತ್ರ, ಇಮೇಲ್ ವಿಳಾಸ, ಅಂಕಪಟ್ಟಿಗಳು, ಪ್ರಮಾಣ ಪತ್ರಗಳು ಹಾಗೂ ದಾಖಲೆಗಳನ್ನು LinkedInನಲ್ಲಿ ಅಪ್ಲೋಡ್ ಮಾಡಿರುವ ಪ್ರಿಯಾಂಶಿ ಚಾಂದೆಲ್, "ಜವಾನ, ಆಡಳಿತಾತ್ಮಕ ಕೆಲಸ, ಗ್ರಾಹಕರ ಸಹಾಯ ಇತ್ಯಾದಿ ಉದ್ಯೋಗಗಳು ಖಾಲಿ ಇದ್ದರೆ ಈ ವ್ಯಕ್ತಿಗೆ ದಯವಿಟ್ಟು ನೆರವು ನೀಡಿ" ಎಂದು ಮನವಿ ಮಾಡಿದ್ದಾರೆ.

ಈ ಪೋಸ್ಟ್ ನೋಡಿ ಕೆಲವು ಬಳಕೆದಾರರು ಸಾಹಿಲ್ ಸಿಂಗ್‌ರ ಯುಲು ಸ್ಕೂಟರ್ ರೀಚಾರ್ಜ್ ಮಾಡಿಸಿದ್ದರೆ, ಮತ್ತೆ ಕೆಲವರು ಆತನಿಗೆ ಆಹಾರವನ್ನು ಆತನ ನಿವಾಸಕ್ಕೇ ತಲುಪಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ಪ್ರಿಯಾಂಶಿ ಚಾಂದೆಲ್ ಅವರು ಸಾಹಿಲ್ ಸಿಂಗ್‌ಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗಾಗಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವ ಕಚೇರಿಯಲ್ಲಿ ಕುಳಿತು ನಿಮ್ಮ ಉದ್ಯೋಗ ಪರಿಸರದ ಕುರಿತು ಅಸಮಾಧಾನ ವ್ಯಕ್ತಪಡಿಸುವ ಮುನ್ನ ಅಥವಾ ನೀವು ಆರ್ಡರ್ ಮಾಡಿದ ಆಹಾರವು ಸೂಕ್ತ ಸಮಯಕ್ಕೆ ತಲುಪಿಸಲಿಲ್ಲ ಎಂದು ಡೆಲಿವರಿ ಬಾಯ್ ಜೊತೆ ಅನುಚಿತವಾಗಿ ವರ್ತಿಸುವ ಮುನ್ನ ನಿಮ್ಮ ಸುತ್ತ ಇಂತಹ ನತದೃಷ್ಟ ವ್ಯಕ್ತಿಗಳು ತಮ್ಮ ಜೀವನ ನಿರ್ವಹಣೆಗಾಗಿ ಎಷ್ಟು ಪ್ರಯಾಸ ಪಡುತ್ತಿದ್ದಾರೆ ಎಂಬ ಸಂಗತಿಯೂ ನಿಮಗೆ ತಿಳಿದಿರಲಿ.

share
Next Story
X