ABVP ವಿರೋಧ ಹಿನ್ನೆಲೆ; ಕಾನೂನು ವಿವಿ ಕಾರ್ಯಕ್ರಮದಿಂದ ನಟ ಚೇತನ್ ಹೆಸರು ಕೈ ಬಿಟ್ಟ ಕುಲಪತಿ

ಹುಬ್ಬಳ್ಳಿ : ನಟ ಚೇತನ್ ಅಹಿಂಸಾ ಅವರನ್ನು ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಯುವಜನೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ವಿವಿ ಕುಲಪತಿ ಪ್ರೊ.ಸಿ.ಬಸವರಾಜ ಅವರು, ನಟ ಚೇತನ್ ಹೆಸರು ಕೈ ಬಿಟ್ಟಿದ್ದಾರೆ.
ಎಬಿವಿಪಿ ಕಾರ್ಯಕರ್ತರು ಚೇತನ್ ಅವರು ಅತಿಥಿಯಾವುದು ಬೇಡ ಎಂದು ಉಪಕುಲಪತಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಒಂದು ವೇಳೆ ಅವರನ್ನು ಬದಲಾಯಿಸದಿದ್ದರೆ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಕುಲಪತಿ ಪ್ರೊ.ಸಿ.ಬಸವರಾಜ ಅವರು, ಚೇತನ್ ಅವರ ಬದಲಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ ಅವರನ್ನು ಆಹ್ವಾನಿಸಲಾಗಿದೆ. ಈ ವಿಚಾರವನ್ನು ಕುಲಪತಿ ಪ್ರೊ.ಸಿ.ಬಸವರಾಜ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂ.16ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನೆಗೆ ಚೇತನ್ ಅವರನ್ನು ಆಹ್ವಾನಿಸಲಾಗಿತ್ತು.
Next Story





