Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ವಿಶ್ವದಾದ್ಯಂತ 110 ದಶಲಕ್ಷ ಜನರ ಬಲವಂತದ...

ವಿಶ್ವದಾದ್ಯಂತ 110 ದಶಲಕ್ಷ ಜನರ ಬಲವಂತದ ಸ್ಥಳಾಂತರ: ವಿಶ್ವಸಂಸ್ಥೆ ಕಳವಳ‌

14 Jun 2023 8:30 PM IST
share
ವಿಶ್ವದಾದ್ಯಂತ 110 ದಶಲಕ್ಷ ಜನರ ಬಲವಂತದ ಸ್ಥಳಾಂತರ: ವಿಶ್ವಸಂಸ್ಥೆ ಕಳವಳ‌

ಜಿನೆವಾ: ವಿಶ್ವದಾದ್ಯಂತ ದಾಖಲೆಯ 110 ದಶಲಕ್ಷ ಜನತೆ ತಮ್ಮ ಮನೆಯಿಂದ ಬಲವಂತವಾಗಿ ಸ್ಥಳಾಂತರಗೊಂಡಿದ್ದು , ಈ ಭಾರೀ ಪ್ರಮಾಣದ ಹೆಚ್ಚಳವು ಜಾಗತಿಕ ವ್ಯವಸ್ಥೆಯ ಸಮಸ್ಯೆಯನ್ನು ಪ್ರತಿಬಿಂಬಿಸಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಉಕ್ರೇನ್ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧ, ಅಫ್ಘಾನ್ನಿಂದ ಜನರ ಪಲಾಯನ ಮತ್ತು ಸುಡಾನ್ನಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಆಶ್ರಯ ಪಡೆಯಬಯಸುವ ಅಥವಾ ತಮ್ಮ ಸ್ವಂತ ನಾಡಿನೊಳಗೆ ಸ್ಥಳಾಂತರಗೊಳ್ಳುವ ನಿರಾಶ್ರಿತರ ಪ್ರಮಾಣ ಅಸಾಮಾನ್ಯ ಮಟ್ಟದಲ್ಲಿ ಹೆಚ್ಚಿದೆ ಎಂದು ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್ಎಚ್ಸಿಆರ್ ಹೇಳಿದೆ.

ಕಳೆದ ವರ್ಷಾಂತ್ಯಕ್ಕೆ 108.4 ದಶಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. ಇದು 2021ರ ವರ್ಷಾಂತ್ಯದ ಪ್ರಮಾಣಕ್ಕಿಂತ 19.1 ದಶಲಕ್ಷದಷ್ಟು ಹೆಚ್ಚಾಗಿದೆ. ಆ ಬಳಿಕ ಸುಡಾನ್ ಸಂಘರ್ಷದಿಂದಾಗಿ ಕಳೆದ ಮೇ ಸಂದರ್ಭ 110 ದಶಲಕ್ಷಕ್ಕೆ ತಲುಪಿತು ಎಂದು ಯುಎನ್ಎಚ್ಸಿಆರ್ನ ‘ಗ್ಲೋಬಲ್ ಟ್ರೆಂಡ್ಸ್ ಇನ್ ಫೋರ್ಸ್ಡ್ ಡಿಸ್ಪೇಸ್ಲ್ಮೆಂಟ್’ ಎಂಬ ವಾರ್ಷಿಕ ವರದಿ ಹೇಳಿದೆ.

ಸಂಘರ್ಷ, ಕಿರುಕುಳ, ತಾರತಮ್ಯ ಮತ್ತು ಹಿಂಸಾಚಾರದ ಕಾರಣದಿಂದ, ಹಾಗೂ ಹವಾಮಾನ ಬದಲಾವಣೆಯ ಸಮಸ್ಯೆಯಿಂದ  110 ದಶಲಕ್ಷ ಜನರು ಪಲಾಯನ ಮಾಡಿದ್ದಾರೆ. ಇದು ಅತ್ಯಂತ ಕಳವಳಕಾರಿ ಆಗಿದೆ ಎಂದು ಯುಎನ್ಎಚ್ಸಿಆರ್ ಹೈಕಮಿಷನರ್  ಫಿಲಿಪ್ಪೊ ಗ್ರಾಂಡಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 2022ರ ಒಟ್ಟು ನಿರಾಶ್ರಿತರಲ್ಲಿ 35.3 ದಶಲಕ್ಷ ನಿರಾಶ್ರಿತರು ವಿದೇಶಕ್ಕೆ ಓಡಿಹೋದರೆ, 62.5 ದಶಲಕ್ಷ ನಿರಾಶ್ರಿತರನ್ನು ಆಂತರಿಕವಾಗಿ ಒಕ್ಕಲೆಬ್ಬಿಸಲಾಗಿದೆ. ಆಶ್ರಯ ಬಯಸುವ ಸುಮಾರು 5.4 ದಶಲಕ್ಷ ಜನರು ಹಾಗೂ 5.2 ದಶಲಕ್ಷದಷ್ಟು ಇತರ ಜನತೆ(ಪ್ರಧಾನವಾಗಿ ವೆನೆಝುವೆಲಾದಿಂದ ಬಂದವರು) ಅಂತರಾಷ್ಟ್ರೀಯ ರಕ್ಷಣೆಯನ್ನು ಎದುರು ನೋಡುತ್ತಿದ್ದಾರೆ.

ಈ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂಬ ಆತಂಕವಿದೆ. ಈ ವರ್ಷ ಸ್ಥಳಾಂತರವು ಹೆಚ್ಚು ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತಿದೆ. ನಿರಾಶ್ರಿತರನ್ನು ಗಡಿಭಾಗದಲ್ಲೇ ತಡೆಯುವ ಪ್ರಕರಣ ಹೆಚ್ಚುತ್ತಿದೆ. ಅಂತರಾಷ್ಟ್ರೀಯ ರಕ್ಷಣೆಗೆ ಅರ್ಹರಾದವರಿದ್ದಾರೆ ಎಂದು ಜನರಿಗೆ ಮುಖಂಡರು ಮನವರಿಕೆ ಮಾಡಬೇಕಿದೆ. ಸುಮಾರು 76%ದಷ್ಟು ನಿರಾಶ್ರಿತರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಕ್ಕೆ ಓಡಿಹೋಗುತ್ತಿದ್ದರೆ ಉಳಿದವರು ನೆರೆಯ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ.

ಟರ್ಕಿ(3.6 ದಶಲಕ್ಷ ), ಇರಾನ್(3.4 ದಶಲಕ್ಷ ), ಕೊಲಂಬಿಯಾ(2.5 ದಶಲಕ್ಷ ), ಜರ್ಮನಿ(2.1 ದಶಲಕ್ಷ ) ಮತ್ತು ಪಾಕಿಸ್ತಾನ (1.7 ದಶಲಕ್ಷ ) ಅತ್ಯಧಿಕ ಸಂಖ್ಯೆಯಲ್ಲಿ ನಿರಾಶ್ರಿತರಿಗೆ ನೆಲೆ ಕಲ್ಪಿಸಿದ ದೇಶಗಳಾಗಿವೆ. ಯುಎನ್ಎಚ್ಸಿಆರ್ನ ಆರ್ಥಿಕ ಪರಿಸ್ಥಿತಿ ಈ ವರ್ಷ ಉತ್ತಮವಾಗಿಲ್ಲ. ಆದ್ದರಿಂದ ಸ್ಥಳಾಂತರದ ಕಾರಣಗಳು ಮತ್ತು ಪ್ರಭಾವವನ್ನು ನಿವಾರಿಸಲು ತುರ್ತು ಜಾಗತಿಕ ಕ್ರಮದ ಅಗತ್ಯವಿದೆ ಎಂದು ವರದಿ ಹೇಳಿದೆ.   

►ಬಾಗಿಲು ತೆರೆದಿಡಬೇಕಾಗಿದೆ

ಬಲವಂತವಾಗಿ ದೇಶದಿಂದ ಹೊರದೂಡಲ್ಪಟ್ಟವರಿಗೆ ಎಲ್ಲಾ ದೇಶಗಳೂ ತಮ್ಮ ಬಾಗಿಲನ್ನು ತೆರೆದಿಡಬೇಕು. ತಮಗೆ ಸುರಕ್ಷಿತ ಎನಿಸಿದ ಸ್ಥಳದಲ್ಲಿ ನೆಲೆಸಲು ನಿರಾಶ್ರಿತರಿಗೆ ಸಾಧ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಆಶ್ರಯ ಬೇಡುವುದು ಅಪರಾಧವಲ್ಲ ಮತ್ತು ಆಶ್ರಯ ಕೋರುವವರನ್ನು ಜೈಲಿನಲ್ಲಿ ಇಡಬಾರದು ಎಂದು ಯುಎನ್ಎಚ್ಸಿಆರ್ ಆಗ್ರಹಿಸಿದೆ.

ಆಶ್ರಯ ಕೋರಿ ಬರುವವರನ್ನು ರವಾಂಡಕ್ಕೆ ಕಳುಹಿಸುವ ಬ್ರಿಟನ್ ಯೋಜನೆ ಸೂಕ್ತವಲ್ಲ. ಅಮೆರಿಕವೂ ಆಶ್ರಯ ಕೋರಿ ಬರುವವರನ್ನು ಹಿಂದೆ ಕಳುಹಿಸಿರುವ ವರದಿಯಿದೆ. ಆದರೆ ಆಶ್ರಯ ಕಲ್ಪಿಸುವ ಕುರಿತ ಒಪ್ಪಂದದೆಡೆ ಯುರೋಪಿಯನ್ ಯೂನಿಯನ್ನ ಹೆಜ್ಜೆಯು ಈ ವಿಷಯದ ಸುತ್ತಲಿನ ಉದ್ವಿಗ್ನತೆಯನ್ನು ಸಮತೋಲನಗೊಳಿಸುವತ್ತ ಒಂದು ಉತ್ತಮ ಪ್ರಯತ್ನವಾಗಿದೆ ಮತ್ತು ನಿರಾಶ್ರಿತರಿಗೆ ತುಲನಾತ್ಮಕ ನ್ಯಾಯ ಒದಗಿಸುವ ನಿರ್ಧಾರವಾಗಿದೆ ಎಂದು ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.

share
Next Story
X