ಸ್ತ್ರೀಸೇವಾ ನಿಕೇತನದಿಂದ ಮಹಿಳೆ ನಾಪತ್ತೆ

ಉಡುಪಿ, ಜೂ.14: ನಿಟ್ಟೂರಿನಲ್ಲಿರುವ ಸ್ತ್ರೀಸೇವಾ ನಿಕೇತನದಲ್ಲಿ ಒಂದು ತಿಂಗಳ ಹಿಂದೆ ದಾಖಲಾಗಿದ್ದ ಮಹಿಳೆ ಯೊಬ್ಬರು ತಪ್ಪಿಸಿಕೊಂಡು ಪರಾರಿಯಾಗಿ ರುವ ಘಟನೆ ಜೂ.14ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ನಡೆದಿದೆ.
ಮಣಿಯಮ್ಮ ಯಾನೆ ವಿದ್ಯಾ ಶೆಟ್ಟಿಯಾರ್ ಎಂಬವರು ಸ್ನಾನಗೃಹದ ಮೇಲಿನ ಕಿಟಕಿಯ ಕಬ್ಬಿಣದ ತಂತಿಯನ್ನು ಮುರಿದು ತಪ್ಪಿಸಿ ಕೊಂಡು ಹೋಗಿರುವುದಾಗಿ ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಸಿಂಧು ಆರ್. ನೀಡಿದ ದೂರಿ ನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story