ಲೂಧಿಯಾನ: 8.49 ಕೋಟಿ ರೂ. ದರೋಡೆ ಪ್ರಕರಣ ಭೇದಿಸಿದ ಪೊಲೀಸರು; ಐವರ ಬಂಧನ

ಲೂಧಿಯಾನಾ: ಇಲ್ಲಿನ ರಾಜಗುರು ನಗರದಲ್ಲಿ ಮ್ಯಾನೇಜ್ಮೆಂಟ್ ಕಂಪೆನಿಯೊಂದರ ಕಚೇರಿಯಿಂದ 10 ಮಂದಿಯ ತಂಡವೊಂದು 8.49 ಕೋಟಿ ರೂ.ದರೋಡೆಗೈದ ಪ್ರಕರಣವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಗ್ಯಾಂಗ್ನ ಐವರು ಸದಸ್ಯರನ್ನು ಬಂಧಿಸಲಾಗಿದ್ದು, ಇತರ ಐವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಲೂಧಿಯಾನದ ಮ್ಯಾನೇಜ್ಮೆಂಟ್ ಸಂಸ್ಥೆ ಸಿಎಂಎಸ್ನ ಕಾರ್ಯಾಲಯದಲ್ಲಿ ಶನಿವಾರ ಮಧ್ಯಾಹ್ನ 2:00 ಗಂಟೆಯ ವೇಳೆಗೆ ಕಂಪೆನಿಯ ಕಚೇರಿಗೆ ನುಗ್ಗಿತ್ತು. ಐವರು ಉದ್ಯೋಗಿಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿದ ಬಳಿಕ ಅವರನ್ನು ಕಂಪ್ಯೂಟರ್ ಸರ್ವರ್ ಕೊಠಡಿಯಲ್ಲಿ ಬಂಧಿಯಾಗಿರಿಸಿತ್ತು. ಆನಂತರ ದರೋಡೆಕೋರರು 8.49 ಕೋಟಿ ರೂ. ದರೋಡೆ ಗೈದು ಪರಾರಿಯಾಗಿದ್ದರು.
ಈ ಕೃತ್ಯವನ್ನು ಎಸಗಿದ ಅಪರಿಚಿತ ದುಷರ್ಮಿಗಳ ವಿರುದ್ಧ ಊಧಿಯಾನದ ಸರಭಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story





