ಚೀನಾದಲ್ಲಿ ಮತ್ತೆ ಹೆಚ್ಚಾದ ಕೋವಿಡ್ ಸೋಂಕು

ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕು ಮತ್ತೆ ಉಲ್ಬಣಿಸಿದ್ದು ಮೇ ತಿಂಗಳಾಂತ್ಯದಲ್ಲಿ ದೇಶದಾದ್ಯಂತ ಸೋಂಕು ಪ್ರಕರಣದಲ್ಲಿ 40%ದಷ್ಟು ಹೆಚ್ಚಳವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಎಪ್ರಿಲ್ನಿಂದ ಕೋವಿಡ್ ಸೋಂಕು ದೃಢಪಟ್ಟವರ ಪ್ರಮಾಣದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ ಎಂದು ಚೀನಾದ ರೋಗನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ.
ಮೇ ತಿಂಗಳಲ್ಲಿ ಚೀನಾದ ಸೋಂಕಿನ ಪೊಸಿಟಿವ್ ಪ್ರಮಾಣ 2022ರ ಅಂತ್ಯದಲ್ಲಿ ಸಾಂಕ್ರಾಮಿಕ ಉಲ್ಬಣಿಸಿದ ಸಂದರ್ಭಕ್ಕೆ ಸಮವಾಗಿತ್ತು. ಮೇ ತಿಂಗಳಿನಲ್ಲಿ ಚೀನಾದಲ್ಲಿ ಕೋವಿಡ್ನ ಮತ್ತೊಂದು ಅಲೆ ಎದ್ದಿತ್ತು. ದೇಶದಲ್ಲಿ ಕೋವಿಡ್ನಿಂದ 164 ಸಾವಿನ ಪ್ರಕರಣ ದಾಖಲಾಗಿದ್ದು 2,777 ಜನರು ತೀವ್ರ ಸೋಂಕಿನಿಂದ ಬಳಲಿದ್ದರು. ಈ ಹೊಸ ಅಲೆಯು ಜೂನ್ ಅಂತ್ಯಕ್ಕೆ ಮತ್ತಷ್ಟು ಉಲ್ಬಣಗೊಳ್ಳಬಹುದು ಮತ್ತು ಪ್ರತೀ ವಾರ 65 ದಶಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಬಹುದು ಎಂದು ಚೀನಾದ ಉನ್ನತ ಕೋವಿಡ್ ಸಲಹೆಗಾರ ಡಾ. ಝೋಂಗ್ ನನ್ಷಾನ್ ಹೇಳಿದ್ದಾರೆ.
Next Story