Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೋಮಿ ಒಸಾಕಾ ಎಂಬ ಬೆಂಕಿಯ ಚೆಂಡು

ನೋಮಿ ಒಸಾಕಾ ಎಂಬ ಬೆಂಕಿಯ ಚೆಂಡು

ಹರೀಶ್ ಗಂಗಾಧರ್ಹರೀಶ್ ಗಂಗಾಧರ್15 Jun 2023 11:54 AM IST
share
ನೋಮಿ ಒಸಾಕಾ ಎಂಬ ಬೆಂಕಿಯ ಚೆಂಡು

ಕ್ರೀಡೆ ಮತ್ತು ರಾಜಕೀಯ ಬೆರೆಯಬಾರದೆಂದು ಒಸಾಕಾಗೆ ಹಲವರು ಸಲಹೆ ನೀಡಿದ್ದಾರೆ. ಜನ ನೀಡುವ ಇಂತಹ ಬಿಟ್ಟಿ ಸಲಹೆಗಳಿಗೆ ಪ್ರತಿಕ್ರಿಯಿಸಲು ಒಸಾಕಾ ಎಂದೂ ಅಳುಕಿಲ್ಲ. ನಾನು ಕ್ರೀಡಾಪಟು ಆದರೆ ಅದಕ್ಕಿಂತ ಹೆಚ್ಚಾಗಿ ಕಪ್ಪುವರ್ಣದವಳು. ಕಪ್ಪುಜನರ ಶೋಷಣೆಯ ವಿರುದ್ಧ ದನಿ ಎತ್ತುವುದು ನಾನು ಟೆನಿಸ್ ಆಡುವುದಕ್ಕಿಂತ ಮುಖ್ಯ. ನನ್ನ ದನಿ ಅಷ್ಟೇನೂ ಬದಲಾವಣೆ ತರದಿರಬಹುದು. ಆದರೆ ಬರೀ ಬಿಳಿಯರೇ ಆವರಿಸಿಕೊಂಡಿರುವ ಟೆನಿಸ್ ಕ್ರೀಡೆಯಲ್ಲಿ ಮತ್ತು ಪ್ರಪಂಚದಲ್ಲಿ ಒಂದು ಚರ್ಚೆಯಂತೂ ಶುರುವಾಗುತ್ತದೆ ಎಂಬ ಅಭಿಪ್ರಾಯ ಒಸಾಕಾರದು.

ಆಗಸ್ಟ್ 9, 2014. ಸೈಂಟ್ ಲೂಯಿಸ್ ಪಟ್ಟಣದ ದಾರಿಯೊಂದರಲ್ಲಿ ಕಪ್ಪು ವರ್ಣದ ಬ್ರೌನ್ ಮತ್ತವನ ಗೆಳೆಯ ನಡೆದು ಹೋಗುತ್ತಿದ್ದರು. ಅಲ್ಲಿಗೊಂದು ಪೊಲೀಸ್ ಗಸ್ತು ವಾಹನ ಬಂತು. ನಿಮಿಷಗಳಲ್ಲಿ ಏಳು ಗುಂಡುಗಳು ಬ್ರೌನ್ ದೇಹ ಹೊಕ್ಕಿದ್ದವು. ಪೊಲೀಸ್ ಅಧಿಕಾರಿ ಡ್ಯಾರೆನ್ ವಿಲ್ಸನ್ ಕಾರಣವಿಲ್ಲದೆ ಗುಂಡು ಹಾರಿಸಿದ್ದ. ರಸ್ತೆಯ ನಡುವೆಯೇ ಮುಗ್ಧ ಬ್ರೌನ್ ದೇಹ ರಕ್ತದ ಮಡುವಿನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಬಿದ್ದಿತ್ತು. ವಿಲ್ಸನ್ ಮೇಲೆ ಯಾವ ಅಪರಾಧದ ಆರೋಪವೂ ದಾಖಲಾಗಲಿಲ್ಲ.

ಫೆಬ್ರವರಿ 2012, ಸ್ಟಾನ್ಫೋರ್ಡ್, ಫ್ಲೋರಿಡಾ. ಹದಿನೇಳು ವರ್ಷದ ಟ್ರೇವನ್ ಮಾರ್ಟಿನ್ ಅಂಗಡಿಯಿಂದ ತಿಂಡಿ ಕೊಂಡು ಮನೆಗೆ ಹೋಗುತ್ತಿದ್ದ. ಕಪ್ಪು ವರ್ಣದ ಮಾರ್ಟಿನ್ನನ್ನು ನೋಡಿದ ಜಾರ್ಜ್ ಜಿಮ್ಮರ್ಮನ್ ಎಂಬ ಬಿಳಿಯ ಇಲ್ಲೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಎಂದು ಪೊಲೀಸರಿಗೆ ಕರೆ ಮಾಡಿದ. ಮನೆಗೆ ಊಟ ಕೊಂಡೊಯ್ಯುತ್ತಿದ್ದ ಹದಿನೇಳು ವರ್ಷದ ಹುಡುಗನ ಮೇಲೆ ಯಾವ ಅನುಮಾನ? ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಜಿಮ್ಮರ್ಮನ್ ಯಾವುದೇ ಕಾರಣವಿಲ್ಲದೆ ಮಾರ್ಟಿನ್ ಜೊತೆ ವಾದಕ್ಕಿಳಿದ. ಯಾವುದೇ ಪ್ರಚೋದನೆಯಿಲ್ಲದೆ ಗುಂಡು ಹಾರಿಸಿಬಿಟ್ಟ. ಮಾರ್ಟಿನ್ ಬದುಕುಳಿಯಲಿಲ್ಲ. ಜಿಮ್ಮರ್ಮನ್ನನ್ನು ಬಂಧಿಸಲು ಪೊಲೀಸರಿಗೆ ಆರು ವಾರಗಳ ಕಾಲ ಬೇಕಾಯಿತು! ಪೊಲೀಸರನ್ನು ಅವರ ಆಲಸ್ಯದಿಂದ ಹೊರತರಲು, ಮಂಪರಿನಿಂದ ಏಳಿಸಲು ಮಾರ್ಟಿನ್ ಪೋಷಕರು ಬೀದಿಗಿಳಿಯಬೇಕಾಯಿತು, ಕಪ್ಪು ವರ್ಣದವರು ಪ್ರತಿಭಟನೆ ನಡೆಸಬೇಕಾಯಿತು. ಸುದೀರ್ಘ ಹೋರಾಟದ ನಂತರವೂ ಮಾರ್ಟಿನ್ ಪೋಷಕರಿಗೆ ನ್ಯಾಯ ಸಿಗದಾಯಿತು. ಜಿಮ್ಮರ್ಮನ್ ಆರೋಪ ಮುಕ್ತನಾದ!

ಟ್ರೆವನ್ ಮಾರ್ಟಿನ್ ಸತ್ತಾಗ ನೋಮಿ ಒಸಾಕಾಗೆ ಕೇವಲ ಹದಿನಾಲ್ಕು ವರ್ಷ. ಮಾರ್ಟಿನ್ ಜಾಗದಲ್ಲಿ ತಾನು ಕೂಡ ಇರಬಹುದಿತ್ತೆಂದು ಉದಯೋನ್ಮುಖ ಟೆನಿಸ್ ತಾರೆ ಒಸಾಕಾರಿಗೆ ಅಂದು ಅನಿಸಿತ್ತು. ಹೈಟಿ ದೇಶ ಮೂಲದ ತಂದೆ ಮತ್ತು ಜಪಾನಿನ ತಾಯಿಗೆ ಹುಟ್ಟಿದ ಅದ್ಭುತ ಟೆನಿಸ್ ಪ್ರತಿಭೆ ಒಸಾಕಾ. ತನ್ನ ಮೂರನೇ ವಯಸ್ಸಿನಿಂದ ಅಮೆರಿಕದಲ್ಲೇ ನೆಲೆಸಿರುವ ಒಸಾಕಾ ಆಡುವುದು ಮಾತ್ರ ಜಪಾನ್ ಬಾವುಟದಡಿಯಲ್ಲಿ. ಪ್ರತಿಭಾನ್ವಿತೆ ಒಸಾಕಾ ಈಗಾಗಲೇ ನಾಲ್ಕು ಗ್ರಾಂಡ್ ಸ್ಲಾಮ್ಗಳನ್ನು ಗೆದ್ದಿದ್ದಾರೆ. ಪ್ರಪಂಚದಲ್ಲಿ ಅತಿ ಹೆಚ್ಚು ಹಣ ಪಡೆಯುವ ಆಟಗಾರ್ತಿಯರಲ್ಲಿ ಇವರು ಅಗ್ರಸ್ಥಾನದಲ್ಲಿದ್ದವರು.

ಆಗಸ್ಟ್ 2020. ನ್ಯೂಯಾರ್ಕ್ ನಗರದಲ್ಲಿ ಟೆನಿಸ್ ಪಂದ್ಯಾವಳಿ ನಡೆಯುತ್ತಿದೆ. ಒಸಾಕಾ ಸೆಮಿ ಫೈನಲ್ ಹಂತ ತಲುಪಿದ್ದಾರೆ. ಅದೇ ಸಮಯಕ್ಕೆ ವಿಸ್ಕಾನ್ಸಿನ್ ನಗರದಲ್ಲಿ ಜಾಕೋಬ್ ಬ್ಲೇಕ್ ಎನ್ನುವ ಕಪ್ಪುವರ್ಣದವನ ಮೇಲೆ ದಾಳಿ ನಡೆಯುತ್ತದೆ. ಅವನ ಮೂವರು ಮಕ್ಕಳ ಮುಂದೆಯೇ ಆತನಿಗೆ ಏಳು ಗುಂಡು ಹೊಡೆಯಲಾಗುತ್ತದೆ. ಅದೃಷ್ಟವಶಾತ್ ಆತ ಬದುಕುಳಿದರೂ ದಾಳಿಯಿಂದ ಅವನ ದೇಹ ಶಾಶ್ವತವಾಗಿ ನಿತ್ರಾಣವಾಗುತ್ತದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೂ ಅವನನ್ನು ಸರಪಳಿ ಹಾಕಿ ಮಂಚಕ್ಕೆ ಬಿಗಿಯಲಾಗುತ್ತದೆ. ಹೀಗೆ ಗುಂಡು ಹೊಡೆದ ಪೊಲೀಸ್ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ. ದಾಳಿಯ ಸುದ್ದಿ ಕೇಳಿದ ಒಸಾಕಾ ಸೆಮಿ ಫೈನಲ್ ಪಂದ್ಯದಿಂದ ಹಿಂದೆ ಸರಿದರು. ಒಸಾಕಾ ತೆಗೆದುಕೊಂಡ ನಿಲುವನ್ನು ಸಮರ್ಥಿಸಿ ಆಯೋಜಕರು ಕೂಡ ಪಂದ್ಯಾವಳಿಯನ್ನು ಮುಂದೂಡಿದರು.

2020, ಯುಎಸ್ ಓಪನ್ ಪಂದ್ಯಾವಳಿ. ಕೊರೋನ ಹಾವಳಿಯಿಂದ ಪಂದ್ಯಾವಳಿ ಅಷ್ಟೇನೂ ಅಬ್ಬರದಿಂದ ನಡೆಯಲಿಲ್ಲ. ಒಸಾಕಾ ಕಪ್ಪುವರ್ಣದವರ ಮೇಲೆ ಆಗುತ್ತಿದ್ದ ಸತತ ಹಲ್ಲೆ, ಪೊಲೀಸರ ಕ್ರೌರ್ಯದ ಕುರಿತು ಜಾಗೃತಿ ಮೂಡಿಸಲು ತೆಗೆದುಕೊಂಡ ನಿರ್ಧಾರ ಬಹುಶಃ ಕ್ರೀಡಾ ಜಗತ್ತಿನಲ್ಲಿಯೇ ಮಹತ್ವದ್ದು ಮತ್ತು ಭಾವುಕ ಪ್ರಭಾವ ಬೀರುವಂಥದ್ದಾಗಿತ್ತು. ಒಸಾಕಾ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಮಾಸ್ಕ್ ಧರಿಸಿದ್ದರು. ಆ ಮಾಸ್ಕ್ ಮೇಲೆ ಪೊಲೀಸರ ಕ್ರೌರ್ಯಕ್ಕೆ ಬಲಿಯಾದ ಕಪ್ಪುವರ್ಣದವರ ಹೆಸರು ಅಚ್ಚು ಹಾಕಲಾಗಿತ್ತು. ಅವರೆಂದರೆ, ಬ್ರಿಯೋನ್ನ ಟೇಲರ್, ಎಲಿಜ ಮೆಕ್ಲೈನ್, ಅಹ್ಮದ್ ಅರ್ಬೇರಿ, ಟ್ರೆವನ್ ಮಾರ್ಟಿನ್, ಜಾರ್ಜ್ ಫ್ಲಾಯ್ಡ್, ಫೀಲಾನ್ಡೋ ಕಾಸ್ಟೈಲ್, ತಮಿರ್ ರೈಸ್.

ಈ ಹೆಸರುಗಳಿದ್ದ ಮಾಸ್ಕ್ ಧರಿಸಿ ಫೈನಲ್ ತಲುಪಿದರು ಒಸಾಕಾ. ಇಡೀ ಪ್ರಪಂಚಕ್ಕೆ ಪೊಲೀಸರ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಕಪ್ಪು ವರ್ಣದವರ ಪರಿಚಯವಾಯಿತು. ‘ಬ್ಲ್ಯಾಕ್ ಲೈಫ್ ಮ್ಯಾಟರ್ಸ್’(ಬಿಎಲ್ಎಮ್) ಎಂಬ ಚಳವಳಿ ಮನೆಮಾತಾಯಿತು.

ಕ್ರೀಡೆ ಮತ್ತು ರಾಜಕೀಯ ಬೆರೆಯಬಾರದೆಂದು ಒಸಾಕಾಗೆ ಹಲವರು ಸಲಹೆ ನೀಡಿದ್ದಾರೆ. ಜನ ನೀಡುವ ಇಂತಹ ಬಿಟ್ಟಿ ಸಲಹೆಗಳಿಗೆ ಪ್ರತಿಕ್ರಿಯಿಸಲು ಒಸಾಕಾ ಎಂದೂ ಅಳುಕಿಲ್ಲ. ನಾನು ಕ್ರೀಡಾಪಟು ಆದರೆ ಅದಕ್ಕಿಂತ ಹೆಚ್ಚಾಗಿ ಕಪ್ಪುವರ್ಣದವಳು. ಕಪ್ಪುಜನರ ಶೋಷಣೆಯ ವಿರುದ್ಧ ದನಿ ಎತ್ತುವುದು ನಾನು ಟೆನಿಸ್ ಆಡುವುದಕ್ಕಿಂತ ಮುಖ್ಯ. ನನ್ನ ದನಿ ಅಷ್ಟೇನೂ ಬದಲಾವಣೆ ತರದಿರಬಹುದು. ಆದರೆ ಬರೀ ಬಿಳಿಯರೇ ಆವರಿಸಿಕೊಂಡಿರುವ ಟೆನಿಸ್ ಕ್ರೀಡೆಯಲ್ಲಿ ಮತ್ತು ಪ್ರಪಂಚದಲ್ಲಿ ಒಂದು ಚರ್ಚೆಯಂತೂ ಶುರುವಾಗುತ್ತದೆ ಎಂಬ ಅಭಿಪ್ರಾಯ ಒಸಾಕಾರದು.

‘‘ಕ್ರೀಡೆಯೊಂದು ಬದುಕು. ಪರಿಶ್ರಮ, ತ್ಯಾಗ, ಯಶಸ್ಸು, ನೋವು, ನಲಿವುಗಳ ಮಿಲನ. ಜನ ಕ್ರೀಡೆಯನ್ನು ಇಷ್ಟಪಡುವುದೇ ಅದಕ್ಕೋಸ್ಕರ. ಕ್ರೀಡೆಯಲ್ಲಿ ಸಮಾನತೆಯಿದೆ. ಕ್ರೀಡೆಯಲ್ಲಿ ತಾರತಮ್ಯ ಇರಕೂಡದು. ಆ ಅಪಾರ ಕ್ರೀಡಾಶಕ್ತಿಯನ್ನು ನಾವ್ಯಾಕೆ ರಾಜಕೀಯವನ್ನು ಪ್ರಭಾವಿಸಲು ಬಳಸಬಾರದು? ನಾವು ಪೊಲೀಸರ ತರಬೇತಿಗೆ, ಹತ್ಯಾರುಗಳ ಖರೀದಿಗೆ ಖರ್ಚು ಮಾಡುವ ಹಣವನ್ನು ವಸತಿ, ಆರೋಗ್ಯ, ಉದ್ಯೋಗ, ಶಿಕ್ಷಣದಲ್ಲಿ ಏಕೆ ಹೂಡಿಕೆ ಮಾಡುವುದಿಲ್ಲ? ಸಾಮಾಜಿಕ ಅಸಮಾನತೆ, ಅಭಾವ ನೀಗಿಸಿ, ಅಪರಾಧ ಕುಗ್ಗಿಸಿ ಸ್ವಸ್ಥ ಸಮಾಜ ಕಟ್ಟುವ ಬಗೆ ಇದಲ್ಲವೇ?’’ ಎಂದು ಒಸಾಕಾ ಕೇಳುತ್ತಾರೆ. ‘‘ನಾನು ಟೆನಿಸ್ ಆಟಗಾರ್ತಿಯಾಗಿರದಿದ್ದರೆ ಈ ಜಗತ್ತು ಬದಲಿಸಲು ನಾನೇನು ಮಾಡುತ್ತಿದ್ದೆ?’’ ಎಂಬ ಪ್ರಶ್ನೆಯನ್ನು ಸದಾ ಕೇಳಿಕೊಳ್ಳುತ್ತಾರೆ. ಆಕೆಯ ಉತ್ತರ ಸ್ಪಷ್ಟವಾಗಿದೆ.
ಜೆಸ್ಸಿ ಓವನ್ಸ್ ಹಿಟ್ಲರ್ನಿಗೆ ಕಲಿಸಿದ ಪಾಠ, ಟಾಮಿ ಸ್ಮಿತ್, ಯಹಾನ್ ಕಾರ್ಲೋಸ್ ಮೆಕ್ಸಿಕೋ ಒಲಿಂಪಿಕ್ಸ್ನಲ್ಲಿ ತೋರಿದ ಧೈರ್ಯ, ವಿಯಟ್ನಾಂ ಯುದ್ಧದ ವಿರುದ್ಧ ಮುಹಮ್ಮದ್ ಅಲಿ ನಡೆಸಿದ ಹೋರಾಟ ಅಥವಾ ಕಪ್ಪುವರ್ಣದವರ ಚಳವಳಿಗೆ ತನ್ನ ವೃತ್ತಿ ಜೀವನವನ್ನೇ ಬಲಿಕೊಟ್ಟ ಅಮೆರಿಕನ್ ಫುಟ್ಬಾಲ್ ಆಟಗಾರ ಕಾಲಿನ್ ಕಾಪರ್ನಿಕ್ ಹೋರಾಟ ಸಾಲದೆಂಬ ಅರಿವು ಒಸಾಕಾಗೆ ಇದೆ.

ಜಾರ್ಜ್ ಬರ್ಬರ ಹತ್ಯೆಯ ನಂತರ ಒಸಾಕಾ ಚಳವಳಿಗೆ ಜಿಗಿದರು. ಮೌನ, ತಾತ್ಸಾರ ಎಂದಿಗೂ ಉತ್ತರವಲ್ಲ ಎಂದಳು. ಕೆಲ ಆಟಗಾರರು ಐಶ್ವರ್ಯ, ಕೀರ್ತಿ ಬಂದ ಕ್ಷಣ ಸಾಮಾಜಿಕ ಕಾಳಜಿಯಿಂದ, ಜ್ವಲಂತ ಸಮಸ್ಯೆಗಳಿಂದ ವಿಮುಖಗೊಳ್ಳುತ್ತಾರೆ. ಇದು ದಮನಿತ ವರ್ಗ/ಜಾತಿಯಿಂದ ಬರುವ ಕ್ರೀಡಾಪಟುಗಳ ವಿಷಯದಲ್ಲೂ ಸತ್ಯ. ಪ್ರಿವಿಲೇಜ್ ಅನ್ನುವ ಪದ ಸಾಕಷ್ಟು ಮಂದಿಗೆ ಅರ್ಥವಾಗದ ವಿಷಯ. ಪ್ರಿವಿಲೇಜ್ ಎಂಬುದು ನಿಮ್ಮ ಸಂಪತ್ತು, ಆಸ್ತಿಗೆ ಸಂಬಂಧಪಟ್ಟಿದ್ದಲ್ಲ, ನಿಮ್ಮ ಜೀವನ ಶೈಲಿಗೆ ಅನ್ವಯಿಸುವುದಲ್ಲ, ನೀವು ಹೇಗಿದ್ದೀರಿ ಮತ್ತು ನಿಮ್ಮ ದುಡಿಮೆ ಹೇಗಿದೆ ಎಂಬುದರ ಬಗ್ಗೆಯಲ್ಲ, ಪ್ರಿವಿಲೇಜ್ ಎಂದರೆ ದಿನನಿತ್ಯದ ವರ್ಣಭೇದ/ಜಾತಿಭೇದವನ್ನು ಸಹಿಸಿಕೊಂಡಿರುವುದಲ್ಲ. ಪ್ರಿವಿಲೇಜ್ ಎಂಬುದು ನಿರಂತರ ಸವಾಲು, ಆಕ್ರಮಣ ಅಥವಾ ಅಡೆತಡೆ ಇಲ್ಲದೆ ನಿರಾಳವಾಗಿ ಬದುಕುವುದು.

ಜಾರ್ಜ್ ಫ್ಲಾಯ್ಡ್ ಕೊಲೆಯ ನಂತರ ಕಾಲಿನ್ ಕಾಪೆರ್ನಿಕ್ ಎಂಬ ಪ್ರಖ್ಯಾತ ಅಮೆರಿಕನ್ ಫುಟ್ಬಾಲ್ ಆಟಗಾರ ಪಂದ್ಯಕ್ಕೆ ಮುನ್ನ ಹಾಡುವ ಅಮೆರಿಕನ್ ರಾಷ್ಟ್ರಗೀತೆಯ ಸಮಯದಲ್ಲಿ ಕ್ರೀಡಾಂಗಣದ ನಡುವೆ ಮಂಡಿಯೂರಿ ತಲೆ ತಗ್ಗಿಸಿ ಕುಳಿತ. ಕಾಲಿನ್ ಈ ನಡೆ ಅಂದಿನ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕೆರಳಿಸಿತು. ಕಾಲಿನ್ನನ್ನು ದೇಶದ್ರೋಹಿಯೆಂದು ಬ್ರ್ಯಾಂಡ್ ಮಾಡಲಾಯಿತು. ಆತ ಮತ್ತೆಂದೂ ಫುಟ್ಬಾಲ್ ಆಡದ ಹಾಗೆ ಪ್ರಭುತ್ವ ನೋಡಿಕೊಂಡಿತು! ಇದೇ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋತಾಗ ಸಾವಿರಾರು ಬೆಂಬಲಿಗರು ದಾಂಧಲೆ ನಡೆಸಿದರು. ಐವರು ಪ್ರಾಣ ಬಿಟ್ಟರು ಕೂಡ. ಅಮೆರಿಕನ್ ಇತಿಹಾಸದಲ್ಲೇ ಕಂಡು ಕೇಳರಿಯದ ಈ ರೀತಿಯ ದಾಂಧಲೆ ನಡೆಸಿದವರಿಗೆ ಯಾವ ಶಿಕ್ಷೆಯೂ ಆಗಲಿಲ್ಲ. ಬದಲಾಗಿ ಕೆಲ ಪೊಲೀಸರು ರೌಡಿಗಳ ಜೊತೆಗೆ ನಿಂತು ಸೆಲ್ಫಿ ತೆಗೆಸಿಕೊಂಡರು. ಇದು ಬಿಳಿಯರಿಗಿರುವ ಪ್ರಿವಿಲೇಜ್. ಕಪ್ಪು ವರ್ಣದವ ತನ್ನ ಸ್ವಂತ ಕಾರಿನಲ್ಲಿ ಓಡಾಡುವಾಗಲೂ ಅವನನ್ನು ತಡೆದು ಅನುಮಾನದಿಂದಲೇ ನೋಡುವ ಪೊಲೀಸರು, ಕಾರ್ ಮಾಲಕನನ್ನು ಕೆಳಗಿಳಿಸಿ ತಪಾಸಣೆ ನಡೆಸುತ್ತಾರೆ. ಆದರೆ ಬಿಳಿಯನೊಬ್ಬ ಕಾರ್ ಕದ್ದುಕೊಂಡು ಹೋಗುತ್ತಿರುವಾಗಲೂ ಪೊಲೀಸರು ಅವನನ್ನು ಅನುಮಾನದಿಂದ ನೋಡಲಾರರು. ಇದು ಬಿಳಿಯರಿಗಿರುವ ಪ್ರಿವಿಲೇಜ್. ಇಂತಹ ನಿಜವಾದ ಪ್ರಿವಿಲೇಜ್ಗಾಗಿ ಪ್ರತಿರೋಧ, ಹೋರಾಟ ಮಾಡಬೇಕಿದೆ ಎಂಬ ಸ್ಪಷ್ಟತೆ ಒಸಾಕಾಗೆ ಇದೆ.

ಅಮೆರಿಕನ್ ಕಾದಂಬರಿಕಾರ, ನಾಟಕಕಾರ ಮತ್ತು ಸಾಮಾಜಿಕ ಕಾರ್ಯಕರ್ತ ಜೇಮ್ಸ್ ಬಾಲ್ಡ್ವಿನ್ ಹೇಳುವ ಮಾತುಗಳು: ‘‘ಬಿಳಿಯನೊಬ್ಬ ತನಗೆ ಸ್ವಾತಂತ್ರ್ಯ ನೀಡಿ ಅಥವಾ ಸಾವು ಕರುಣಿಸಿ ಎಂಬ ಬೇಡಿಕೆಯಿಟ್ಟರೆ, ಬಿಳಿಯರ ಪ್ರಪಂಚ ಪ್ರಶಂಸೆ ಮಾಡುತ್ತದೆ, ಚಪ್ಪಾಳೆ ತಟ್ಟುತ್ತದೆ. ಅದರೆ ಕಪ್ಪುವರ್ಣದವನೊಬ್ಬ ಸ್ವಾತಂತ್ರ್ಯ, ವಿಮುಕ್ತಿಯ ಕುರಿತು ಮಾತನಾಡಿದರೆ ಅವನಿಗೆ ಅಪರಾಧಿಯೆಂದು ಹಣೆಪಟ್ಟಿ ಕಟ್ಟುತ್ತದೆ. ಆತನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ, ‘ಕೆಟ್ಟ ಕರಿಯ’ನನ್ನು ಬೇರೆಯವರಿಗೆ ಉದಾಹರಣೆಯನ್ನಾಗಿ ಮಾಡುತ್ತದೆ. ಅವನಂತೆ ಪ್ರತಿರೋಧವೊಡ್ಡುವ ಬೇರೊಬ್ಬ ಧೈರ್ಯ ಮಾಡದಂತೆ ನೋಡಿಕೊಳ್ಳುತ್ತದೆ.’’

ವಿಷಮ ಪರಿಸ್ಥಿತಿಯಲ್ಲಿ, ದುರುಳರೇ ತುಂಬಿರುವ ನಾಡಿನಲ್ಲಿ, ವರ್ಣಭೇದ ನೀತಿಯ ಕ್ರಮಾನುಗತ ಸಮಾಜದಲ್ಲಿ ಒಸಾಕಾರ ಸಾಧನೆ ಅದ್ವಿತೀಯ. ಆಕೆ ತನ್ನ ಐಷಾರಾಮಿ ಜೀವನದ ಕಂಫರ್ಟ್ ರೆನಿನಲ್ಲಿರದೆ ಪ್ರತಿರೋಧದ ಹಾದಿಯಲ್ಲಿ ನಡೆದದ್ದು ಶ್ಲಾಘನೀಯ. ನೋಮಿ ಒಸಾಕಾ ನಮ್ಮ ದೇಶದ ಕ್ರೀಡಾಪಟುಗಳಿಗೆ ಮಾದರಿಯಾಗಲಿ. ಇವರೂ ಸ್ವಾರ್ಥ ಮನೋಭಾವದಿಂದ ಹೊರಬಂದು ನೊಂದ ಶೋಷಿತ ಕ್ರೀಡಾಳುಗಳ ಜೊತೆ ನಿಲ್ಲಲಿ.

share
ಹರೀಶ್ ಗಂಗಾಧರ್
ಹರೀಶ್ ಗಂಗಾಧರ್
Next Story
X