ಬಿಹಾರದ ಸಿಎಂ ನಿತೀಶ್ ಕುಮಾರ್ ಭದ್ರತೆ ಭೇದಿಸಿದ ಬೈಕ್ ಸವಾರ!

ಪಾಟ್ನಾ: ಪಾಟ್ನಾದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಬೈಕ್ ಸವಾರರಿಂದ ಮುಖ್ಯಮಂತ್ರಿಯೂ ಸೇರಿದಂತೆ ಯಾರೂ ಸುರಕ್ಷಿತವಾಗಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ.
ಇಂದು ಬೆಳಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಏಕಾಏಕಿ ಅವರ ಭದ್ರತಾ ಕವಚವನ್ನು ಭೇದಿಸಿದ್ದಾನೆ. ಮುಖ್ಯಮಂತ್ರಿ ಹೇಗೋ ಬೈಕ್ ಸವಾರನ ದಾರಿ ತಪ್ಪಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯು ಮುಖ್ಯಮಂತ್ರಿಯವರ ಭದ್ರತೆಯ ಗಂಭೀರ ಲೋಪವಾಗಿ ನೋಡಲಾಗುತ್ತಿದೆ, ಏಕೆಂದರೆ ಬೈಕ್ ಸವಾರ ಮುಖ್ಯಮಂತ್ರಿ ಬಳಿ ಹೋಗದಂತೆ ಭದ್ರತಾ ಅಧಿಕಾರಿಗಳು ಅವರನ್ನು ರಕ್ಷಿಸಬೇಕಾಗಿತ್ತು.
ಘಟನೆಯ ನಂತರ ಬೈಕ್ ಸವಾರನನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ಬಳಿಕ ಪೊಲೀಸ್ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದಾರೆ.
Next Story





