Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. CAA ವಿರೋಧಿ ನಾಟಕ ಪ್ರದರ್ಶಿಸಿದ್ದ...

CAA ವಿರೋಧಿ ನಾಟಕ ಪ್ರದರ್ಶಿಸಿದ್ದ ಶಾಹೀನ್ ಶಾಲೆ ಮೇಲಿನ ದೇಶದ್ರೋಹ ಪ್ರಕರಣ ರದ್ದು: ಈ ಪ್ರಕರಣದಲ್ಲಿ ನಡೆದಿದ್ದೇನು?

ಇಲ್ಲಿದೆ ಸಂಪೂರ್ಣ ಮಾಹಿತಿ

15 Jun 2023 1:29 PM IST
share
CAA ವಿರೋಧಿ ನಾಟಕ ಪ್ರದರ್ಶಿಸಿದ್ದ ಶಾಹೀನ್ ಶಾಲೆ ಮೇಲಿನ ದೇಶದ್ರೋಹ ಪ್ರಕರಣ ರದ್ದು: ಈ ಪ್ರಕರಣದಲ್ಲಿ ನಡೆದಿದ್ದೇನು?
ಇಲ್ಲಿದೆ ಸಂಪೂರ್ಣ ಮಾಹಿತಿ

ಕಲಬುರ್ಗಿ: ಬೀದರ್ ಜಿಲ್ಲೆಯ ಪ್ರತಿಷ್ಠಿತ ಶಾಹೀನ್ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ್ದ ನಾಟಕವೊಂದರ ಸಂಬಂಧ ಶಾಲೆಯ ಆಡಳಿತ ಮಂಡಳಿ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಬುಧವಾರ, ಜೂನ್ 14ರಂದು ಕರ್ನಾಟಕ ಹೈಕೋರ್ಟಿನ ಕಲಬುರ್ಗಿ ಪೀಠವು ವಜಾಗೊಳಿಸಿದೆ. ಈ ಪ್ರಕರಣದ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಜನವರಿ 21, 2020ರಂದು ಪ್ರದರ್ಶನಗೊಂಡಿದ್ದ ಈ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಮಾನಕಾರಿ ಹೇಳಿಕೆಗಳನ್ನು ಬಳಸಲಾಗಿದೆ ಹಾಗೂ ಪೌರ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರ ನೋಂದಣಿ ಕಾಯ್ದೆಗಳನ್ನು ಟೀಕಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ನಾಟಕ ಪ್ರದರ್ಶನಗೊಂಡ ಬೆನ್ನಿಗೇ ಶಾಹೀನ್ ಪ್ರಾಥಮಿಕ ಶಾಲೆಯ ಓರ್ವ ಶಿಕ್ಷಕಿ ಹಾಗೂ 11 ವರ್ಷದ ವಿದ್ಯಾರ್ಥಿನಿಯೊಬ್ಬಳ ತಾಯಿಯನ್ನು ದೇಶದ್ರೋಹದ ಆರೋಪದಡಿ ಬೀದರ್ ಪೊಲೀಸರು ಬಂಧಿಸಿದ್ದರು.

ದೇಶದ್ರೋಹ ಹಾಗೂ ಎರಡು ವಿಭಿನ್ನ ಗುಂಪುಗಳ ನಡುವೆ ಧರ್ಮ ಮತ್ತು ಜನಾಂಗದ ಆಧಾರದಲ್ಲಿ ದ್ವೇಷವನ್ನು ಪ್ರಚೋದಿಸಿದ ಆರೋಪದಲ್ಲಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ಬೀದರ್ ನ್ಯೂ ಟೌನ್ ಪೊಲೀಸರು ಜನವರಿ 2020ರಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದರು.‌ ಈ ಸಂಬಂಧ ಶಾಲಾ ಆಡಳಿತ ಮಂಡಳಿಯು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಚಂದನಗೌಡರ್ ಅವರನ್ನೊಳಗೊಂಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠವು ಜೂನ್ 14ರಂದು ಪ್ರಕರಣವನ್ನು ವಜಾಗೊಳಿಸಿದೆ. 

ಕರ್ನಾಟಕ ಹೈಕೋರ್ಟ್‌ನ ಈ ತೀರ್ಪಿನ ಕುರಿತು ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ಖಾದೀರ್ ಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, "ಸವಾಲಿನ ಸಂದರ್ಭದಲ್ಲಿ ನಮ್ಮ ಬೆಂಬಲಕ್ಕೆ ನಿಂತ ವಕೀಲರು ಹಾಗೂ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇವೆ" ಎಂದು ಹೇಳಿದ್ದಾರೆ. 

ನಿಯಮಗಳನ್ನು ಉಲ್ಲಂಘಿಸಿದ್ದ ಪೊಲೀಸರು

ಜನವರಿ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಸಂಭಾಷಣೆಗಳನ್ನು ಹೊಂದಿದ್ದ ನಾಟಕದ ವಿಡಿಯೊ ವೈರಲ್ ಆದ ನಂತರ ಆ ಸಂಭಾಷಣೆಗಳನ್ನು ಪ್ರಸ್ತುತಪಡಿಸಿದ್ದ 11 ವರ್ಷದ ಆಯೇಷಾ ಎಂಬ ವಿದ್ಯಾರ್ಥಿನಿಯನ್ನು ಗುರಿಯಾಗಿಸಿಕೊಳ್ಳಲಾಗಿತ್ತು. ಈ ಸಂಬಂಧ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿನಿಯ ತಾಯಿ ನಝ್‌ಬುನ್ನೀಸಾ ಹಾಗೂ ಶಾಲೆಯ ಶಿಕ್ಷಕಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ವಿದ್ಯಾರ್ಥಿನಿಯ ತಾಯಿ ಹಾಗೂ ಶಿಕ್ಷಕಿಯನ್ನು ಜನವರಿ 30, 2020ರಂದು ಬಂಧಿಸಲಾಗಿತ್ತು.

 ನಾಟಕ ಪ್ರದರ್ಶನವಾದ ಒಂಬತ್ತು ದಿನಗಳ ನಂತರ ಎರಡು ವಾರ ಕಾಲ ಅವರಿಬ್ಬರೂ ಜೈಲುವಾಸ ಅನುಭವಿಸಿದ್ದರು. ನಂತರ ಜಿಲ್ಲಾ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ದೇಶದ್ರೋಹ ಕಂಡು ಬಂದಿಲ್ಲ ಎಂದು ಅಭಿಪ್ರಾಯ ಪಟ್ಟು, ಅವರಿಬ್ಬರಿಗೂ ಜಾಮೀನು ಮಂಜೂರು ಮಾಡಿತ್ತು.

ಇದಕ್ಕೂ ಮುನ್ನ ಆಗಸ್ಟ್, 2021ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟಿನ ಬೆಂಗಳೂರು ಪೀಠವು ಪೊಲೀಸರ ತನಿಖಾ ವಿಧಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪೊಲೀಸರು ಮಕ್ಕಳನ್ನು ವಿಚಾರಣೆಗೊಳಪಡಿಸುವಾಗ ಸಮವಸ್ತ್ರ ಧರಿಸಿ ಹಾಜರಿರುವುದು, ಶಸ್ತ್ರಾಸ್ತ್ರ ಹೊಂದಿರುವುದು ಬಾಲನ್ಯಾಯ ಕಾಯ್ದೆಯ ಗಂಭೀರ ಸ್ವರೂಪದ ಉಲ್ಲಂಘನೆ ಎಂದು ಆಗ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ. ಅಭಯ್ ಓಕಾ ಹಾಗೂ ನ್ಯಾ. ಎನ್.ಎಸ್.ಸಂಜಯ್ ಸಿಂಗ್ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿತ್ತು.  

ಇದಲ್ಲದೆ, ಮಕ್ಕಳೊಂದಿಗೆ ಪೊಲೀಸ್ ಅಧಿಕಾರಿಗಳು ಸಂವಾದಿಸುವಾಗ ಸಿವಿಲ್ ವಸ್ತ್ರ ಧರಿಸಿರಬೇಕು ಹಾಗೂ ಬಾಲಕಿಯರೊಂದಿಗೆ ವ್ಯವಹರಿಸುವಾಗ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಬಳಸಬೇಕು ಎಂಬ ವಿಶೇಷ ಬಾಲನ್ಯಾಯ ಪೊಲೀಸ್ ಘಟಕದ ಉಪ ನಿಯಮ 5 ಅನ್ನು ಉಲ್ಲೇಖಿಸಿತ್ತು.

ಇದೇ ಪ್ರಕರಣದಲ್ಲಿ ಮಕ್ಕಳನ್ನು ವಿಚಾರಣೆಗೊಳಪಡಿಸುವಾಗ ಸಶಸ್ತ್ರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದ ಕುರಿತು ಹಾಲಿ ಮೂಡಿಗೆರೆ ಶಾಸಕಿ ನಯನಾ ಜ್ಯೋತಿ ಝಾವರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಈ ಅಂಶಗಳನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು. ಸುಮಾರು ಒಂಬತ್ತು ವರ್ಷದಷ್ಟು ಕಿರಿಯರಾದ ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 85 ವಿದ್ಯಾರ್ಥಿಗಳು ಪೊಲೀಸರ ವಿಚಾರಣೆ ಎದುರಿಸಬೇಕಾಯಿತು ಎಂದು ಈ ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

ಈ ಸಂಬಂಧ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ಕರ್ನಾಟಕ ಪೊಲೀಸರು, ಮಕ್ಕಳನ್ನು ವಿಚಾರಣೆಗೆ ಒಳಪಡಿಸುವಾಗ ಪೊಲೀಸರು ಹಲವು ಬಾರಿ ತಪ್ಪೆಸಗಿದ್ದಾರೆ ಎಂದು ಒಪ್ಪಿಕೊಂಡಿದ್ದರು. ಶಾಲಾ ನಾಟಕದ ಬಗ್ಗೆ ವಿದ್ಯಾರ್ಥಿಗಳ ವಿಚಾರಣೆ ನಡೆಸಲು ಬೀದರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಸವೇಶ್ವರ ಹೀರಾ ನೇತೃತ್ವದ ತನಿಖಾ ತಂಡ ಐದು ಬಾರಿ ಶಾಲೆಗೆ ಭೇಟಿ ನೀಡಿದ್ದಾಗ thenewsminute.com ಸುದ್ದಿ ಸಂಸ್ಥೆಯ ಪ್ರತಿನಿಧಿಗಳೂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಟಕ ರಚಿಸಿದವರಾರು ಹಾಗೂ ಅದಕ್ಕೆ ಸಂಭಾಷಣೆ ಬರೆದವರಾರು ಎಂದು ಪೊಲೀಸರು ಪ್ರಶ್ನಿಸಿದ್ದರು.

ನಂತರ, ವಿದ್ಯಾರ್ಥಿಗಳ ವಿಚಾರಣೆ ನಡೆಸುವಾಗ ಪೊಲೀಸರು ಸಮವಸ್ತ್ರ ಹಾಗೂ ಸಶಸ್ತ್ರಧಾರಿಗಳಾಗಿ ಹಾಜರಿರುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕರ್ನಾಟಕ ಪೊಲೀಸರು ತಪ್ಪೊಪ್ಪಿಕೊಂಡಿದ್ದರು. ಈ ಸಂಬಂಧ ಪೊಲೀಸರು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತನಿಖಾಧಿಕಾರಿ ಬಸವೇಶ್ವರ ಹೀರಾ ಹೆಸರನ್ನು ಉಲ್ಲೇಖಿಸಲಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ವಿಡಂಬನಾತ್ಮಕ ನಾಟಕ

ಪ್ರಕರಣ ದಾಖಲಾಗಲು ಕಾರಣವಾಗಿದ್ದ ನಾಟಕವನ್ನು ದಕ್ಕನಿ ಭಾಷೆಯಲ್ಲಿ 4, 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳು ಶಾಹೀನ್ ಶಾಲೆಯಲ್ಲಿ ಪ್ರದರ್ಶಿಸಿದ್ದರು. ದೇಶದಲ್ಲಿ ಪೌರ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟೀಯ ಪೌರ ದಾಖಲೆ ಕಾಯ್ದೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದ ಸಂದರ್ಭದಲ್ಲಿ ಪ್ರದರ್ಶನಗೊಂಡಿದ್ದ ಈ ನಾಟಕದಲ್ಲಿ ಈ ಕಾಯ್ದೆಗಳ ಅಗತ್ಯತೆ ಕುರಿತು ಪ್ರಶ್ನಿಸಲಾಗಿತ್ತು. ಈ ನಾಟಕದಲ್ಲಿ ಬಳಕೆಯಾಗಿದ್ದ ಒಂದು ಸಂಭಾಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲಾಗಿತ್ತು. 

ಈ ಸಂಭಾಷಣೆಯನ್ನು ಮಾನಹಾನಿಕಾರಕ ಎಂದು ಪರಿಗಣಿಸಿದ ಹಿಂದೂ ಬಲಪಂಥೀಯ ಕಾರ್ಯಕರ್ತರು ನಾಟಕದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಭಾಷಣೆಯ ದೃಶ್ಯವು ಪ್ರಧಾನಿ ನರೇಂದ್ರ ಮೋದಿಯು ದಾಖಲೆಗಳನ್ನು ಕೇಳುತ್ತಿದ್ದು, ಅವನ್ನು ಒದಗಿಸದಿದ್ದರೆ ನಮ್ಮನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದು ತನ್ನ ಅಜ್ಜಿಗೆ ಮೊಮ್ಮಗಳೊಬ್ಬಳು ಹೇಳುತ್ತಿರುವುದರೊಂದಿಗೆ ಪ್ರಾರಂಭವಾಗುತ್ತದೆ. ಆಗ ಆಕೆಯ ಅಜ್ಜಿಯು ನಮ್ಮ ಕುಟುಂಬವು ಸಮಾಧಿಯಾಗಿರುವ ಸ್ಮಶಾನದಲ್ಲಿ ಆ ದಾಖಲೆಗಳಿವೆ ಎಂದು ಉತ್ತರಿಸುತ್ತಾಳೆ ಹಾಗೂ ಒಂದು ಕಾಲದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ನಾವು ದೇಶಕ್ಕೆ ಸೇರಿರುವ ದಾಖಲೆಗಳನ್ನು ಹೇಗೆ ಕೇಳುತ್ತಾನೆ ಎಂದು ಸೋಜಿಗ ವ್ಯಕ್ತಪಡಿಸುತ್ತಾಳೆ. 

ನಂತರ ಬೈಯುವ ಆಕೆ, ಚಪ್ಪಲಿಯೊಂದನ್ನು ಎತ್ತಿಕೊಂಡು, ದಾಖಲೆಗಳನ್ನು ಕೇಳಿದಾಗ ಅವರನ್ನು ಚಪ್ಪಲಿಯಲ್ಲಿ ಹೊಡಿ ಎಂದು ಕಿಡಿ ಕಾರುತ್ತಾಳೆ. ಇದರೊಂದಿಗೆ ಮುಂದುವರಿಯುವ ನಾಟಕದಲ್ಲಿ ಬಾಲಕಿಯು ದಾಖಲೆಗಳನ್ನು ಹೇಗೆ ಸಿದ್ಧಪಡಿಸುವುದು ಎಂದು ನೆರೆಯಾಕೆಯನ್ನು ಪ್ರಶ್ನಿಸಿದಾಗ, ಆಕೆ ನಮ್ಮ ದಾಖಲೆಗಳನ್ನು ಇಲಿ ತಿಂದು ಹಾಕಿತು, ಇಲಿಯನ್ನು ಬೆಕ್ಕು ತಿಂದು ಹಾಕಿತು, ಬೆಕ್ಕನ್ನು ನಾಯಿ ತಿಂದು ಹಾಕಿತು, ನಾಯನ್ನು ಮುನಿಸಿಪಾಲಿಟಿಯವರು ಎತ್ತಿಕೊಂಡು ಹೋದರು. ಹೀಗಾಗಿ ನಮ್ಮ ದಾಖಲೆಗಳು ಸರ್ಕಾರದ ಬಳಿ ಸುರಕ್ಷಿತವಾಗಿವೆ ಎಂಬರ್ಥದಲ್ಲಿ ಉತ್ತರಿಸುತ್ತಾಳೆ. 

ಮುಂದುವರಿದು ಬಾಲಕಿಯ ಕುಟುಂಬದ ದಾಖಲೆಯು ಕಸದ ರಾಶಿಯಲ್ಲಿ ಸೇರಿಕೊಂಡಿರಬಹುದು ಮತ್ತು ಆ ಕಸವನ್ನೂ ಮುನಿಸಿಪಾಲಿಟಿಯವರು ಎತ್ತಿಕೊಂಡು ಹೋಗಿದ್ದಾರೆ. ಹೀಗಾಗಿ ಆಕೆಯ ಕುಟುಂಬದ ದಾಖಲೆಯೂ ಸರ್ಕಾರದ ಬಳಿ ಸುರಕ್ಷಿತವಾಗಿದೆ ಎಂಬರ್ಥದ ಮಾತುಗಳನ್ನಾಡುತ್ತಾಳೆ.

ನಾಟಕದ ಈ ಎರಡು ದೃಶ್ಯಾವಳಿಗಳು ವಿವಾದಾತ್ಮಕ ಸ್ವರೂಪ ಪಡೆದು ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿನಿಯೊಬ್ಬಳ ತಾಯಿ ಹಾಗೂ ಶಾಲಾ ಶಿಕ್ಷಕಿಯೋರ್ವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಸುದೀರ್ಘ ಮೂರೂವರೆ ವರ್ಷಗಳ ವಿಚಾರಣೆಯ ನಂತರ ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಜೂನ್ 14ರಂದು ವಜಾಗೊಳಿಸಿದೆ.

ಕೃಪೆ: Thenewsminute.com

share
Next Story
X