ಹಾಸನ | ಜೊತೆಗಿದ್ದ ಸ್ನೇಹಿತನನ್ನು ಬೆತ್ತಲೆಗೊಳಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ; ಮೂವರ ಬಂಧನ

ಅರಕಲಗೂಡು (ಹಾಸನ): ಮದ್ಯಪಾನ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆ ನೃತ್ಯ ಮಾಡುತ್ತಿದ್ದ ಆರೋಪದ ಅಡಿ ಮೂವರು ಯುವಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುವ ಘಟನೆ ಪಟ್ಟಣದಲ್ಲಿ ತಡರಾತ್ರಿ ವರದಿಯಾಗಿದೆ.
ದಯ, ರಂಜಿತ್, ಆನಂದ್ ಬಂಧಿತ ಯುವಕರು ಎಂದು ತಿಳಿದು ಬಂದಿದೆ.
ಮೂವರು ಯುವಕರು ಸ್ನೇಹಿತರಾಗಿದ್ದು, ಮದ್ಯಪಾನ ಮಾಡಿ ಬಟ್ಟೆ ಬಿಚ್ಚಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದ್ದರು. ಈ ಕುರಿತ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ನೇಹಿತನನ್ನು ಬೆತ್ತಲೆಗೊಳಿಸಿ ಕಾರು ಢಿಕ್ಕಿಹೊಡೆಯುವಂತೆ ಗೊಚರಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರು ಯುವಕರನ ವಶಕ್ಕೆ ಪಡೆದು, ವಿಚಾರ ನಡೆಸಿ ನ್ಯಾಯಾಲಯ ವಶಕ್ಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
Next Story





