Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸಿಇಟಿ: (ಬಿಎಸ್‌ಸಿ) ಕೃಷಿಯಲ್ಲಿ...

ಸಿಇಟಿ: (ಬಿಎಸ್‌ಸಿ) ಕೃಷಿಯಲ್ಲಿ ಎಕ್ಸ್‌ಪರ್ಟ್ ಕಾಲೇಜಿನ ಬೈರೇಶ್‌ಗೆ ಮೊದಲ ರ‍್ಯಾಂಕ್

15 Jun 2023 6:56 PM IST
share
ಸಿಇಟಿ: (ಬಿಎಸ್‌ಸಿ) ಕೃಷಿಯಲ್ಲಿ ಎಕ್ಸ್‌ಪರ್ಟ್ ಕಾಲೇಜಿನ ಬೈರೇಶ್‌ಗೆ ಮೊದಲ ರ‍್ಯಾಂಕ್

ಮಂಗಳೂರು, ಜೂ. 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ-2023 (ಸಿಇಟಿ) ಫಲಿತಾಂಶವನ್ನು ಗುರುವಾರ ಪ್ರಕಟಗೊಂಡಿದ್ದು ಬೈರೇಶ್ ಎಸ್.ಎಚ್ ಅವರು  ಬಿಎಸ್‌ಸಿ ಕೃಷಿಯಲ್ಲಿ ಶೇ 96.7 ಅಂಕ  ಪಡೆದು ಮೊದಲ ರ‍್ಯಾಂಕ್ ಗಳಿಸಿದ್ದಾರೆ.  ಬೈರೇಶ್, ಕ್ವಾಲಿಫಿಕೇಷನ್‌ನಲ್ಲಿ 99.75 ಅಂಕ ಗಳಿದ್ದು, ಸಿಟಿಟಿಯಲ್ಲಿ 93.75 ಅಂಕ ಪಡೆದಿದ್ದಾರೆ.

ಮಂಗಳೂರಿನ ಎಕ್ಸ್‌ಪರ್ಟ್ ಪಿಯು  ಕಾಲೇಜಿನ ವಿದ್ಯಾರ್ಥಿ  ಬೈರೇಶ್ ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್‌ನಲ್ಲಿ 2ನೇ ರ‍್ಯಾಂಕ್ ( ಶೇ 98.1), ಬಿ-ಫಾರ್ಮಾ ಮತ್ತು ಡಿ-ಫಾರ್ಮಾದಲ್ಲಿ 4ನೇ  ರ‍್ಯಾಂಕ್ (ಶೇ 96.66), ಪಶುವೈದ್ಯಕೀಯ ವಿಜ್ಞಾನದಲ್ಲಿ 4ನೇ  ರ‍್ಯಾಂಕ್  (ಶೇ 96.66), ಬಿಎಸ್‌ಸಿ ನರ್ಸಿಂಗ್‌ನಲ್ಲಿ 4ನೇ ರ‍್ಯಾಂಕ್  ಮತ್ತು  ಇಂಜಿನಿಯರಿಂಗ್ ನಲ್ಲಿ 16ನೇ ರ‍್ಯಾಂಕ್ ಪಡೆದಿದ್ದಾರೆ.

ಬೈರೇಶ್ ಅವರ ತಂದೆ ಹರೀಶ್ ಎಸ್.ಬಿ. ಅವರು ಕೋಲಾರದ ಕೆಎಂಎಫ್‌ನಲ್ಲಿ ಸೀನಿಯರ್ ಕೆಮಿಸ್ಟ್ ಆಗಿದ್ದಾರೆ. ತಾಯಿ ರಾಧಮ್ಮ  ಕಿರಿಯ ಪ್ರಾಥಮಿಕ  ಶಾಲೆಯಲ್ಲಿ  ಶಿಕ್ಷಕಿಯಾಗಿದ್ದಾರೆ.

ಕಾರ್ಡಿಯಾಲಜಿಸ್ಟ್  ಕನಸು: ಕಾರ್ಡಿಯಾಲಜಿಸ್ಟ್ ಆಗುವುದು ನನ್ನ ಕನಸು. ದೇಶದಲ್ಲಿ ಉತ್ತಮ  ವೈದ್ಯರಿಗೆ  ಬೇಡಿಕೆ ಇರುವ  ಕಾರಣದಿಂದ ತಾನು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣವಾಗಿದೆ ಎಂದು ರ‍್ಯಾಂಕ್ ವಿಜೇತ ಬೈರೇಶ್ ತಿಳಿಸಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 48ನೇ ರ‍್ಯಾಂಕ್ ಸಿಕ್ಕಿದೆ. ಇದರ ಜತೆಗೆ ಸಿಇಟಿ ಕೂಡ ಬರೆದಿದ್ದೇನೆ. ಆದರೆ ನನ್ನ ಮೊದಲ ಆದ್ಯತೆ ನೀಟ್ ಆಗಿತ್ತು. ನೀಟ್‌ಗೆ ತಯಾರಿ ಸಿಇಟಿಯನ್ನು ಎದುರಿಸಲು ಸುಲಭವಾಯಿತು. ಕುಟುಂಬದಲ್ಲಿ  ವೈದ್ಯರಿದ್ದಾರೆ.  ಅವರಂತೆ ನನಗೂ ಇದೇ ವೃತ್ತಿಯನ್ನು ಮಾಡಬೇಕು  ಎನ್ನುವ ಕನಸು ಇತ್ತು.  ಮುಂದೆ  ಆ ಕನಸು  ನನಸಾಗಲಿದೆ ಎಂದರು.

ಏಳು ವಿಭಾಗದಲ್ಲಿ ಮೊದಲ 10 ರ‍್ಯಾಂಕ್: ಏಳು ವಿಭಾಗದ ಮೊದಲ ಹತ್ತು ರ‍್ಯಾಂಕ್ ಗಳಲ್ಲಿ ಆರು ರ‍್ಯಾಂಕ್ ಗಳನ್ನು ಬೈರೇಶ್ ಎಸ್.ಎಚ್. ಪಡೆದುಕೊಂಡು ಹೊಸ ಇತಿಹಾಸ ಸಷ್ಟಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 710 ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ಜನರಲ್ ಮೆರಿಟ್ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 48ನೇ ರ‍್ಯಾಂಕ್ ಪಡೆದಿದ್ದರು.

2023ನೇ ಸಾಲಿನ ಸಿಇಟಿ ಪರೀಕ್ಷೆಯ ಏಳು ವಿಭಾಗದ ಮೊದಲ 10 ರ‍್ಯಾಂಕ್ ಗಳಲ್ಲಿ 7 ರ‍್ಯಾಂಕ್, ಮೊದಲ 50 ರ‍್ಯಾಂಕ್ನಲ್ಲಿ 20 ರ‍್ಯಾಂಕ್ ಹಾಗೂ ಮೊದಲ 100 ರ‍್ಯಾಂಕ್ ನಲ್ಲಿ 47 ರ‍್ಯಾಂಕ್, ಮೊದಲ 150ರಲ್ಲಿ 77 ರ‍್ಯಾಂಕ್, ಮೊದಲ 200 ರ‍್ಯಾಂಕ್ ಗಳಲ್ಲಿ 116, ಮೊದಲ 300 ರ‍್ಯಾಂಕ್ ಗಳಲ್ಲಿ 169 ರ‍್ಯಾಂಕ್ ಗಳನ್ನು ಎಕ್ಸ್‌ಪರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ರಾಹುಲ್ ವೈ ಬಿಎಸ್ಸಿ ಕೃಷಿಯಲ್ಲಿ 19, ಪಶುವೈದ್ಯಕೀಯದಲ್ಲಿ 22, ನರ್ಸಿಂಗ್‌ನಲ್ಲಿ 22, ಬಿಎನ್‌ವೈಎಸ್‌ನಲ್ಲಿ 26,  ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 43ನೇ ರ‍್ಯಾಂಕ್, ಅದಿತಿ ಬಿ.ಎನ್. ಅವರಿಗೆ ಬಿಎಸ್ಸಿ ಕೃಷಿಯಲ್ಲಿ 24, ಬಿಎನ್‌ವೈಎಸ್‌ನಲ್ಲಿ 61ನೇ ರ‍್ಯಾಂಕ್, ಮಧುಪ್ರೀಯಾ ಅವರಿಗೆ ಇಂಜಿನಿಯರಿಂಗ್‌ನಲ್ಲಿ 26, ಬಿಎಸ್ಸಿ ಕಷಿಯಲ್ಲಿ 37, ಬಿ ಫಾರ್ಮಾ ಮತ್ತು ಡಿ ಫಾರ್ಮಾದಲ್ಲಿ 92ನೇ ರ‍್ಯಾಂಕ್, ಶ್ರೀವತ್ಸ ಲಕ್ಷ್ಮ್ಮಣ ಹೆಗಡೆ ಅವರಿಗೆ ಬಿಎಸ್ಸಿ ಕಷಿಯಲ್ಲಿ 35, ಬಿಎನ್‌ವೈಎಸ್‌ನಲ್ಲಿ 52, ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ 97ನೇ ರ‍್ಯಾಂಕ್, ಸೋಮಶೇಖರ್ ಆರ್. ನಡು ನಮನಿ ಬಿಎನ್‌ವೈಎಸ್‌ನಲ್ಲಿ 42ನೇ ರ‍್ಯಾಂಕ್, ಪಶು ವೈದ್ಯಕೀಯದಲ್ಲಿ 68, ನರ್ಸಿಂಗ್‌ನಲ್ಲಿ 68ನೇ ರ‍್ಯಾಂಕ್, ವರುಣ್ ಕೆ.ಆರ್. ಕಷಿಯಲ್ಲಿ 55, ಬಿಎನ್‌ವೈಎಸ್‌ನಲ್ಲಿ 85, ಪಶುವೈದ್ಯಕೀಯ ಹಾಗೂ ನರ್ಸಿಂಗ್‌ನಲ್ಲಿ 99ನೇ ರ‍್ಯಾಂಕ್, ಸ್ವಸ್ತಿಕ್ ಐಲ್ ಪಶು ಕಷಿಯಲ್ಲಿ 46, ಬಿಎನ್‌ವೈಎಸ್ 55, ಪಶುವೈದ್ಯಕೀಯದಲ್ಲಿ 83ನೇ ರ‍್ಯಾಂಕ್, ಸುಭಾಷ್ ಗೌಡ ಕೆ.ಎಸ್ ಕಷಿ ಪ್ರಾಯೋಗಿಕ 7, ಬಿಎನ್‌ವೈಎಸ್ 58, ಕಷಿಯಲ್ಲಿ 69, ಪಶು ವೈದ್ಯಕೀಯದಲ್ಲಿ 71, ನರ್ಸಿಂಗ್‌ನಲ್ಲಿ 71ನೇ ರ‍್ಯಾಂಕ್, ಹೇಮಂತ್ ಜೆ. ಇಂಜಿನಿಯರಿಂಗ್‌ನಲ್ಲಿ 60ನೇ ರ‍್ಯಾಂಕ್, ಹೇಮಚಂದ್ರ ಸಿ. ಕಷಿಯಲ್ಲಿ 62ನೇ ರ‍್ಯಾಂಕ್, ಪ್ರೀತಂ ಚಂದ್ರ ಬಿ. ಯಡಗೆರೆ ಇಂಜಿನಿಯರಿಂಗ್‌ನಲ್ಲಿ 67ನೇ ರ‍್ಯಾಂಕ್, ಸಮದ್ಧ ಮುಖ್ಯೋಪಾಧ್ಯಾಯ ಇಂಜಿನಿಯರಿಂಗ್‌ನಲ್ಲಿ 75ನೇ ರ‍್ಯಾಂಕ್, ಅಚಿಂತ್ಯ ಅರವಿಂದ ರೈ ಎಂಜಿನಿಯರಿಂಗ್‌ನಲ್ಲಿ 78ನೇ ರ‍್ಯಾಂಕ್, ಸಮರ್ಥ್ ಸಿ. ಶೆಟ್ಟಿ ಬಿಎನ್‌ವೈಎಸ್‌ನಲ್ಲಿ 72ನೇ ರ‍್ಯಾಂಕ್, ಅಪೂರ್ವ ಅಸುತಿ ಅವರು ಕೃಷಿಯಲ್ಲಿ 91ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಏಳು ವಿಭಾಗದ ಮೊದಲ 100 ರ‍್ಯಾಂಕ್ ಗಳಲ್ಲಿ 47 ರ‍್ಯಾಂಕ್ ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

share
Next Story
X