ಬೈಂದೂರು: ಸಿಡಿಲು ಬಡಿದು ಮನೆಯ ಛಾವಣಿಗೆ ಹಾನಿ

ಉಡುಪಿ, ಜೂ.15: ಜಿಲ್ಲೆಯಲ್ಲಿ ದುರ್ಬಲ ಮುಂಗಾರು ಮುಂದು ವರಿದಿದ್ದು, ನಿನ್ನೆ ಸಂಜೆ ಬೈಂದೂರು ತಾಲೂಕಿನ ಕಂಬದಕೋಣೆಯ ಗಣಪಯ್ಯ ಜೋಗಿ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ತಗಡು ಶೀಟಿನ ಛಾವಣಿಗೆ ವ್ಯಾಪಕ ಹಾನಿಯಾಗಿದೆ.
ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 9.7ಮಿ.ಮೀ. ಮಳೆಯಾಗಿದೆ. ಕಾಪುನಲ್ಲಿ 14.5ಮಿ.ಮೀ., ಹೆಬ್ರಿಯಲ್ಲಿ 13.1, ಉಡುಪಿಯಲ್ಲಿ 11.5, ಬ್ರಹ್ಮಾವರ ದಲ್ಲಿ 10.1, ಕುಂದಾಪುರದಲ್ಲಿ 9.1, ಕಾರ್ಕಳದಲ್ಲಿ 8.4 ಹಾಗೂ ಬೈಂದೂರಿನಲ್ಲಿ 6.7ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಗಳು ಬಂದಿವೆ.
ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾ ಗಲಿದೆ. ಜಿಲ್ಲೆಯ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆ. ಹಾಗೂ ಕನಿಷ್ಠ ಉಷ್ಣಾಂಶ 25.5 ಡಿಗ್ರಿ ಸೆ. ಇರಲಿದೆ. ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3ಡಿಗ್ರಿ ಸೆ. ಅಧಿಕ ಇರಲಿದೆ ಎಂದು ವರದಿ ಹೇಳಿದೆ.
ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ದಿಂದ ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದ ಗಾಳಿಯುವ ಬೀಸುವ ಸಾಧ್ಯತೆಯೊಂದಿಗೆ ಮೂರು ಮೀ. ಎತ್ತರದ ಅಲೆಗಳೂ ದಡವನ್ನು ಅಪ್ಪಳಿಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.







