ಸಿಇಟಿ ಪರೀಕ್ಷೆ: ಕಾರ್ಕಳದ ಪ್ರಣಾವ್ ಗುಜ್ಜಾರ್‌ಗೆ ಆರನೇ ರ‍್ಯಾಂಕ್

ಉಡುಪಿ, ಜೂ.15: ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಬಿಎಸ್ಸಿ ಕೃಷಿ ವಿಭಾಗದಲ್ಲಿ ಕಾರ್ಕಳ ಕುಕ್ಕುಂದೂರು ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಣಾವ್ ಗುಜ್ಜಾರ್ ಶೇ.94.5 ಅಂಕ ಗಳಿಸುವ ಮೂಲಕ ಆರನೇ ರ‍್ಯಾಂಕ್ ಗಳಿಸಿದ್ದಾರೆ.
ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ಪ್ರಣವ್ ಗುಜ್ಜರ್, ತಂದೆ ವೈದ್ಯರಾಗಿದ್ದು, ತಾಯಿ ಗೃಹಿಣಿಯಾಗಿ ದ್ದಾರೆ. ಇಂಜಿನಿಯರ್ ಆಗಬೇಕೆಂಬ ಆಸೆ ನನ್ನದು. ಜ್ಞಾನಸುಧಾದ ಹಾಸ್ಟೆಲ್‌ನಲ್ಲಿದ್ದುಕೊಂಡು ರಾತ್ರಿ 11ರವರೆಗೆ ಓದುತ್ತಿದ್ದೆ. ತರಗತಿಯ ಹೊರಗೆ ಐದರಿಂದ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಅದೇ ರೀತಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದ್ದೆ ಎಂದು ಪ್ರಣವ್ ತಿಳಿಸಿದರು.
ಈಗಾಗಲೇ ಜೆಇಇ ಪರೀಕ್ಷೆಯಲ್ಲಿ ಶೇ.99.63ರಷ್ಟು ಅಂಕ ಗಳಿಸಿದ್ದು, ಸುರತ್ಕಲ್ ಎನ್‌ಐಟಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಮಾಡಲು ಯೋಜಿಸಿದ್ದೇನೆ. ಅದೇ ರೀತಿ ಜೆಇಇ ಅಡ್ವಾನ್ಸ್ ಕೂಡ ಬರೆದಿದ್ದೇನೆ ಎಂದು ಅವರು ತಿಳಿಸಿದರು.
Next Story





