ಮುಂಬೈನಲ್ಲಿ ರಾಷ್ಟ್ರೀಯ ಶಾಸಕರ ಸಮ್ಮೇಳನ: ಸ್ಪೀಕರ್ ಯು.ಟಿ. ಖಾದರ್ ಭಾಗಿ

ಮಹಾರಾಷ್ಟ್ರ: ಮುಂಬೈನಲ್ಲಿ ಇಂದಿನಿಂದ ಆರಂಭಗೊಂಡ ಪ್ರಪ್ರಥಮ ರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕಸಭೆ ಮಾಜಿ ಸ್ಪೀಕರ್ ಗಳಾದ ಸುಮಿತ್ರಾ ಮಹಾಜನ್ ಡಾ.ಮೀರಾ ಕುಮಾರ್, ಶಿವರಾಜ್ ಪಾಟೀಲ್, ಡಾ.ಮನೋಹರ್ ಜೋಷಿ ಸೇರಿದಂತೆ ದೇಶದ ಪ್ರಮುಖ ಸಂಸದೀಯಪಟುಗಳು ಪಾಲ್ಗೊಂಡಿದ್ದರು.
ಸಮ್ಮೇಳನ ಅಧಿಕೃತವಾಗಿ ನಾಳೆ(ಜೂ.16) ಉದ್ಘಾಟನೆಯಾಗಲಿದ್ದು, ವಿವಿಧ ಗೋಷ್ಠಿಗಳು, ಚರ್ಚೆ, ಚಿಂತನ-ಮಂಥನ ನಡೆಯಲಿದೆ.








