Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಪಾಯದಲ್ಲಿ ಪ್ರಜಾಪ್ರಭುತ್ವ: ಜಾಕ್...

ಅಪಾಯದಲ್ಲಿ ಪ್ರಜಾಪ್ರಭುತ್ವ: ಜಾಕ್ ಡಾರ್ಸಿ ಆರೋಪದ ಹಿನ್ನೆಲೆಯಲ್ಲಿ

ಪ್ರಣೀತ್ ಪಾಠಕ್ಪ್ರಣೀತ್ ಪಾಠಕ್16 Jun 2023 12:11 PM IST
share
ಅಪಾಯದಲ್ಲಿ ಪ್ರಜಾಪ್ರಭುತ್ವ: ಜಾಕ್ ಡಾರ್ಸಿ ಆರೋಪದ ಹಿನ್ನೆಲೆಯಲ್ಲಿ

ಕೆಲವು ಖಾತೆಗಳನ್ನು ನಿರ್ಬಂಧಿಸದಿದ್ದರೆ ಭಾರತದಲ್ಲಿ ಟ್ವಿಟರನ್ನೇ ಮುಚ್ಚಿಸುವ ಬೆದರಿಕೆ ಮೋದಿ ಸರಕಾರದಿಂದ ಇತ್ತು ಎಂದು ಟ್ವಿಟರ್ ಸಹ ಸಂಸ್ಥಾಪಕ, ಮಾಜಿ ಸಿಇಒ ಜಾಕ್ ಡಾರ್ಸಿ ಆರೋಪಿಸಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ಹಾಳುಮಾಡಲು ಮತ್ತು ಪ್ರತಿಪಕ್ಷವನ್ನು ದಮನಿಸಲು ಸರಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡದ್ದನ್ನು ಇದು ತೋರಿಸುತ್ತದೆ.

ರೈತರ ಪ್ರತಿಭಟನೆಯ ಕೆಲವು ಟ್ವೀಟ್‌ಗಳನ್ನು ತೆಗೆದುಹಾಕದಿದ್ದರೆ ಭಾರತದಲ್ಲಿ ಟ್ವಿಟರ್ ಮೇಲೆಯೇ ನಿಷೇಧ ಹೇರುವುದಾಗಿ ಮತ್ತು ದಾಳಿ ಮಾಡುವುದಾಗಿ ನರೇಂದ್ರ ಮೋದಿ ಸರಕಾರ ಟ್ವಿಟರ್‌ಗೆ ಬೆದರಿಕೆ ಹಾಕಿತ್ತು ಎಂಬುದು ಬಯಲಾಗಿದೆ. ಸಂಸ್ಥೆಯ ಸಹ ಸಂಸ್ಥಾಪಕ, ಮಾಜಿ ಸಿಇಒ ಜಾಕ್ ಡಾರ್ಸಿ ಈ ವಿಚಾರವನ್ನು ಬಹಿರಂಗಪಡಿಸಿದ್ದು, ರಾಜಕೀಯ ಬಿರುಗಾಳಿಯನ್ನೇ ಸೃಷ್ಟಿಸಿದೆ.

ಸರಕಾರ ಈ ಆರೋಪವನ್ನು ನಿರಾಕರಿಸಿದೆ ಮತ್ತು ಅದರ ಬೆಂಬಲಿಗರು ಕೂಡ ಸುಳ್ಳು ಆರೋಪವೆಂದು ಡಾರ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ಯಥಾ ಪ್ರಕಾರ, ಸರಕಾರದ ವಿರುದ್ಧ ‘ಜಾಗತಿಕ ಪಿತೂರಿ’ ಎಂದು ಆರೋಪಿಸಲಾಗಿದ್ದು, ಡಾರ್ಸಿಯ ಉದ್ದೇಶಗಳನ್ನು ಪ್ರಶ್ನಿಸಲಾಗಿದೆ. ಆದರೆ ಟ್ವಿಟರ್ ಸಂಸ್ಥಾಪಕರಿಗೆ ಸುಳ್ಳು ಹೇಳಿ ಆಗಬೇಕಾದದ್ದೇನೂ ಇಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದಾಗಿದೆ. ಹಾಗಾಗಿಯೇ ಅವರ ಸೂಕ್ಷ್ಮ ಮತ್ತು ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಯೋಚಿಸುವುದು ಅಗತ್ಯವಾಗಿದೆ. ಅವರ ಈ ಆರೋಪ, ಮೋದಿ ಸರಕಾರ ವಾಕ್ ಸ್ವಾತಂತ್ರ್ಯವನ್ನು ದಮನಿಸಲು ಮತ್ತು ಪ್ರತಿಪಕ್ಷಗಳ ಶಕ್ತಿ ಕುಂದಿಸಲು ಹೇಗೆಲ್ಲ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನೇ ಬಹಿರಂಗಪಡಿಸಿದೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ಅಪಾಯದಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ.

ವಾಕ್ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವದ ಜೀವಾಳವೇ ಆಗಿದೆ. ಇದು ಪ್ರಜಾಪ್ರಭುತ್ವವು ಜನರಿಗೆ ನೀಡುವ ಅತ್ಯಂತ ಪವಿತ್ರ ಮತ್ತು ಹಕ್ಕುಗಳ ಮುಖ್ಯ ನೆಲೆಯೂ ಹೌದು. ಸರಕಾರವನ್ನು ಪ್ರಶ್ನಿಸಲು, ವಿಮರ್ಶಿಸಲು ಜನರಿಗೆ ಇದು ಅನುವು ಮಾಡಿಕೊಡುತ್ತದೆ. ಮುಕ್ತವಾಗಿ ಯೋಚಿಸಲು ಮತ್ತು ಅಭಿಪ್ರಾಯವನ್ನು ನಿರ್ಭೀತಿಯಿಂದ ವ್ಯಕ್ತಪಡಿಸಲು ಸಾಧ್ಯವಾದಾಗಲೇ ಸಮರ್ಥ ಮತ್ತು ಸಶಕ್ತ ನಾಗರಿಕ ಸಮಾಜ ರೂಪುಗೊಳ್ಳುವುದು ಸಾಧ್ಯ. ವಾಸ್ತವವಾಗಿ, ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವು ಎಷ್ಟು ಅವಶ್ಯಕ ಮತ್ತು ಪರಸ್ಪರ ಸಂಬಂಧ ಹೊಂದಿವೆಯೆಂದರೆ, ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನದ್ದಾಗಿದೆ. ನಮ್ಮ ಸಂವಿಧಾನದ ವಿಧಿ ೧೯ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತದೆ ಮತ್ತು ರಕ್ಷಿಸುತ್ತದೆ.

ಈಗ, ಡಾರ್ಸಿ ಬಹಿರಂಗಪಡಿಸಿರುವುದು ಮತ್ತು ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ಅನುಭವಿಸಿರುವ ಅಥವಾ ತಿಳಿದಿರುವ ವಿಷಯವೆಂದರೆ, ಮೋದಿ ಸರಕಾರ ನಿರಂಕುಶವಾಗಿ ಮತ್ತು ಯಾವುದೇ ಸಮರ್ಥನೀಯ ಸಾರ್ವಜನಿಕ ತರ್ಕವಿಲ್ಲದೆ, ವಾಕ್ ಸ್ವಾತಂತ್ರ್ಯವನ್ನು ನಿಗ್ರಹಿಸುತ್ತಿದೆ ಎಂಬುದು. ಟ್ವಿಟರ್ ಸಾರ್ವಜನಿಕ ಚರ್ಚೆಯ ಪ್ರಮುಖ ವೇದಿಕೆಗಳಲ್ಲಿ ಒಂದಾಗಿರುವುದನ್ನು ನಾವಿಂದು ಕಾಣಬಹುದು. ಅಂಥ ಅಭಿವ್ಯಕ್ತಿ ವೇದಿಕೆಯಲ್ಲಿನ ಭಿನ್ನಾಭಿಪ್ರಾಯಗಳನ್ನು ಸರಕಾರ ನಿಗ್ರಹಿಸಲು ಹೊರಡುವುದು ೧೯ನೇ ವಿಧಿಯ ಉಲ್ಲಂಘನೆ. ಇದು ದಿನದಿಂದ ದಿನಕ್ಕೆ ಸರಕಾರ ನಿರಂಕುಶವಾಗಿ ಸಾಗುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಮಾತ್ರವಲ್ಲ, ಭಾರತೀಯ ನಾಗರಿಕರು ಮುಕ್ತವಾಗಿ ಮತ್ತು ನಿರ್ಭಯವಾಗಿ ಮಾತನಾಡುವ ಹಕ್ಕನ್ನೇ ನಿರ್ಬಂಧಿಸುತ್ತದೆ.

ಸರಕಾರ ತನ್ನ ಕಾನೂನಾತ್ಮಕ ಅಧಿಕಾರವನ್ನು ಕ್ಷುಲ್ಲಕ ರಾಜಕೀಯ ಉದ್ದೇಶಗಳಿಗಾಗಿ ಹೇಗೆ ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಈಗ ಡಾರ್ಸಿ ಮಾಡಿರುವ ಆರೋಪವು ಬಯಲು ಮಾಡುತ್ತದೆ. ಈ ಸರಕಾರ ಕಾನೂನನ್ನು ರಚಿಸುತ್ತಿರುವುದು ಮತ್ತು ಬಳಸುತ್ತಿರುವುದು ಯಾವುದೇ ಸಾರ್ವಜನಿಕ ಒಳಿತಿಗಾಗಿ ಅಲ್ಲ. ಬದಲಾಗಿ ಸಾರ್ವಜನಿಕ ಒಳಿತನ್ನು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದಕ್ಕಾಗಿ ಎಂಬುದು ಈ ಆರೋಪದಿಂದ ಗೊತ್ತಾಗುತ್ತದೆ.

ಈ ಮೂಲಕ ಮೋದಿ ಸರಕಾರವು ದೇಶದಲ್ಲಿ ನ್ಯಾಯಸಮ್ಮತ ಸನ್ನಿವೇಶವನ್ನೇ ಕುಗ್ಗಿಸುತ್ತಿದೆ. ಈ ಬಗೆಯ ನಡೆಯನ್ನು ಕ್ರಿಮಿನಲ್ ಗ್ಯಾಂಗ್‌ಗೆ ಹೋಲಿಸಬಹುದು. ಹೇಗೆ ಅದು ಜನರನ್ನು ಮೌನವಾಗಿ ಬೆದರಿಸಲು ತನ್ನ ಬಲವಂತದ ಶಕ್ತಿಯನ್ನು ಬಳಸುತ್ತದೆಯೋ ಹಾಗೆ ಇಲ್ಲಿ ಆಗುತ್ತಿದೆ. ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸಿದ ಸರಕಾರಗಳೊಂದಿಗಿನ ಅನುಭವಗಳ ಬಗ್ಗೆ ಕೇಳಿದಾಗ ಡಾರ್ಸಿ ಮೊದಲು ಉಲ್ಲೇಖಿಸಿದ್ದೇ ಭಾರತದ ಹೆಸರನ್ನು. ಇದು ನಿಜಕ್ಕೂ ದುಃಖಪಡಬೇಕಾದ ವಿಚಾರ. ಬಿಜೆಪಿ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಹೇಳಿಕೊಳ್ಳುತ್ತದೆ. ಆದರೆ ಅದೇ ಬಿಜೆಪಿಯ ಕಾರಣದಿಂದಾಗಿಯೇ ಭಾರತಕ್ಕೆ ವಾಕ್ ಸ್ವಾತಂತ್ರ್ಯದ ದಮನಕ್ಕಾಗಿ ಜಾಗತಿಕವಾಗಿ ಕೆಟ್ಟ ಹೆಸರು ಬರುವಂತಾಗಬಾರದಿತ್ತು.

ಭಾರತದಲ್ಲಿನ ರಾಜಕೀಯ ಸ್ವಾತಂತ್ರ್ಯವನ್ನು ಮೋದಿ ಸರಕಾರ ದಮನ ಮಾಡಿರುವುದನ್ನು ಡಾರ್ಸಿ ಅವರ ಈ ಆರೋಪ ತೋರಿಸುತ್ತದೆ. ಸಾಂವಿಧಾನಿಕವಾಗಿ ಪ್ರತಿಪಾದಿಸಲಾದ ತಮ್ಮ ಹಕ್ಕುಗಳನ್ನು ಮುಂದಿಟ್ಟು ರೈತರು ಹೋರಾಟಕ್ಕಿಳಿದಿದ್ದಾಗ, ರೈತರನ್ನು ದುರ್ಬಲಗೊಳಿಸಲು ಈ ಸರಕಾರ ಟ್ವಿಟರ್ ಅನ್ನು ಬೆದರಿಸಿತು. ಇದರ ಮೂಲಕ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಸಾಮರ್ಥ್ಯವನ್ನು ನಿರ್ಬಂಧಿಸುವ ಯತ್ನ ನಡೆಯಿತು. ಅವರು ಸರಕಾರವನ್ನು ಟೀಕಿಸುವ ಧ್ವನಿಗಳನ್ನು ಕೇಳದಂತೆ ಮಾಡಲಾಯಿತು. ಇದು ಪ್ರಜಾಸತ್ತಾತ್ಮಕ ಅಭಿಪ್ರಾಯ ರಚನೆಯು ಆದರ್ಶಪ್ರಾಯವಾಗಿ ಇರಬೇಕಾದಲ್ಲಿ ಇಡೀ ವ್ಯವಸ್ಥೆಯನ್ನೇ ವಿರೂಪಗೊಳಿಸಿದ ನಡೆಯಾಗಿತ್ತು.

ಇಂತಹ ಅನಿಯಂತ್ರಿತ ಕ್ರಮಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಒಡ್ಡುವ ಅಪಾಯಗಳನ್ನು ತಡೆಯುವ ತಕ್ಷಣದ ಕ್ರಮಗಳು ತೀರಾ ಅಗತ್ಯ. ರಾಜಕೀಯವಾಗಿ ಸೂಕ್ಷ್ಮ ವಿಚಾರವನ್ನು ತೆಗೆದುಹಾಕಲು ಅಥವಾ ನಿಗ್ರಹಿಸಲು ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆಯೇ ನಿಯಂತ್ರಣ ಹೇರಲು ಹೋದ ನಿದರ್ಶನಗಳನ್ನು ಪಟ್ಟಿ ಮಾಡುವ ಪಾರದರ್ಶಕ ಅಫಿಡವಿಟ್‌ನೊಂದಿಗೆ ಸರಕಾರ ಉತ್ತರಿಸಬೇಕಿದೆ. ಅಂತಹ ಹಸ್ತಕ್ಷೇಪಕ್ಕಾಗಿ ಅನುಸರಿಸಿದ ಪ್ರಕ್ರಿಯೆಯನ್ನು ವಿವರಿಸಬೇಕಿದೆ.

ವಾಕ್ ಸ್ವಾತಂತ್ರ್ಯ ಮತ್ತು ರಾಜಕೀಯ ಕ್ರೋಡೀಕರಣವನ್ನು ಹತ್ತಿಕ್ಕುವ ಅಪಾಯಕಾರಿ ಪ್ರವೃತ್ತಿಯನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿಯ ರಚನೆಯಾಗಬೇಕು. ಅಧಿಕಾರದ ದುರುಪಯೋಗದ ಯಾವುದೇ ನಿದರ್ಶನಗಳಿಗೆ ಅದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು. ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವ ಕ್ರಮಗಳನ್ನು ಮತ್ತು ಸರಕಾರದ ಅನಿಯಂತ್ರಿತತೆ ತಡೆಯಲು ಅಗತ್ಯವಿರುವ ಯಾವುದೇ ಕಾನೂನು ಬದಲಾವಣೆಗಳಿಗೆ ಸಂಸದೀಯ ಸಮಿತಿ ಶಿಫಾರಸು ಮಾಡಬೇಕು.

ಒಂದು ಆಯ್ಕೆಯೆಂದರೆ, ಅಮೆರಿಕದಲ್ಲಿರುವಂತೆ, ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲಿನ ಸರಕಾರದ ತಡೆಯಾಜ್ಞೆಗಳನ್ನು ಮೊದಲು ಕೆಳ ನ್ಯಾಯಾಲಯ ಅನುಮೋದಿಸಬೇಕು. ಆಗ ಸರಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಗಟ್ಟಲು ಸಾಧ್ಯ.

ಅಂತಿಮವಾಗಿ, ಸುಪ್ರೀಂ ಕೋರ್ಟ್ ಡಾರ್ಸಿ ಆರೋಪಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಿದೆ. ಏಕೆಂದರೆ ಡಾರ್ಸಿ ಆಪಾದಿಸಿದಂತೆ ಸರಕಾರದ ಬೆದರಿಕೆ, ಸಂವಿಧಾನದ ೧೯ನೇ ವಿಧಿಯ ಉಲ್ಲಂಘನೆಯಾಗಿದೆ. ಅಂತಹ ಅಧಿಕಾರದ ದುರುಪಯೋಗದ ವಿರುದ್ಧ ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ.

ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಪ್ರಜಾಪ್ರಭುತ್ವದ ಮೇಲಿನ ದಾಳಿ. ಇಂತಹ ದಾಳಿಯನ್ನು ಹಿಮ್ಮೆಟ್ಟಿಸಲು ನಾವೆಲ್ಲರೂ ಒಗ್ಗೂಡುವುದು ಅತ್ಯಗತ್ಯ.

(ಕೃಪೆ: thewire.in)

share
ಪ್ರಣೀತ್ ಪಾಠಕ್
ಪ್ರಣೀತ್ ಪಾಠಕ್
Next Story
X