ಯುವತಿ ಆತ್ಮಹತ್ಯೆ

ಸುಳ್ಯ: ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡೆಕೋಲು ಗ್ರಾಮದ ಪೆರಾಜ ಎಂಬಲ್ಲಿ ಶುಕ್ರವಾರ ನಡೆದಿದೆ.
ಪೆರಾಜ ದೇವಪ್ಪ ನಾಯ್ಕರ ಪುತ್ರಿ ಯಶ್ವಿನಿ (23) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಕೃತ್ಯ ಎಸಗಿದ್ದು, ಹುಲ್ಲು ತರಲು ಹೋಗಿದ್ದ ತಾಯಿ ಮನೆಗೆ ಬಂದಾಗ ನೇಣು ಬಿಗಿದಿರುವುದು ಗೊತ್ತಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.
Next Story