ಮಂಗಳೂರು ವಿವಿ ಅಂತರ್ ಕಾಲೇಜು ಕಬ್ಬಡ್ಡಿ , ಫುಟ್ಬಾಲ್ ಪಂದ್ಯಾಟ
ಕಬ್ಬಡ್ಡಿಯಲ್ಲಿ ಎಸ್ ಡಿಎಂ ಉಜಿರೆ, ಫುಟ್ಬಾಲ್ ನಲ್ಲಿ ಮಡಿಕೇರಿ ಕಾಲೇಜು ಚಾಂಪಿಯನ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಅಂತರ್ ಕಾಲೇಜು ಕಬ್ಬಡ್ಡಿ ಪಂದ್ಯಾಟದಲ್ಲಿ ಎಸ್ ಡಿಎಂ ಕಾಲೇಜು ಉಜಿರೆ ಹಾಗೂ ಫುಟ್ಬಾಲ್ ಪಂದ್ಯಾಟದಲ್ಲಿ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಬ್ಬಡಿ ಪಂದ್ಯಾಟದಲ್ಲಿ ದ್ಬಿತೀಯ ಸ್ಥಾನವನ್ನು ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜು, ತೃತೀಯ ಸ್ಥಾನವನ್ನು ಇಂಡಸ್ ಕಾಲೇಜು ಪುತ್ತೂರು ಹಾಗೂ ಚತುರ್ಥ ಸ್ಥಾನವನ್ನು ಮಂಗಳೂರು ವಿವಿ ಕ್ಯಾಂಪಸ್ ತಂಡವು ಪಡೆದುಕೊಂಡಿತು.
ಫುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಮಂಗಳೂರು ವಿವಿ ಕ್ಯಾಂಪಸ್ ತಂಡವು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಮಡಂತ್ಯಾರ್ ನ ಸಾಕ್ರೆಟ್ ಹಾರ್ಟ್ಸ್ ಕಾಲೇಜು ಹಾಗೂ ಚತುರ್ಥ ಸ್ಥಾನವನ್ನು ನಡುಪದವಿನ ಪಿ.ಎ.ಕಾಲೇಜು ತಂಡವು ಪಡೆದುಕೊಂಡಿತು.
ಈ ಸಂದರ್ಭ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಸೋಮೇಶ್ವರ ದೇವಾಲಯದ ಟ್ರಸ್ಟಿ ವಸಂತ್ ಉಳ್ಳಾಲ್, ಕ್ರೀಡಾ ಪ್ರೇಮಿ ಮೊಯ್ದಿನ್ ಪಜೀರು, ದೈಹಿಕ ಶಿಕ್ಷಣ ವಿಭಾಗದ ಡಾ.ಪ್ರಸನ್ನ ಬಿ.ಕೆ., ಡಾ.ಹರಿದಾಸ್ ಕೂಳೂರು, ಫುಟ್ಬಾಲ್ ಕೋಚ್ ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.





