ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಜೂ.30ರ ವರೆಗೆ ವಿಸ್ತರಣೆ

ಬೆಂಗಳೂರು, ಜೂ. 16: ‘2023-24ರ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಜೂ.30ರ ವರೆಗೆ ವಿಸ್ತರಿಸಿ’ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
ಈ ಹಿಂದೆ 2023-24ನೆ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಜೂ.15ರ ವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು. ಇದೀಗ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರಕಾರ ಈ ಮೇಲ್ಕಂಡ ಆದೇಶ ಮಾಡಿದೆ.
2023-24ನೆ ಸಾಲಿಗೆ ಗ್ರೂಪ್ ‘ಎ’, ಗ್ರೂಪ್-‘ಬಿ’, ಗ್ರೂಪ್-‘ಸಿ’ ಮತ್ತು ಗ್ರೂಪ್-‘ಡಿ’ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಸರಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ಕøತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರಕಾರಿ ನೌಕರರ ವರ್ಗಾವಣೆಯನ್ನು ಪ್ರತಿವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಷರತ್ತಿಗೆ ಒಳಪಟ್ಟು ಮಾಡಬಹುದಾಗಿದೆ.
Next Story





