ಯೆನೆಪೋಯ ದಂತ ಕಾಲೇಜಿನಲ್ಲಿ ಚಿನ್ನದ ಪದಕ ಪುರಸ್ಕಾರ, ವಿದ್ಯಾರ್ಥಿಗಳಿಗೆ ಸಮ್ಮಾನ

ಮಂಗಳೂರು : ಡಾ.ಬಿ.ಎಚ್.ಶ್ರೀಪತಿ ರಾವ್ ಚಿನ್ನದ ಪದಕ ಸನ್ಮಾನ ಕಾರ್ಯಕ್ರಮ ಯೆನೆಪೋಯ ದಂತ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಬಾಯಿ ಮತ್ತು ಮುಖಾಂಗ ಚಿಕಿತ್ಸಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ಸ್ನಾತಕೋತರ ದಂತ ವಿದ್ಯಾರ್ಥಿ ಪುರಸ್ಕಾರವನ್ನು ಡಾ.ಪ್ರಿಯಾಂಕಾ ಮಹಾಮುಂಕರ್ ಹಾಗೂ ಪದವಿ ದಂತ ವಿಭಾಗದಲ್ಲಿ ಡಾ.ಸುನೈನಾ ಎಂ. ಅವರಿಗೆ ನೀಡಿ ಸನ್ಮಾನಿಸಲಾಯಿತು. ದಂತ ಪದವಿ ವಿಭಾಗಗಳಲ್ಲಿ ಅತ್ಯುನ್ನತ ಶ್ರೇಣಿ ಪಡೆದವರನ್ನು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ವಿಜಯಕುಮಾರ್ ಸಮ್ಮಾನಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಬಿ.ಎಚ್.ಶ್ರೀಪತಿ ರಾವ್, ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಮೂಲಕ ಗುರಿಯನ್ನು ಮುಟ್ಟಬೇಕು ಎಂದರು. ಯೆನೆಪೋಯ ದಂತ ಕಾಲೇಜಿನ ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚಾತ್ರ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಗಂಗಾಧರ ಸೋಮಯಾಜಿ, ಸೆಂಟರ್ ಫಾರ್ ಕ್ರೆನಿಫೇಷಿಯಲ್ ಅನೋಮಲ್ಲಿಸ್‌ನ ನಿರ್ದೇಶಕ ಡಾ.ಅಖ್ತರ್ ಹುಸೈನ್ ಉಪಸ್ಥಿತರಿದ್ದರು.
ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಾಮ್ ಎಸ್.ಭಟ್ ಸ್ವಾಗತಿಸಿದರು. ದಂತ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಮಾಜಿ ಜೋಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಮಾಹಿತಿ ನೀಡಿದರು. ಬಾಯಿ ಮತ್ತು ಮುಂಭಾಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ಚಂದ್ರ ಸಮ್ಮಾನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ದರು. ಉಪ ಪ್ರಾಂಶುಪಾಲ ಡಾ.ಹಸನ್ ಸರ್ಫರಾಝ್ ವಂದಿಸಿದರು. ಡಾ.ವರ್ಷಾ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.