‘ಗೃಹ ಜ್ಯೋತಿ’ ನೋಂದಣಿಗೆ ‘ಆಧಾರ್ ಸಂಖ್ಯೆ’ ಜೋಡಣೆ ಕಡ್ಡಾಯ

ಬೆಂಗಳೂರು, ಜೂ. 17: ‘ಬಾಡಿಗೆದಾರರು ಹಾಗೂ ಇತರೆ ಗ್ರಾಹಕರು ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೊರ್ಟಲ್‍ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ಡಿ.ಎಂ.ಸ್ಪಷ್ಟಪಡಿಸಿದ್ದಾರೆ.
‘ಗೃಹಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುವ ಸಂಬಂಧ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿರು ಇಂಧನ ಇಲಾಖೆ, ಗೃಹ ವಿದ್ಯುತ್ ಬಳಕೆದಾರರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರೆ ಮನೆಯ ವಿಳಾಸಕ್ಕೆ ಸಂಬಂಧಪಟ್ಟ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ಜೋಡಣೆ ಮಾಡಿದರೆ ಸದರಿ ಸೌಲಭ್ಯ ಪಡೆದುಕೊಳ್ಳಬಹುದು.
ಗೃಹಜ್ಯೋತಿ ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ಜುಲೈ 1ರಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯ ನೋಂದಣಿಯನ್ನು ನಾಳೆ(ಜೂ. 18)ಯಿಂದಲೇ ಆರಂಭಿಸಲಾಗುವುದು. ಈ ಯೋಜನೆ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಇಂಧನ ಇಲಾಖೆ ತಿಳಿಸಿದೆ.
Next Story





