ಯುಎಇ ಬ್ರಾಹ್ಮಣ ಸಮಾಜದ ಕಾರ್ಯಕ್ರಮ

ಮಂಗಳೂರು: ಯುಎಇ ಬ್ರಾಹ್ಮಣ ಸಮಾಜದ ಸಂವತ್ಸರ ಪೂರ್ತಿ ನಡೆಯಲಿರುವ ವಿಂಶತಿ ಉತ್ಸವದ 2ನೇ ಕಾರ್ಯಕ್ರಮ, ಯಕ್ಷಗಾನ ಸಾಧಕರ ಸನ್ಮಾನ ಮತ್ತು ತಾಳಮದ್ದಳೆ ದುಬೈನ ಫಾರ್ಚ್ಯೂನ್ ಪ್ಲಾಜಾ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು.
ಈ ಸಂದರ್ಭ ಯಕ್ಷಗಾನ ಕಲಾವಿದರಾದ ಪದ್ಮನಾಭ ಉಪಾಧ್ಯಾಯ, ಮಧೂರು ರಾಧಾಕೃಷ್ಣ ನಾವಡ, ಚೈತನ್ಯ ಕೃಷ್ಣ ಪದ್ಯಾಣ, ಮಂಗಳೂರು ಉರ್ವ ಯಕ್ಷಾರಾಧನಾ ಕಲಾಕೇಂದ್ರದ ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರನ್ನು ಚಿನ್ನದ ನಾಣ್ಯದೊಂದಿಗೆ ಸನ್ಮಾನಿಸಲಾಯಿತು.
ವಿಶಂತಿ ಸಮಿತಿ ಗೌರವಾಧ್ಯಕ್ಷ ಪುತ್ತಿಗೆ ವಾಸು ಭಟ್, ಕಾರ್ಯಾಧ್ಯಕ್ಷ ನಾಗರಾಜ ರಾವ್, ಕರ್ನಾಟಕ ಸಂಘ ಅಬುಧಾಬಿಯ ಸರ್ವೋತ್ತಮ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ, ಗೋಪಿಕಾ ಮಯ್ಯ, ಸುಧಾಕರ ಪೇಜಾವರ ಉಪಸ್ಥಿತರಿದ್ದರು.
Next Story