ತೀರ್ಥಹಳ್ಳಿ | ಕಾಲೇಜು ಯುವತಿಯರ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟ ಆರೋಪ; ಎಬಿವಿಪಿ ಮುಖಂಡನ ವಿರುದ್ಧ ಕ್ರಮಕ್ಕೆ ಒತ್ತಾಯ

ಶಿವಮೊಗ್ಗ, ಜೂ.17: ವಾಟ್ಸಪ್ ಗ್ರೂಪ್ ಗಳಲ್ಲಿ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜು ಯುವತಿಯರ ಅಶ್ಲೀಲ ಚಿತ್ರಗಳನ್ನು ಹರಿಬಿಡಲಾಗಿದ್ದು, ವಿಡಿಯೋದಲ್ಲಿ ಎಬಿವಿಪಿ ವಿಧ್ಯಾರ್ಥಿ ಸಂಘಟನೆಯ ತೀರ್ಥಹಳ್ಳಿ ಘಟಕದ ಅಧ್ಯಕ್ಷನೂ ಕೂಡ ಇದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು ಎಂದು ಎನ್ ಎಸ್ ಯು ಐ ಸಂಘಟನೆಯ ನಾಯಕರು ಶನಿವಾರ ಡಿವೈಎಸ್ ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಕೆ ಮಾಡಿದೆ.
'ಯುವತಿಯರಿಗೆ ಸಂಘಟನೆಯ ಸದಸ್ಯತ್ವದ ಆಮಿಷ ತೋರಿಸಿ, ವೀಡಿಯೋ ಮಾಡಿ ದೇಹದ ನಗ್ನ ದೃಶ್ಯಗಳನ್ನು ಅಶ್ಲೀಲವಾಗಿ ಚಿತ್ರಿಸಿ ವೈರಲ್ ಮಾಡುವ ಬೆದರಿಕೆ ಒಡ್ಡಿ ಬ್ಲಾಕ್‌ಮೇಲ್ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಇದೊಂದು ಸಮಾಜ ತಲೆತಗ್ಗಿಸುವ ಪ್ರಕರಣವಾಗಿದ್ದು, ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನೆಡಸಬೇಕು' ಎಂದು ಒತ್ತಾಯಿಸಲಾಗಿದೆ.
'ಈ ರೀತಿಯ ಪ್ರಕರಣ ಮುಂದುವರಿದರೆ ಮರ್ಯಾದಸ್ಥ ಕುಟುಂಬದ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಬರುವುದು ಕಷ್ಟ ಸಾಧ್ಯವಾಗಲಿದ್ದು ಪೋಲೀಸ್ ಇಲಾಖೆ ಪ್ರಭಾವಿಗಳ ಪ್ರಭಾವಕ್ಕೆ ಮಣಿಯದೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎನ್ ಎಸ್ ಯು ಐ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಅಮರಾನಾಥ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಸುಜಿತ್ ಸಾಲಿಯನ್, ಅಶ್ವಲ್ ಗೌಡ ಶರತ್ ಮಾಳೂರು ಸೇರಿದಂತೆ ಅನೇಕರು ಇದ್ದರು.





