ವಾಮಂಜೂರು: ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿಯಿಂದ ತುರ್ತು ಸಭೆ

ವಾಮಂಜೂರು: ಇಲ್ಲಿನ ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿಯು ಓಂಕಾರನಗರ ಪರಿಸರದಲ್ಲಿ ಶನಿವಾರ ಸಂಜೆ ತುರ್ತು ಸಭೆ ನಡೆಸಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಅವರು ಪ್ರತಿಭಟನೆಯ ಬಳಿಕ ಎಲ್ಲಾ ಸಾಧಕ ಬಾಧಕಗಳ ಕುರಿತು ಸಭೆಗೆ ವಿವರಿಸಿದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ನೂತನವಾಗಿ ನೇಮಕ ಗೊಂಡಿರುವ ಜಿಲ್ಲಾಧಿಕಾರಿಗೆ ಈ ಮೊದಲು ಸಲ್ಲಿಸಿದ್ದ ವಿವರಗಳನ್ನು ಮನವರಿಕೆ ಮಾಡಲು ತೀರ್ಮಾನಿಸಲಾಯಿತು. ಹಿಂದಿನ ಜಿಲ್ಲಾಧಿಕಾರಿ ರವಿಕುಮಾರ್ ಅವರು ಆದೇಶಿಸಿದ್ದ ಆದೇಶವನ್ನು ಉಲ್ಲಂಘಿಸಿದ ವೈಟ್ ಗ್ರೋ ಫ್ಯಾಕ್ಟರಿ ವಿರುದ್ಧ ಪ್ರತಿಭಟನೆಯ ನಂತರದ ದಿನಗಳಲ್ಲಿಯೂ ಸ್ಥಳೀಯರು ದಿನದ 24 ಗಂಟೆಯೂ ಕಾವಲು ಕಾಯುವ ಪರಿಸ್ಥಿತಿ ಎದುರಾಗಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜೊತೆಗೆ ಪ್ರತಿಭಟನೆಯ ಸಂಪೂರ್ಣ ಮಾಹಿತಿಯನ್ನು ಹೋರಾಟ ಸಮಿತಿಯ ನಿಯೋಗ ನೂತನ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಗಮನಸೆಳೆಯಲು ನಿರ್ಧರಿಸಲಾಯಿತು.
ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ಓಂ ಪ್ರಕಾಶ್ ಶೆಟ್ಟಿ, ರಿಯಾಝ್ ವಾಮಂಜೂರು, ಸ್ಥಳೀಯ ಮುಖಂಡರಾದ ರಾಜಕುಮಾರ್ ಶೆಟ್ಟಿ, ಜಯಂತಿ ಕೆಲ ರೈ ಕೋಡಿ , ಜಯರಾಮ್ ಕೊಟ್ಟಾರಿ, ರಾಜೇಶ್ ಕೊಟ್ಟಾರಿ, ವಿಕ್ಟರ್ ಸ್ಟಾನಿ ಕುಟಿನೋ, ಅನಿಲ್ ರೈ, ಶ್ರೀನಿವಾಸ್ ಮಲ್ಲೂರು, ಮೋಹನ್ ದಾಸ್, ಮೋಹನ್ ದಾಸ್ ಶೆಟ್ಟಿ, ಡಾ. ಕಾರ್ತಿಕ್, ಪದ್ಮನಾಭ ಆಳ್ವ, ಹರಿಪ್ರಸಾದ್ ಆಳ್ವ, ಕ್ಯಾರೋನ್ ಡಿಸೋಜಾ, ಜನಾರ್ದನ ಸುವರ್ಣ, ಬಾಲಕೃಷ್ಣ, ಶೇಖರ್ ಪೂಜಾರಿ, ರಘು ಸಾಲ್ಯಾನ್, ನಾಗೇಶ್ ಕೋಟ್ಯಾನ್, ಅಬ್ದುಲ್ ರಝಾಕ್, ಕರ್ಮಿನ ಲೋಬೊ, ಹೇಮಾ ಕುಲಾಲ್, ಜೆ ಕಬ್ ಝಕರಿಯಾ, ಅಮರ್ ಆಳ್ವ, ನಿಶಾ ಶೆಟ್ಟಿ, ಇಂತಿಯಾಝ್, ಅಶೋಕ್ ಶೆಟ್ಟಿ, ರವಿ ಓಂಕಾರ್ ನಗರ್, ಶಹಜ್, ಸ್ಮಿತಾ ಓಂಕಾರ ನಗರ, ಜಯಪ್ರಭಾ ಕುಲಾಲ್ ಹಾಗೂ ಹೋರಾಟ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಲಕ್ಷ್ಮಣ್ ಶೆಟ್ಟಿಗಾರ್ ಸ್ವಾಗತಿಸಿದರು.