ಉಕ್ರೇನ್ ನೇಟೊ ಸೇರ್ಪಡೆಗೆ ಸುಲಭ ಮಾರ್ಗವಿಲ್ಲ: ಬೈಡನ್

ವಾಷಿಂಗ್ಟನ್: ನೇಟೊ ಮಿಲಿಟರಿ ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆಗೊಳ್ಳಲು ಅಮೆರಿಕ ಯಾವುದೇ ವಿಶೇಷ ವ್ಯವಸ್ಥೆಯನ್ನು ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶನಿವಾರ ಹೇಳಿದ್ದಾರೆ.
ಎಲ್ಲರಿಗೂ ಅನ್ವಯಿಸುವ ಮಾನದಂಡ ಅವರಿಗೂ ಅನ್ವಯಿಸುತ್ತದೆ. ಅವರು ಅದನ್ನು ಪಾಲಿಸಲೇ ಬೇಕಾಗುತ್ತದೆ. ಆದ್ದರಿಂದ ಅವರಿಗೆ(ಉಕ್ರೇನ್ಗೆ) ಯಾವುದೇ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ವಾಷಿಂಗ್ಟನ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಬೈಡನ್ ಹೇಳಿದ್ದಾರೆ.
Next Story