ಉತ್ತರಪ್ರದೇಶ: ಉಷ್ಣ ಮಾರುತದಿಂದ ಕನಿಷ್ಠ 34 ಜನರ ಸಾವು

ಲಕ್ನೋ: ಕಳೆದೆರಡು ದಿನಗಳಲ್ಲಿ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ತೀವ್ರ ಉಷ್ಣ ಮಾರುತದಿಂದಾಗಿ ಅನಾರೋಗ್ಯಕ್ಕೆ ತುತ್ತಾದ ಕನಿಷ್ಠ 34 ಜನರು ಮೃತಪಟ್ಟಿದ್ದಾರೆ. ಹೆಚ್ಚಿನವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಅತಿಯಾದ ತಾಪಮಾನದಿಂದಾಗಿ ಜನರು ಚಿಕಿತ್ಸೆಗಾಗಿ ಜಿಲ್ಲಾ ಸರಕಾರಿ ಆಸ್ಪತೆಗೆ ದಾಖಲಾಗುತ್ತಿದ್ದಾರೆ. ಜೂ.15ರಂದು 23 ಮತ್ತು ಜೂ.16ರಂದು 11 ಸಾವುಗಳು ವರದಿಯಾಗಿವೆ.
ಆಸ್ಪತ್ರೆಗೆ ದಾಖಲಾಗಿದ್ದ ಹೆಚ್ಚಿನವರು ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಬಲಿಯಾ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದರು. ಇಡೀ ಉತ್ತರ ಪ್ರದೇಶವು ಬಿಸಿಗಾಳಿಯಿಂದ ತತ್ತರಿಸಿದ್ದು,42 ಡಿ.ಸೆ.ನಿಂದ 47 ಡಿ.ಸೆ.ವರೆಗೆ ತಾಪಮಾನ ದಾಖಲಾಗಿದೆ. ಆಗಾಗ್ಗೆ ವಿದ್ಯುತ್ ಕಡಿತಗೊಳ್ಳುತ್ತಿರುವುದು ಜನರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.
Next Story





