ಇಂಡೋನೇಶ್ಯ ಓಪನ್: ಸಾತ್ವಿಕ್- ಚಿರಾಗ್ ಫೈನಲ್‌ಗೆ

ಜಕಾರ್ತ: ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೊರಿಯಾದ ಮಿನ್ ಯುಕ್ ಕಾಂಗ್ ಹಾಗೂ ಸೆವುಂಗ್ ಜಾ ಸೆವೊರನ್ನು ಹಿಮ್ಮೆಟ್ಟಿಸಿ ಇಂಡೋನೇಶ್ಯ ಓಪನ್ ವರ್ಲ್ಡ್ ಟೂರ್ ಸೂಪರ್-1000 ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
ಶನಿವಾರ ಒಂದು ಗಂಟೆ, 7 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ 7ನೇಶ್ರೇಯಾಂಕದ ಭಾರತದ ಜೋಡಿ ಶ್ರೇಯಾಂಕ ರಹಿತ ಕೊರಿಯಾ ಜೋಡಿಯನ್ನು 17-21, 21-19, 21-18 ಗೇಮ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನೊಂದಿಗೆ ಭಾರತೀಯ ಜೋಡಿ ಯು ಕಾಂಗ್ ಹಾಗೂ ಸೆವೊ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 3-2 ಮುನ್ನಡೆ ಸಾಧಿಸಿದೆ.
ಇದೇ ಮೊದಲ ಬಾರಿ ವರ್ಲ್ಡ್ ಟೂರ್ ಸೂಪರ್-1000 ಟೂರ್ನಿಯಲ್ಲಿ ಫೈನಲ್‌ಗೆ ತಲುಪಿರುವ ವಿಶ್ವದ ಆರನೇ ರ್ಯಾಂಕಿನ ಸಾತ್ವಿಕ್ ಹಾಗೂ ಚಿರಾಗ್ ಮತ್ತೊಂದು ಸೆಮಿಫೈನಲ್‌ನಲ್ಲಿ ಜಯ ಸಾಧಿಸಲಿರುವ ಇಂಡೋನೇಶ್ಯದ ಪ್ರಮುದ್ಯ ಕುಸುಮವರ್ದನ ಹಾಗೂ ಯೆರೆಮಿಯಾ ಎರಿಚ್ ಯಾಕಬ್ ಅಥವಾ ಮಲೇಶ್ಯದ ಆ್ಯರೊನ್ ಚಿಯಾ ಹಾಗೂ ವೂ ಯಿಕ್ ಸೊಹ್‌ರನ್ನು ಎದುರಿಸಲಿದ್ದಾರೆ.