Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಣಿಪುರ ಭಾರತದ ಭಾಗವೇ?, ಹೌದಾಗಿದ್ದರೆ,...

ಮಣಿಪುರ ಭಾರತದ ಭಾಗವೇ?, ಹೌದಾಗಿದ್ದರೆ, ಪ್ರಧಾನಿ ಯಾಕೆ ಮೌನ?: ದಿಲ್ಲಿಯಲ್ಲಿ ಮಾಜಿ ಸಿಎಂ ಇಕ್ರಂ ಒಬೋಬಿ ವಾಗ್ದಾಳಿ

ಮಣಿಪುರದ ನಿಯೋಗಕ್ಕೆ ಪ್ರಧಾನಿ ಭೇಟಿಗೆ ಇನ್ನೂ ದೊರೆಯದ ಅವಕಾಶ

17 Jun 2023 11:43 PM IST
share
ಮಣಿಪುರ ಭಾರತದ ಭಾಗವೇ?, ಹೌದಾಗಿದ್ದರೆ, ಪ್ರಧಾನಿ ಯಾಕೆ ಮೌನ?: ದಿಲ್ಲಿಯಲ್ಲಿ ಮಾಜಿ ಸಿಎಂ ಇಕ್ರಂ ಒಬೋಬಿ ವಾಗ್ದಾಳಿ
ಮಣಿಪುರದ ನಿಯೋಗಕ್ಕೆ ಪ್ರಧಾನಿ ಭೇಟಿಗೆ ಇನ್ನೂ ದೊರೆಯದ ಅವಕಾಶ

ಹೊಸದಿಲ್ಲಿ, ಜೂ.17: ಪ್ರಧಾನಿ ನರೇಂದ್ರ ಮೋದಿ,  ಒಂದು ವೇಳೆ ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿರುತ್ತಿದ್ದರೆ ಅವರು ಮೇ 3ರಿಂದ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಕಳವ ವ್ಯಕ್ತಪಡಿಸುತ್ತಿದ್ದರು ಎಂದು ಮಣಿಪುರದ ಮಾಜಿ ಮುಖ್ಯಮಂತ್ರಿ, ಓಕ್ರಾಂ ಇಬೊಬಿ ಸಿಂಗ್ ಪ್ರಶ್ನಿಸಿದ್ದಾರೆ.

ಪ್ರಧಾನಿ ಭೇಟಿಗಾಗಿ ಹೊಸದಿಲ್ಲಿಗೆ ಆಗಮಿಸಿದ ಮಣಿಪುರದ 10 ಪಕ್ಷಗಳ ನಿಯೋಗದ ಸದಸ್ಯರಲ್ಲೊಬ್ಬರಾದ ಇಕ್ರಂ ಒಬೋಬಿ ಸಿಂಗ್ ಎಐಸಿಸಿ ಮುಖ್ಯಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.   ಜೂನ್ 12ರಂದು ಪ್ರಧಾನಿ ಭೇಟಿಗೆ ಅವಕಾಶ ನೀಡುವಂತೆ ನಿಯೋಗವು ಕೋರಿತ್ತಾದರೂ, ಶನಿವಾರದವರೆಗೂ ಅದು ಸಾಧ್ಯವಾಗಿಲ್ಲ ಎಂದವರು ತಿಳಿಸಿದರು.

ಕಾಂಗ್ರೆಸ್, ಜೆಡಿಯು,ಸಿಪಿಐ,ಸಿಪಿಎಂ, ಆರ್ಎಸ್ಪಿ,ಅಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ತೃಣಮೂಲ ಕಾಂಗ್ರೆಸ್,ಶಿವಸೇನಾ (ಯುಬಿಟಿ), ಆಮ್ ಆದ್ಮಿ ಪಾರ್ಟಿ ಹಾಗೂ ಎನ್ಸಿಪಿಯ ಮಣಿಪುರ ಘಟಕಗಳ ಅಧ್ಯಕ್ಷರು ನಿಯೋಗದಲ್ಲಿದ್ದಾರೆ.

‘‘ಮೇ 3ರಿಂದೀಚೆಗೆ ಮಣಿಪುರ ಹೊತ್ತಿ ಉರಿಯುತ್ತದ್ದು, ಈಗಲೂ ಅದು ಮುಂದುವರಿದಿದೆ. ಪ್ರತಿ ದಿನವೂ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಕೇಂದ್ರ ಸಚಿವ ಆರ್.ಕೆ.ರಂಜನ್ ನಿವಾಸದ ಮೇಲೂ ದಾಳಿ ನಡೆದಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 20 ಸಾವಿರ ಮಂದಿ ಆಶ್ರಯ ಪಡೆದಿರುವ ಪರಿಹಾರ ಶಿಬಿರಗಳಲ್ಲಿ ಶೋಚನೀಯ ಪರಿಸ್ಥಿತಿಯಿದೆ. ಆದರೆ ಈವರೆಗೂ  ಪ್ರಧಾನಿಯವರು ಮಣಿಪುರ ಬಗ್ಗೆ ಏನೂ ಮಾತನಾಡುತ್ತಿಲ್ಲ. ‘‘ಮಣಿಪುರವು ಭಾರತದ ಭಾಗವೇ ಅಥವಾ ಅಲ್ಲವೇ? ಎಂಬ ಪ್ರಶ್ನೆ ನಮ್ಮಲ್ಲಿ (ಮಣಿಪುರದ ಜನರಲ್ಲಿ) ಮೂಡುತ್ತದೆ. ಒಂದು ವೇಳೆ ಅದು ಭಾರತದ ಭಾಗವಾಗಿದ್ದಲ್ಲಿ, ಪ್ರಧಾನಿಯವರು ಕನಿಷ್ಠ ಪಕ್ಷ ಟ್ವೀಟ್ ಮೂಲಕವಾದರೂ ಏನನ್ನಾದರೂ ಅಭಿವ್ಯಕ್ತಗೊಳಿಸಬೇಕಿತ್ತು.’’ ಎಂದು ಒಬೋಬಿ ಹೇಳಿದ್ದಾರೆ.

ನಿಯೋಗವು ಮನವಿಪತ್ರವೊಂದನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಅದನ್ನು ಪ್ರಧಾನಿಗೆ ಸಲ್ಲಿಸುವ ಭರವಸೆ ಹೊಂದಿದೆ ಎಂದು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ‘‘ಪರಿಸ್ಥಿತಿಯನ್ನು ರಾಜಕೀಯಗೊಳಿಸುವ ಉದ್ದೇಶದಿಂದ ನಾವಿಲ್ಲಿಗೆ ಬಂದಿಲ್ಲ. ಸಾಧ್ಯವಾದಷ್ಟು ಬೇಗನೇ ಶಾಂತಿಯನ್ನು ಪುನರ್ಸ್ಥಾಪಿಸುವಂತೆ ಕೋರಲು ಮಾತ್ರವೇ ಬಂದಿದ್ದೇವೆ. ದಯವಿಟ್ಟು ನಮಗೆ ನೆರವಾಗಿ. ಶಾಂತಿಯನ್ನು ಮರುಸ್ಥಾಪನೆಯಾದ ಆನಂತರವಷ್ಟೇ ಮುಂದಿನ ಹೆಜ್ಜೆಯಿಡಬಹುದಾಗಿದೆ ಹಾಗೂ ಉಭಯ ಸಮುದಾಯಗಳ ನಡುವೆ ಮಾತುಕತೆಗೆ ಉಪಕ್ರಮಿಸಬೇಕಾಗಿದೆ’’ ಎಂದರು.

ಮಣಿಪುರದಲ್ಲಿ ಶಾಂತಿ,ಸುವ್ಯವಸ್ಥೆಯನ್ನು  ಪುನರ್ಸ್ಥಾಪನೆಗಾಗಿ ಯಾವಕ್ರಮಗಳನ್ನು  ಕೈಗೊಳ್ಳಬೇಕೆಂಬುದನ್ನು ಕೇಂದ್ರ ಸರಕಾರವೇ ನಿರ್ಧರಿಸಲಿ ಎಂದು ಓಬೋಬಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಣಿಪುರದಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಜೈರಾಮ್ ರಮೇಶ್ ಮಾತನಾಡಿ, ನಿಖರವಾಗಿ 22 ಹಿಂದೆ, ಅಂದರೆ 2001ರ  ಜೂನ್ 18ರಂದು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ವಿಧಾನಸಭಾ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲಾಗಿತ್ತು.  ಆಗ ಮಣಿಪುರದ ಸರ್ವ ಪಕ್ಷ ನಿಯೋಗವು ,  ಪ್ರಧಾನಿ ವಾಜಪೇಯಿ ಅವರ ಭೇಟಿಗೆ ಅವಕಾಶ ಕೋರಿತ್ತು.  ಆರು ದಿನಗಳೊಳಗೆ ಅವರಿಗೆ ಅವಕಾಶ ದೊರೆತಿತ್ತು.ನಿಯೋಗವು ಆ ಸಮಯದಲ್ಲಿ ಪ್ರಧಾನಿ ಮನವಿಪತ್ರ ಸಲ್ಲಿಸಿತ್ತು ಹಾಗೂ ರಾಜ್ಯದ ಸನ್ನಿವೇಶದ ಬಗ್ಗೆ ವಿವರಿಸಿತ್ತು. ಆಗ ಮಣಿಪುರದ ಜನತೆ ಶಾಂತಿ ಮರುಸ್ಥಾಪನೆಗಾಗಿ ಆಡಳಿತದೊಂದಿಗೆ ಶ್ರಮಿಸಬೇಕೆಂದು ವಾಜಪೇಯಿ ಮನವಿ ಮಾಡಿದ್ದರು ಎಂದು ನೆನಪಿಸಿಕೊಂಡರು.

share
Next Story
X