ಶಿಮ್ಲಾದ ಜೈನ ಮಂದಿರದಲ್ಲಿ ತುಂಡು ಬಟ್ಟೆ ಧರಿಸುವ ಭಕ್ತರಿಗೆ ಪ್ರವೇಶ ನಿಷೇಧ
ಶಿಮ್ಲಾ (ಹಿಮಾಚಲ ಪ್ರದೇಶ): ಹಿಂದೂ ಸಂಸ್ಕೃತಿಯ ಶಿಸ್ತು, ಸಜ್ಜನಿಕೆ ಹಾಗೂ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿ ದೇಗುಲದ ಅಧಿಕಾರಿಗಳು ಶಿಮ್ಲಾದ ಶತಮಾನಗಳಷ್ಟು ಹಳೆಯದಾದ ಜೈನ ದೇವಾಲಯಕ್ಕೆ ತುಂಡು ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಶ್ರೀ ದಿಗಂಬರ ಜೈನ ಸಭಾವು ನಡೆಸುತ್ತಿರುವ ಈ ಜನಪ್ರಿಯ ದೇವಾಲಯವು ಜೈನ ಸಮುದಾಯಕ್ಕೆ ಸೇರಿದ್ದಾಗಿದೆ. ದೇವಾಲಯದ ಆಡಳಿತ ಮಂಡಳಿಯು ಇತ್ತೀಚೆಗೆ ದೇವಾಲಯದ ಹೊರಗೆ ಹೊಸ ಡ್ರೆಸ್ ಕೋಡ್ ಅನ್ನು ಉಲ್ಲೇಖಿಸಿ ನೋಟೀಸ್ ಅನ್ನು ಹಾಕಿದೆ.
ಎಲ್ಲಾ ಮಹಿಳೆಯರು ಹಾಗೂ ಪುರುಷರು ಯೋಗ್ಯವಾದ ಬಟ್ಟೆಗಳನ್ನು ಧರಿಸಿ ದೇವಾಲಯಕ್ಕೆ ಬರಬೇಕು, ತುಂಡು ಬಟ್ಟೆ, ಹಾಫ್ ಪ್ಯಾಂಟ್ ಗಳು , ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸೂಟ್, ಹರಿದ ಜೀನ್ಸ್, ಫ್ರಾಕ್ ಹಾಗೂ ತ್ರೀ ಕ್ವಾರ್ಟರ್ ಜೀನ್ಸ್ ಇತ್ಯಾದಿಗಳನ್ನು ಧರಿಸಿದವರು ದೇವಾಲಯದ ಆವರಣದ ಹೊರಗೆ ಮಾತ್ರ ಪೂಜೆ ಸಲ್ಲಿಸಬೇಕು. ಇಂತಹ ಉಡುಪು ಧರಿಸಿರುವ ಜನರ ಪ್ರವೇಶವನ್ನು ನಾವು ನಿಷೇಧಿಸಿದ್ದೇವೆ ಎಂದು ಶಿಮ್ಲಾದ ಶ್ರೀ ದಿಗಂಬರ ಜೈನ ಸಭಾದಿಂದ ಜೈನ ಮಂದಿರದ ಹೊರಗೆ ಅಂಟಿಸಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ.
"ಮಹಿಳೆಯರಲ್ಲಿ ಬದಲಾಗುತ್ತಿರುವ ಫ್ಯಾಷನ್ ಆದ್ಯತೆಗಳು ಮತ್ತು ಹಿಂದೂ ಸಮಾಜದಲ್ಲಿನ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭ್ಯತೆ, ಶಿಸ್ತು ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಬೇಕು. . ಪಾಶ್ಚಿಮಾತ್ಯ ಪದ್ಧತಿ ಮತ್ತು ಸಂಸ್ಕೃತಿಯ ಒಳಹರಿವು ನಮ್ಮ ಧಾರ್ಮಿಕ ಮೌಲ್ಯಗಳನ್ನು ನಾಶಪಡಿಸುತ್ತಿದೆ'' ಎಂದು ಶಿಮ್ಲಾದ ಜೈನ ದೇವಾಲಯದ ಅರ್ಚಕ ಪಂಡಿತ್ ಸಂಜಯ್ ಕುಮಾರ್ ಜೈನ್ ಹೇಳಿದ್ದಾರೆ.