ಆ್ಯಶಸ್ ಸರಣಿ: ಆಸ್ಟ್ರೇಲಿಯ 386 ರನ್‌ಗೆ ಆಲೌಟ್
ಬರ್ಮಿಂಗ್‌ಹ್ಯಾಮ್: ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಅವರ 15ನೇ ಶತಕದ(141 ರನ್, 321 ಎಸೆತ, 14 ಬೌಂಡರಿ, 3 ಸಿಕ್ಸರ್)ಸಹಾಯದಿಂದ ಆಸ್ಟ್ರೇಲಿಯ ತಂಡ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ 386 ರನ್‌ಗೆ ಆಲೌಟಾಯಿತು. ಕೇವಲ 7 ರನ್ ಹಿನ್ನಡೆ ಕಂಡಿತು.
ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮೊದಲು ತನ್ನ 2ನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ 35 ರನ್ ಮುನ್ನಡೆಯಲ್ಲಿದೆ.
ಇಂಗ್ಲೆಂಡ್ ಪರ ರಾಬಿನ್ಸನ್(3-55) ಹಾಗೂ ಸ್ಟುವರ್ಟ್ ಬ್ರಾಡ್(3-68)ತಲಾ 3 ವಿಕೆಟ್ ಪಡೆದರು. ಮೊಯಿನ್ ಅಲಿ(2-147) ಎರಡು ವಿಕೆಟ್ ಪಡೆದರು.
ಆಸೀಸ್ ಪರ ಅಲೆಕ್ಸ್ ಕಾರೆ(66 ರನ್), ಟ್ರಾವಿಸ್‌ಹೆಡ್(50 ರನ್), ಗ್ರೀನ್(38 ರನ್) ಹಾಗೂ ಕಮಿನ್ಸ್(38 ರನ್)ಉಪಯುಕ್ತ ಕೊಡುಗೆ ನೀಡಿದರು.
Next Story





