ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಶ್ರೀಶಂಕರ್ ಅರ್ಹತೆ

ಭುವನೇಶ್ವರ: ಕೇರಳದ ಮುರಳಿ ಶ್ರೀಶಂಕರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್-ರಾಜ್ಯ ಅತ್ಲೆಟಿಕ್ಸ್ ಕೂಟದ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ 8.41 ಮೀ.ದೂರ ಜಿಗಿದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡರು.
ರವಿವಾರ ನಡೆದ ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ ಶ್ರೀಶಂಕರ್ ಈ ದೂರವನ್ನು ಕ್ರಮಿಸಿದರು. ಹಂಗೇರಿಯದ ಬುಡಾಪೆಸ್ಟ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ
ನಿಗದಿಪಡಿಸಿರುವ ಅರ್ಹತಾ ಮಾರ್ಕ್ 8.25 ಮೀ. ಆಗಿದೆ.
24 ವರ್ಷದ ಶ್ರೀಶಂಕರ್ ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ಇದಾಗಿದೆ. ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ಟಿನ್ ಅಲ್ಡ್ರಿನ್(8.42 ಮೀ.)ಅವರ ಸಾಧನೆ ಸರಿಗಟ್ಟುವ ಅವಕಾಶವನ್ನು ಕೇವಲ 1 ಸೆಂ.ಮೀ. ಅಂತರದಿಂದ ಕಳೆದುಕೊಂಡರು.
Next Story





