ಪುದುಚೇರಿಯಲ್ಲಿ ಜುಲೈ 24ರಿಂದ ದೇವಧರ್ ಟ್ರೋಫಿ

ಮುಂಬೈ: ಕೋವಿಡ್-19ನಿಂದಾಗಿ ನಾಲ್ಕು ವರ್ಷಗಳ ನಂತರ ನಡೆಯುತ್ತಿರುವ ದೇವಧರ್ ಟ್ರೋಫಿಗೆ ಪುದುಚೇರಿ ಆತಿಥ್ಯವಹಿಸಲಿದೆ.
ಅಂತರ್-ವಲಯ ಏಕದಿನ ಸ್ಪರ್ಧಾವಳಿಯು ಜುಲೈ 24ರಿಂದ ಆಗಸ್ಟ್ 3ರ ತನಕ ನಡೆಯಲಿದೆ.
ಮೊಹಾಲಿಯು ಅಕ್ಟೋಬರ್ 31ರಿಂದ ನವೆಂಬರ್ 6ರ ತನಕ ನಡೆಯುವ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳ ಆತಿಥ್ಯವಹಿಸಲಿದೆ.
ಇರಾನಿ ಕಪ್ ಅಕ್ಟೋಬರ್ 1ರಿಂದ 5ರ ತನಕ ಸೌರಾಷ್ಟ್ರ ಹಾಗೂ ರೆಸ್ಟ್ಆಫ್ ಇಂಡಿಯಾ ತಂಡಗಳ ನಡುವೆ ರಾಜ್ಕೋಟ್ನಲ್ಲಿ ನಡೆಯಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನ ವೇಳೆ ರಾಜ್ಕೋಟ್ ಯಾವುದೇ
ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂದು ವರದಿಯಾಗಿದೆ.
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)2023-24ರ ಸಾಲಿನ ದೇಶೀಯ ಕ್ರಿಕೆಟ್ ಋತುವಿನ ಸಂಪೂರ್ಣ ವೇಳಾಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ದಿನಾಂಕಗಳು, ಸ್ಥಳಗಳು ಹಾಗೂ ಗ್ರೂಪ್ಗಳನ್ನು ವೇಳಾಪಟ್ಟಿಯಲ್ಲಿ ನಮೂದಿಸಲಾಗಿದೆ.
ಈ ಮೊದಲೇ ವರದಿಯಾದಂತೆ ರಣಜಿ ಟ್ರೋಫಿಯು ಮುಂದಿನ ವರ್ಷದ ಜನವರಿ 5ರಂದು ಆರಂಭವಾಗಲಿದೆ. 70 ದಿನಗಳ ಕಾಲ ನಡೆಯುವ ರಣಜಿ ಟೂರ್ನಿಯು ಮಾರ್ಚ್ 14ರಂದು ಕೊನೆಯಾಗಲಿದೆ. ಲೀಗ್ ಹಂತವು ಫೆಬ್ರವರಿ 19ರಂದು ಮುಕ್ತಾಯವಾಗಲಿದ್ದು, ನಾಕೌಟ್ ಹಂತದ ಪಂದ್ಯಗಳು ಫೆಬ್ರವರಿ 23ರಿಂದ ಆರಂಭವಾಗಲಿದೆ.
ಸಯ್ಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಸ್ಪರ್ಧಾವಳಿಯು ಅಕ್ಟೋಬರ್ 16ರಿಂದ ನವೆಂಬರ್ 6ರ ತನಕ ನಡೆಯಲಿದೆ. ಆ ನಂತರ ವಿಜಯ ಹಝಾರೆ ಟ್ರೋಫಿ 50 ಓವರ್ಗಳ ಚಾಂಪಿಯನ್ಶಿಪ್ ನವೆಂಬರ್ 23ರಿಂದ ಡಿಸೆಂಬರ್ 15ರ ವರೆಗೆ ನಡೆಯಲಿದೆ.





