ಜೂನ್ 29ರಂದು ಈದುಲ್ ಅಝ್ ಹಾ: ಉಳ್ಳಾಲ ಖಾಝಿ

ಉಳ್ಳಾಲ, ಜೂ.19: ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನ ಜೂ.18(ರವಿವಾರ)ರಂದು ಮುಸ್ಸಂಜೆ ಆಗಿರುವ ಯಾವುದೇ ಮಾಹಿತಿ ಲಭ್ಯವಾಗದಿರುವ ಕಾರಣ ಜೂ.20(ಮಂಗಳವಾರ)ರಂದು ದುಲ್ಹಜ್ 1 ಆಗಿರುತ್ತದೆ. ಆದ್ದರಿಂದ ಜೂ.29 (ಗುರುವಾರ)ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ತಿಳಿಸಿದ್ದಾರೆ ಎಂದು ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.
Next Story