ರಾಹುಲ್ ಗಾಂಧಿ ಹುಟ್ಟು ಹಬ್ಬ; ಶುಭ ಹಾರೈಸಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಹುಲ್ ಗಾಂಧಿ ಅವರು 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವು ರಾಜಕೀಯ ಮುಖಂಡರು ಶುಭ ಕೋರಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
'ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದು ದೇಶಾದ್ಯಂತ ಸೌಹಾರ್ದತೆಯ ಸಿಹಿ ಹಂಚಿ ಭಾರತೀಯರ ಮನಸ್ಸುಗಳನ್ನು ಜೋಡಿಸುತ್ತಿರುವ ಭವಿಷ್ಯದ ಭರವಸೆಯ ಆಶಾಕಿರಣ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಯಕ ರಾಹುಲ್ ಗಾಂಧಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸೈದ್ದಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದೆಂಬ ನಂಬಿಕೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರು ಮತ್ತು ಕಾರ್ಯಕರ್ತರಿಗೆ ಆದರ್ಶವಾಗಲಿ. ನಿಮ್ಮ ಚಿಂತನೆಯ ಮುನ್ನೋಟ ಮತ್ತು ಮಾರ್ಗದರ್ಶನ ನಮಗೆ ಸದಾ ಲಭಿಸಲಿ' ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
'ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾಂವಿಧಾನಿಕ ಮೌಲ್ಯಗಳಿಗೆ ನಿಮ್ಮ ಅಚಲ ಬದ್ಧತೆ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಅದಮ್ಯ ಧೈರ್ಯ ಮೆಚ್ಚುವಂತದ್ದು. ಸಹಾನುಭೂತಿ ಮತ್ತು ಸಾಮರಸ್ಯದ ಸಂದೇಶ ಹರಡುವುದನ್ನು ಮುಂದುವರಿಸಿ. ನಿಮ್ಮ ಸಂದೇಶ ಲಕ್ಷಾಂತರ ಭಾರತೀಯರ ಧ್ವನಿಯಾಗಲಿ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
'ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವೆಯಲ್ಲಿ ನಿಮ್ಮ ಸಮರ್ಪಣೆ ಮತ್ತು ಬದ್ಧತೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಪ್ರಸಕ್ತ ವರ್ಷ ನಿಮಗೆ ಅಪಾರ ಸಂತೋಷ, ಉತ್ತಮ ಆರೋಗ್ಯ ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ನಿಮಗೆ ಹೆಚ್ಚಿನ ಶಕ್ತಿ ದೊರೆಯಲಿ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
Warm birthday greetings to Shri @RahulGandhi.
— Mallikarjun Kharge (@kharge) June 19, 2023
Your unflinching commitment to Constitutional values and your indomitable courage in the face of adversity is admirable.
May you continue speaking truth to power and be the voice of millions of Indians, while spreading the message…
ಎಐಸಿಸಿಯ ಮಾಜಿ ಅಧ್ಯಕ್ಷರು, ದೇಶದ ಭರವಸೆಯ ನಾಯಕರಾದ ನಮ್ಮ ಹೆಮ್ಮೆಯ @RahulGandhi ಅವರಿಗೆ ಜನ್ಮದಿನದ ಶುಭಕಾಮನೆಗಳು.
— B Z Zameer Ahmed Khan (@BZZameerAhmedK) June 19, 2023
ರಾಹುಲ್ ಗಾಂಧಿ ಅವರ ಸೈದ್ಧಾಂತಿಕ ಬದ್ಧತೆ, ಸೌಹಾರ್ದ ಸಮಾಜ ನಿರ್ಮಾಣದೆಡೆಗಿನ ತುಡಿತ, ಜನಪರ ಕಾಳಜಿ ನನ್ನಂತ ಅಸಂಖ್ಯ ಜನರಿಗೆ ಸ್ಪೂರ್ತಿ.
ದೇವರು ತಮಗೆ ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/PrgYxGvO28
ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆದು ದೇಶಾದ್ಯಂತ ಸೌಹಾರ್ದತೆಯ ಸಿಹಿ ಹಂಚಿ ಭಾರತೀಯರ ಮನಸ್ಸುಗಳನ್ನು ಜೋಡಿಸುತ್ತಿರುವ ಭವಿಷ್ಯದ ಭರವಸೆಯ ಆಶಾಕಿರಣ ಮತ್ತು ನಮ್ಮೆಲ್ಲರ ಹೆಮ್ಮೆಯ ನಾಯಕ @RahulGandhi ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
— Siddaramaiah (@siddaramaiah) June 19, 2023
ನಿಮ್ಮ ಸೈದ್ದಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ದ್ವೇಷವನ್ನು ಪ್ರೀತಿಯಿಂದ… pic.twitter.com/cumbaNvvmt
Sending warmest birthday wishes to Sri @RahulGandhi.
— DK Shivakumar (@DKShivakumar) June 19, 2023
Your dedication and commitment to public service is truly inspiring.
May this year bring you immense happiness, good health and more strength to bring positive change.#HappyBirthdayRahulGandhi pic.twitter.com/y0rG9NrfE6







