ಜೂ.29ರಂದು ಈದುಲ್ ಅಝ್ ಹಾ: ದ.ಕ. ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್

ಮಂಗಳೂರು, ಜೂ.19: ರವಿವಾರ(ಜೂ.18) ದುಲ್ಹಜ್ ತಿಂಗಳ ಚಂದ್ರದರ್ಶನವಾದ ಬಗ್ಗೆ ಯಾವುದೇ ಮಾಹಿತಿ ಇರದ ಕಾರಣ ಜೂ.20ರಂದು ದುಲ್ಹಜ್ 1 ಆಗಿರಲಿದೆ. ಅದರಂತೆ ಜೂ.28 ಬುಧವಾರ ಅರಫಾ ದಿನ ಹಾಗೂ ಜೂ.29 ಗುರುವಾರ ಈದುಲ್ ಅಝ್ ಹಾ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಹೇಳಿದ್ದಾರೆ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story