ದುಬೈ: ಮೂಳೂರು ಜಮಾತ್ ವೆಲ್ಫೇರ್ ಫೋರಮ್ ನೂತನ ಅಧ್ಯಕ್ಷರಾಗಿ ಇಲ್ಯಾಸ್ ಉಮ್ಮರ್

ಉಡುಪಿ, ಜೂ.19: ಸಮಾಜ ಸೇವಾ ಸಂಸ್ಥೆ ಮೂಳೂರು ಜಮಾತ್ ವೆಲ್ಫೇರ್ ಫೋರಮ್ ಇದರ 5ನೇ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಸ್ಥೆಯ ಅಧ್ಯಕ್ಷ ಉಮ್ಮರ್ ಮೂಳೂರು ಇವರ ದುಬೈ ನಿವಾಸದಲ್ಲಿ ಜರಗಿತು.
ಈ ಸಂದರ್ಭದಲ್ಲಿ 2023 -2024 ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ರಾಗಿ ಎಂ.ಈ.ಮೂಳೂರು, ಅಧ್ಯಕ್ಷರಾಗಿ ಇಲ್ಯಾಸ್ ಉಮ್ಮರ್ ಮೂಳೂರು, ಉಪಾಧ್ಯಕ್ಷರುಗಳಾಗಿ ನವೀದ್, ಇಬ್ರಾಹಿಂ ಕಲತೂರು, ಪ್ರಧಾನ ಕಾರ್ಯದರ್ಶಿಯಾಗಿ ಜಮಾಲ್ ಮೂಳೂರು, ಜೊತೆ ಕಾರ್ಯದರ್ಶಿಯಾಗಿ ಸಮದ್ ಬೀರಾಲಿ, ಔಸಾಫ್ ಅಹ್ಮದ್ ಮೂಳೂರು, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಬಾಬಾ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ರಶೀದ್ ಮಹಮೂದ್, ಪ್ರಧಾನ ಸಲಹೆಗಾರರಾಗಿ ಯೂಸುಫ್ ಉಮ್ಮರ್ ಮೂಳೂರು, ಸಲಹಾ ಮಂಡಳಿ ಸದಸ್ಯರುಗಳಾಗಿ ಎಂ.ಈ.ಉಸ್ಮಾನ್, ಬಾವಾ ಮೂಸಬ್ಬ, ಅಬ್ದುಲ್ ರಹ್ಮಾನ್ ಮಹಮೂದ್, ಮುಹಮ್ಮದ್ ದಾವೂದ್, ಬಾರೂದ್ ಇಸ್ಮಾಯಿಲ್, ಅಬ್ದುಲ್ ಹಮೀದ್ ಉಮ್ಮರ್, ಸಂಚಾಲಕರು ಗಳಾಗಿ ಶಾಬಾನ್ ಅಬ್ದುಲ್ ರಜಾಕ್, ನೌಫಾಲ್, ಮೊಹಮದ್ ಅತೀಫ್ ಆಯ್ಕೆಯಾದರು.
ಅಧ್ಯಕ್ಷ ಇಲ್ಯಾಸ್ ಉಮ್ಮರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಎಂ.ಈ.ಮೂಳೂರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಾಸ್ಟರ್ ಉಮ್ಮರ್ ಬಿನ್ ಅಬ್ದುಲ್ ಹಮೀದ್ ಕಿರಾತ್ ಪಠಿಸಿದರು.
ಉಸ್ತಾದ್ ಮುಹಮ್ಮದ್ ಇಬ್ರಾಹಿಂ ಸಖಾಫಿ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಳತೂರು ಸ್ವಾಗತಿಸಿದರು. ಪ್ರತಿಭಾನ್ವಿತ ಮಾಸ್ಟರ್ ಉಮ್ಮರ್ ಅಬ್ದುಲ್ ಹಮೀದ್ ಅವರನ್ನು ಸನ್ಮಾನಿಸಲಾ ಯಿತು. ಇಬ್ರಾಹಿಂ ಕಲತೂರು ವಂದಿಸಿದರು.